Advertisement

ಜೀವನ ಶೈಲಿಯಲ್ಲಿ ಬದಲಾವಣೆ ….ನಗು ಎಂಬ ಮನೆಮದ್ದು

02:38 PM Jul 01, 2021 | Team Udayavani |

ಸುಂದರ ನಗು ಯಾರ ಮನಸ್ಸನ್ನು ಕೂಡ ಗೆಲ್ಲಬಹುದು ಎಂದು ಎಲ್ಲರು ಬಲ್ಲರು. ಆದರೂ, ಇತ್ತೀಚಿಗೆ ಅದನ್ನು ಮರೆತಿದ್ದೇವೆ. Roy T Bennet ಎಂಬವರು ಹೇಳಿದ್ದಾರೆ, “ನೀವು ಯಾವಾಗ ನಗುವುದನ್ನು ಮರೆಯುತ್ತೀರೋ, ಅಂದು ನೀವು ಜೀವನದ ಜಂಜಾಟಗಳ ನಡುವೆ ದಾರಿ ಕಳೆದುಕೊಳ್ಳುತ್ತೀರಿ. “ ಇದು ಬಹಳ ಸೂಕ್ತ ಹಾಗೂ ನಿಜವಾದ ನುಡಿ. ನಾವು ನಮ್ಮನ್ನು ಕೆಲವೊಂದು ಕಟ್ಟುಪಾಡುಗಳೊಳಗೆ ಕಟ್ಟಿ ಹಾಕಿಕೊಂಡಿದ್ದೇವೆ. ಅದರಲ್ಲೂ, ನಗುವುದನ್ನು ನಾವು ನಮ್ಮ ಜೀವನದಲ್ಲಿ ನಗಣ್ಯಗೊಳಿಸಿದ್ದೇವೆ.

Advertisement

ಇದನ್ನೂ ಓದಿ:ಪುನೀತ್ ಹೊಸ ಚಿತ್ರದ ಟೈಟಲ್ ಲಾಂಚ್..ವಿಭಿನ್ನ ಲುಕ್ ಗೆ ಅಪ್ಪು ಫ್ಯಾನ್ಸ್ ಫಿದಾ

ನಾನಿಂದು, ನಗುವಿನಿಂದ ಆಗುವ ಕೆಲವು ಆರೋಗ್ಯ ಲಾಭಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ :

ನಗು ಎಂಬುದು ಒಂದು ಅಂಟು ರೋಗವಿದ್ದಂತೆ. ನೀವು ಯಾರನ್ನಾದರೂ ನೋಡಿ ಒಂದು ಮುಗುಳ್ನಗೆ ಬೀರಿ ನೋಡಿ, ಅವರು ಅವರೀಗರಿವಿಲ್ಲದೆ ಒಂದು ಮಂದಹಾಸವನ್ನು ಬೀರುತ್ತಾರೆ. ನಮಗರಿವಿಲ್ಲದೆಯೇ, ನಮ್ಮಲ್ಲಿ ಒಂದು ಉಲ್ಲಾಸದ ಚಿಲುಮೆ ಒಡೆಯುತ್ತದೆ. ನಗುವುದರಿಂದ, ಡೋಪಮೀನ್ ಹಾಗೂ ಸೇರಟೋನಿನ್ ಎಂಬ ಎರಡು ನರಪ್ರೇಕ್ಷಕಗಳು ಉತ್ಪತ್ತಿಯಾಗುತ್ತವೆ, ಇದರಿಂದ ನಮ್ಮ ಮನಸ್ಸು ಹಗುರವಾಗಿ, ಹೊಸತನ ಹಾಗೂ ಉಲ್ಲಾಸ ಭರಿತವಾಗುತ್ತದೆ.

*ಸಕರಾತ್ಮ ಮನೋಭಾವ ತಾನಾಗಿಯೇ ನಮ್ಮನಾವರಿಸಿಕೊಳ್ಳುತ್ತದೆ. ಇದರಿಂದ ನಾವು ಮಾಡುವ ಕೆಲಸದಲ್ಲಿ ಉತ್ಪಾದಕತೆ ಹೆಚ್ಚಾಗುತ್ತದೆ.
ಮನಸ್ಸು ಉಲ್ಲಾಸಭರಿತವಾದ ಕಾರಣ, ನಮ್ಮ ರಕ್ತದೊತ್ತಡ ಕಮ್ಮಿಯಾಗುವುದು.

Advertisement

*ಸಂಬಂಧಗಳು ಗಟ್ಟಿಯಾಗುವುದು

*ನಮ್ಮ ಮುಖದಲ್ಲಿ ಚೈತನ್ಯ ಮಿಂಚಿ, ನಮ್ಮ ವಯಸ್ಸು ಕಡಿಮೆಯಾದಂತೆ ಕಾಣುವುದು.

*ಎಂಡೊರಫಿನ್ಸ್ ಎಂಬ ಹಾರ್ಮೋನ್ ಉತ್ಪತ್ತಿಯಾಗುವ ಕಾರಣ, ಸ್ವಲ್ಪ ಮಟ್ಟಿಗೆ ದೈಹಿಕ ನೋವು ಕಮ್ಮಿಯಾಗುವುದು.

ನಗು ಎಂಬುದು ಇತ್ತೀಚೆಗೆ ಬಹಳ ದುರ್ಲಭ. ಜನ ನಗುವುದನ್ನು ಕಡಿಮೆ ಮಾಡಲು ಕೆಲವು ಕಾರಣಗಳು ಏನೆಂದರೆ :

*ಜೀವನಶೈಲಿಯಲ್ಲಿ ಬದಲಾವಣೆ : ಕಡಿಮೆ ನಗುವುದರಿಂದ ನಾವು ಪ್ರಭುದ್ಧರಾಗಿ ಕಾಣುತ್ತೇವೆ ಎಂಬ ನಂಬಿಕೆ

*ಖಿನ್ನತೆ
*ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾ ಅತಿಯಾದ ಬಳಕೆ. ಇದರಿಂದ ನಾವು ಒಂದು ಭ್ರಮಾಲೋಕದಲ್ಲಿ ಇದ್ದು, ಸುತ್ತ ಮುತ್ತ ಇರುವವರೊಂದಿಗೆ ನಾವು ಬೆರೆಯುವುದಿಲ್ಲ.

*ಹಲ್ಲು ಹಾಗೂ ಬಾಯಿಯ ಸ್ವಚ್ಛತೆ ಕಮ್ಮಿ ಇರುವುದು.

ನಾವು ಏನು ಮಾಡಬಹುದು?

*ದಿನದ ಆರಂಭದಲ್ಲಿ, ನಮ್ಮ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ನೆನೆಪಿಸಿಕೊಂಡು ಪ್ರಾರಂಭಿಸುವುದರಿಂದ, ನಮ್ಮಲ್ಲಿ ಹುಮ್ಮಸ್ಸು, ಹೊಸತನ ಹಾಗೂ ನಗು ತಾನಾಗಿಯೇ ಮೂಡುವುದು.

*ರಾತ್ರಿ ಮಲಗುವ ಮೊದಲು, ಇಡೀ ದಿನದಲ್ಲಿ ನಡೆದ ಖುಷಿ ಹಾಗೂ ಧನಾತ್ಮಕ ವಿಚಾರಗಳನ್ನು ಬರೆದಿಟ್ಟು, ಅದನ್ನು ಓದುವುದರಿಂದ ನಮ್ಮಲ್ಲಿ ಅಭಿಲಾಷೆಗಳು ಹಾಗೂ ಜೀವನದಲ್ಲಿ, ನಮ್ಮ ಕೆಲಸಗಳಲ್ಲಿ ನಮ್ಮ ಆಸಕ್ತಿ ಹೆಚ್ಚುವುದು.

*ನಮ್ಮೊಂದಿಗೆ ಕೆಲಸ ಮಾಡುವವರು ಹಾಗೂ ನಮ್ಮ ಆಸುಪಾಸಿನಲ್ಲಿರುವವರೊಂದಿಗೆ ಆತ್ಮೀಯತೆಯಿಂದ ಇರುವುದು ಹಾಗೂ ವೈಮನಸ್ಸು ಇದ್ದಲ್ಲಿ ಮಾತಾಡಿ ಬಗೆಹರಿಸಿಕೊಳ್ಳುವುದು.

ನಮ್ಮ ಜೀವನದಲ್ಲಿ ಸಣ್ಣ ಪುಟ್ಟ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವುದರಿಂದ ನಮ್ಮಲ್ಲಿ ನಗು ಮೂಡಿ, ಚೈತನ್ಯ ಹಾಗೂ ನೆಮ್ಮದಿ ಬರುವುದಾದರೆ, ನಾವದನ್ನು ಸ್ವಾಗತಿಸಿ, ಜೀವನವನ್ನು ಆಸ್ವಾಧಿಸುವುದೇ ಒಳಿತು.

ಡಾ. ಭಾವನಾ. ಎಂ,
ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವೈದ್ಯೆ,
ಸಹಾಯಕ ಉಪನ್ಯಾಸಕಿ – SVYASA,

Advertisement

Udayavani is now on Telegram. Click here to join our channel and stay updated with the latest news.

Next