Advertisement

ಸಂಸ್ಕೃತಿ; ಜೀವನಶೈಲಿ ನಿರ್ದೇಶಿಸುವ ಕಲೆ

11:23 PM Mar 04, 2021 | Team Udayavani |

ಹೆಚ್ಚಿನ ಜನರಿಗೆ ಸಂಸ್ಕೃತಿ ಎಂದರೇ ಏನೆಂದೇ ಗೊತ್ತಿಲ್ಲ….ಹೀಗೆ ಹೇಳಿದರೇ ಹಲವಾರು ಜನರಿಗೆ ಕೋಪ ಬರಬಹುದು.  ಆದರೇ ಇದು ಸರ್ವಕಾಲಿಕ ಸತ್ಯ. ಯಾಕೆಂದರೆ ಜನ ರೇಷನ್‌ ಬದಲಾದಂತೆ ಸಂಸ್ಕೃತಿಯೂ ಬದಲಾಗುತ್ತಲೇ ಇರುತ್ತದೆ. ಇದನ್ನು ಒಪ್ಪದವರು ಮಾತ್ರ ನಮ್ಮ “ಸಂಸ್ಕೃತಿ’ ನಾಶ ಆಯಿತು ಎಂದು ಬೊಬ್ಬೆ ಹೊಡೆಯುತ್ತಾರೆ.

Advertisement

ಹೆಚ್ಚಿನವರಿಗೆ ಸಂಸ್ಕೃತಿ ಮತ್ತು ಸಂಪ್ರದಾಯ ಎರಡರ ವ್ಯತ್ಯಾಸವೂ ಗೊತ್ತಿಲ್ಲ. ಸಂಪ್ರದಾಯವನ್ನು  ಸಂಸ್ಕೃತಿ ಒಟ್ಟಿಗೆ ತಳಕು ಹಾಕಿ, ಭಾರತೀಯ ಪರಂಪರೆಯನ್ನು ಅವಹೇಳನ ಮಾಡುತ್ತಿ ರುವುದು ಅಸಹನೀಯ…

ಮೊದಲು ಸಂಸ್ಕೃತಿಯ ಆರಂಭ ಯಾವಾಗ ಆಗಿದ್ದು ಎನ್ನುವುದನ್ನು ಅವಲೋಕಿಸೋಣ. ಮನುಷ್ಯ ಸಮುದಾ ಯದತ್ತ ಜೀವನ ಪ್ರಾರಂಭ ಮಾಡಿದಾಗ ಮುಕ್ತ ಸಮಾಜದ ಅನಾವರಣದಿಂದ ಬದಲಾವಣೆ ಬಯಸಿ ಮಾಡಿಕೊಂಡ ಬದಲಾವಣೆಯ ಕಣಜವನ್ನು “ಸಂಸ್ಕೃತಿ’ ಎನ್ನಬಹುದು. ನಿಮಗೆ ಈಗ ಓದುವಾಗ ಹೊಸದೊಂದು ಭಾವನೆ ಸಂಸ್ಕೃತಿಯ ಪರಿಕಲ್ಪನೆಗೆ ಬಂದಿದ್ದರೇ ಇದೇ ಸಂಸ್ಕೃತಿಯ ಉಚ್ಛ್ರಾಯ ಸ್ಥಿತಿ.

ಅನಂತರ ಬರುವುದೇ ಸಂಸ್ಕೃತಿಯ ಅನಾವರಣ… ಭಾಷೆ, ಧರ್ಮ, ಸಾಮಾಜಿಕ ಕರ್ತವ್ಯ ಮತ್ತು ಬದ್ಧತೆ, ಸಂಗೀತ, ಕಲೆ ಸಾಹಿತ್ಯ, ಇವುಗಳು ಕಾಲಕ್ಕೆ ತಕ್ಕಂತೆ ಬದಲಾದಾಗ ಮಾತ್ರ ಸಂಸ್ಕೃತಿ ಅನಾವರಣಗೊಳ್ಳುತ್ತದೆ.

ಬಾಲಗಂಗಾಧರ ತಿಲಕ್‌ ಅವರು 1892ರಲ್ಲಿ “The orion, or researches into the antiquity  Vedas’ ಎಂದು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಅವರನ್ನು ಬ್ರಿಟಿಷ್‌ ಪತ್ರಕರ್ತರು ಕೇಳಿದಾಗ ಹೇಳಿದ್ದರು. ಅದರರ್ಥ ಸಂಸ್ಕೃತಿ ಭಾರತದಲ್ಲಿ ವೇದಗಳಲ್ಲಿ ಅಡಗಿದೆ. ಅದನ್ನು ಎಷ್ಟೇ ಸಂಶೋಧನೆ ಮಾಡಿದರೂ ಹೊಸ ಹೊಸ ರೀತಿಯಲ್ಲಿ ಹೊರಬರುತ್ತದೆ.

Advertisement

ಭೌಗೋಳಿಕವಾಗಿ ನೋಡುವುದಾ ದರೂ ಮನುಷ್ಯನ  ಇತಿಹಾಸದಂತೆಯೇ ಸಂಸ್ಕೃತಿಯೂ ಬದಲಾಗುತ್ತ ಬೆಳೆಯು ತ್ತಲೇ ಹೋಗುತ್ತದೆ. ಭಾರತೀಯ ಸಂಸ್ಕೃತಿ ವೇದಗಳಲ್ಲಿ ಅಡಗಿದೆ, ಎಂಬುದು ನಮ್ಮ ಇತಿಹಾಸ ತಜ್ಞರ ಅಭಿಪ್ರಾಯ. ಆದರೆ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಸ್ಕೃತಿ ಅಲ್ಲಿಯ ಭೌಗೋಳಿಕ ಸನ್ನಿವೇಶ, ಪ್ರದೇಶಗಳು, ಸಿದ್ಧಾಂತಗಳು, ಜೀವನಕ್ರಮವನ್ನು ಅವಲಂಬಿಸಿದೆ ಎಂಬುದು ಫೆಡ್ರಿಕ್‌ ರಾಟ್ಜೆಲ್‌ ಮತ್ತು ಹಾರ್ಲಪೋರ್ಡ ಮ್ಯಾಕಂರ್ಡ ಅಭಿಪ್ರಾಯಪಟ್ಟಿದ್ದಾರೆ.

ಹಾಗಾಗಿಯೇ ಅಲ್ಲಿಯ ಸಂಸ್ಕೃತಿ ಸಾಧಾರಣವಾಗಿ ಒಂದೇ ಸಿದ್ಧಾಂತದ ಅಡಿಯಲ್ಲಿ ಬರದಿದ್ದರೂ ಜೀವನ ಕ್ರಮ ಮಾತ್ರ ಒಂದೇ ರೀತಿ ಕಂಡುಬರುತ್ತದೆ. ಆದರೆ ಭಾರತೀಯ ಸಂಸ್ಕೃತಿಯನ್ನು ಅಭ್ಯಸಿಸಿದರೆ “ಆರ್ಯಾಸ್‌’ ಮತ್ತು “ಆರ್ಟಿಕ್‌’ ಎಂದು ಬೇರೆ ಬೇರೆ ಯಾಗಿ ಪ್ರಸ್ತುತಪಡಿಸಿದ್ದಾರೆ.  ” ಶ್ರೀ ಅರಬಿಂದೊ ಪ್ರಕಾರ ಜೈವಿಕವಾಗಿಯೂ ಆಸ್ಟ್ರೋಲಿಜಿಕಲ್‌ ಆಗಿಯೂ ವೈಜ್ಞಾನಿಕ ವಾಗಿಯೂ ಸಹ ಭಾರತದ ಸಂಸ್ಕೃತಿ ಪ್ರಪಂಚದ ಬೇರೆಲ್ಲ ಸಂಸ್ಕೃತಿಗಿಂತಲೂ ವಿಭಿನ್ನವಾಗಿ ಕಾಣುತ್ತದೆ.

ಅಂದರೆ ನಲವತ್ತು ಲಕ್ಷ ವರ್ಷಗಳ ಹಿಂದೆಯೇ ಸಮಾಜ ಹೇಗಿರುತ್ತದೆ ಎಂಬ ಕಲ್ಪನೆ ಭಾರತೀಯರಿಗಿತ್ತು. ಇದಕ್ಕೆ ಮೂಲ ಕಾರಣ ವೇದಗಳಲ್ಲಿರುವ ಅಂಶಗಳು. ನಾಲ್ಕೂ ವೇದಗಳಲ್ಲಿನ ಸಾಮಾನ್ಯ ಗುಣಗಳನ್ನು ಜನರು ತಮ್ಮದಾಗಿಸಿ

ಕೊಳ್ಳುತ್ತ ಹೋದಾಗ ಶಂಕರ, ಮಧ್ವÌ ಹಾಗೂ ರಾಮಾನುಜ ಆಚಾರ್ಯರು ತಮ್ಮ ತಮ್ಮ ಜೀವಿತಾವಧಿಯಲ್ಲಿ ಹೇಗೆಲ್ಲ ನಾವು ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು ಎಂಬುದನ್ನು ಹೇಳಿದ್ದರು.

ಮೊತ್ತಮೊದಲಾಗಿ ನಾವು ಸಂಸ್ಕೃತಿ ಮತ್ತು ಸಂಪ್ರದಾಯದ ನಡುವಿನ ಸೂಕ್ಷ್ಮ ಅಂತರವನ್ನು ಅರಿತುಕೊಳ್ಳಬೇಕು. ಹೀಗೆ ಬದಲಾದ ಸಂಸ್ಕೃತಿ ಹಾಗೂ ಈಗ ನಾವು ಹೇಳುತ್ತಿರುವ ಸಂಪ್ರದಾಯ ಎರಡನ್ನು ತಳಕು ಹಾಕಿ ನೋಡುವ ಮನೋಭಾವ ಹೋಗಬೇಕು. ಆಗಲೇ ನಮ್ಮ ಭಾರತೀಯ ಸಂಸ್ಕೃತಿ ನಮಗೆ ಸರಿಯಾಗಿ ಅರ್ಥ ಆಗುವುದು.

 

ಶಾರದಾ ಭಟ್‌, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next