Advertisement

ಎಪ್ರಿಲ್‌ನಿಂದ ಕರಾವಳಿಯಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಯೋಜನೆ ಜಾರಿ

09:57 AM Mar 12, 2020 | mahesh |

ಸುರತ್ಕಲ್‌: ರಾಜ್ಯದ ಕರಾವಳಿ ಭಾಗದಲ್ಲಿರುವ ಸಮಗ್ರ ಜೀವ ವೈವಿಧ್ಯ ವನ್ನು ಸಂರಕ್ಷಿಸಿ, ನಿರ್ವಹಣೆಯ ಉದ್ದೇಶವ ನ್ನಿ ಟ್ಟುಕೊಂಡು ಹೊಸ ಬೃಹತ್‌ ಯೋಜನೆ ಇಂಟಗ್ರೆಟೆಡ್‌ ಕೋಸ್ಟಲ್‌ ಝೋನ್‌ ಮ್ಯಾನೇಜ್‌ ಮೆಂಟ್‌ ಪ್ರಾಜೆಕ್ಟ್ (ಐಸಿಝ ಡ್‌ಎಂಪಿ)ಯನ್ನು ರಾಜ್ಯ ಸರ ಕಾರದ ಅರಣ್ಯ ಸಚಿವಾಲಯದ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ರೂಪಿಸಿದ್ದು, ಪ್ರಥಮ ಹಂತದ ಪ್ರಾಜೆಕ್ಟ್ ಕಾಮಗಾರಿ ಎಪ್ರಿಲ್‌ ನಿಂದ ಆರಂಭವಾಗಲಿದೆ. ನಾಲ್ಕು ವರ್ಷ ಗಳ ಯೋಜನೆ ಇದಾಗಿದ್ದು, 2024ಕ್ಕೆ ಅಂತ್ಯಗೊಳ್ಳಬೇಕಿದೆ.

Advertisement

ಒಟ್ಟು 310 ಕೋಟಿ ರೂ. ಯೋಜನೆ ಇದಾಗಿದ್ದು, ಶೇ.50ರಷ್ಟು ವಿಶ್ವಬ್ಯಾಂಕ್‌, ಶೇ.30ರಷ್ಟು ಕೇಂದ್ರ ಹಾಗೂ ಶೇ.20ರಷ್ಟು ರಾಜ್ಯ ಸರಕಾರ ಅನುದಾನ ಒದಗಿಸಲಿದೆ. ಪ್ರಥಮ ಹಂತದಲ್ಲಿ 80 ಕೋಟಿ ರೂ.ವೆಚ್ಚದಲ್ಲಿ ಯೋಜನೆ ಅಸ್ಥಿತ್ವಕ್ಕೆ ಬರಲಿದ್ದು, ನಾಲ್ಕು ಹಂತದಲ್ಲಿ ಜಾರಿಯಾಗಲಿದೆ.

ಏನಿದು ಯೋಜನೆ?
ಇತ್ತೀಚಿನ ದಿನಗಳಲ್ಲಿ ಆಕ್ರಮಣಕ್ಕೆ ಒಳಗಾಗುತ್ತಿರುವ ಸಮುದ್ರ ತೀರದ ಜೀವ ವೈವಿಧ್ಯತೆಗೆ ಸಂರಕ್ಷಿಸಿ ನಿರ್ವಹಣೆ ಮಾಡಿ ಪ್ರಕೃತಿಯನ್ನು ರಕ್ಷಿಸುವ ಯೋಜನೆಯಾಗಿದೆ. ಸಮುದ್ರ ತೀರದಲ್ಲಿನ ಪ್ರಮುಖ ಜೀವ ವೈವಿಧ್ಯ ರಕ್ಷಣೆಗೆ ಬೇಕಾದ ಮರಗಳ ರಕ್ಷಣೆ, ಖನಿಜ ರಕ್ಷಣೆ, ಪ್ರಾಕೃತಿಕ ವ್ಯವಸ್ಥೆಯ ರಕ್ಷಣೆ ಒಂದು ಹಂತವಾದರೆ, ಸಮುದ್ರ ತೀರದಲ್ಲಿ, ನದಿ ಪಾತ್ರಗಳ ಹಾಗೂ ಒರತೆ ಇರುವ ಪ್ರದೇಶದಲ್ಲಿ ಮಾಲಿನ್ಯವಾಗದಂತೆ ಎರಡನೇ ಹಂತದ ಕ್ರಮ. ಮೂರನೇ ಹಂತದಲ್ಲಿ ಪ್ರವಾಸೋಧ್ಯಮಕ್ಕೆ ಒತ್ತು, ಬೀಚ್‌ ಅಭಿವೃದ್ಧಿ, ಮೀನುಗಾರಿಕೆಯ ಜತೆಗೆ ಪರ್ಯಾಯ ಉದ್ಯೋಗಕ್ಕೆ ಒತ್ತು ನೀಡುವ ಯೋಜನೆ.

ಮೂರು ಕೇಂದ್ರೀಕೃತ ಪ್ರದೇಶಗಳಲ್ಲಿ ಮುಖ್ಯವಾಗಿ ಮಂಗಳೂರು, ಉಡುಪಿ- ಕುಂದಾಪುರ, ಕುಮಟ, ಅಂಕೋಲ, ಕಾರವಾರ ಪ್ರದೇಶದಲ್ಲಿ ಯೋಜನೆ ಜಾರಿಯಾಗಲಿದೆ. ಮಂಗಳೂರು ತಾಲೂಕಿನ ಬೈಕಂಪಾಡಿ ಬಗ್ಗುಂಡಿ, ಕುಡುಂಬೂರು ಮತ್ತು ನೀರಿನ ಒರತೆ ಇರುವ ಪ್ರದೇಶದ ನಿರ್ವಹಣೆಗೆ ಒತ್ತು. ಕುದ್ರು ಪ್ರದೇಶಗಳ ಸಂರಕ್ಷಣೆ, ಬೀಚ್‌ ಸ್ವತ್ಛತೆ, ಮಲ್ಪೆಯಲ್ಲಿ ಬೀಚ್‌ ಅಭಿವೃದ್ಧಿ, ಕುಂದಾಪುರದ ಪಂಚಗಂಗಾವಳಿ ಪ್ರದೇಶ, ಅಘನಾಶಿನಿ, ಕಾಳಿ ನದಿ ಪಾತ್ರದ 800 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿರುವ ಕಾಂಡ್ಲಾವನ ನಿರ್ವಹಣೆ ಬೇಕಾದ ಪ್ರಾಜೆಕ್ಟ್, ಮೀನುಗಾರರಿಗೆ ಬೇಕಾದ ದೋಣಿ ಎಳೆಯುವ ಯಂತ್ರ, ಪರ್ಯಾಯ ಜೀವನಾವಶ್ಯಕ ವ್ಯವಸ್ಥೆಗೆ ಅಗತ್ಯ ಯೋಜನೆ ಇದರಲ್ಲಿದೆ.

ಸ್ಟೇಟ್‌ ಪ್ರಾಜೆಕ್ಟ್ ಮಾನಿಟರಿಂಗ್‌ ಯೂನಿಟ್‌ (ಎಸ್‌ಪಿಎಂಯು) ಮೂಲಕ ಈ ಮೆಗಾ ಯೋಜನೆಗೆ ಅನುದಾನ ಬಿಡುಗಡೆಯಾಗಲಿದ್ದು, ಇದರ ಕೇಂದ್ರ ಕಚೇರಿ ಮಂಗಳೂರಿನಲ್ಲಿ ಇರಲಿದೆ. ಮುಖ್ಯ ಕಾರ್ಯದರ್ಶಿಗಳು ಮುಖ್ಯ ಸ್ಥರಾಗಿರುತ್ತಾರೆ. ತಾಂತ್ರಿಕ,ತಜ್ಞರ ಸಮಿತಿ ಇದರಲ್ಲಿ ಇರಲಿದೆ.
ಇದರೊಂದಿಗೆ ಸರಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆ ಇರುವುದರಿಂದ ಮತ್ತು ಪ್ರಾಕೃತಿಕ ವಿಕೋಪ, ಸಮುದ್ರದಲ್ಲಿ ಜಲಚರಗಳ ಸಾವು ಮತ್ತಿತರ ಸಮಸ್ಯೆಗಳ ಸಹಿತ ವಿವಿಧ ಅಡೆತಡೆಗಳ ಬಗ್ಗೆ ಸಮಗ್ರ ಅಧ್ಯಯನಕ್ಕೊಂದು ಏಕಕಿಂಡಿ ವ್ಯವಸ್ಥೆಯುಳ್ಳ ವಿಭಾಗವೊಂದನ್ನು ಸ್ಥಾಪಿಸುವ ಯೋಜನೆ ಒಳಗೊಂಡಿದೆ.

Advertisement

-  ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next