Advertisement

ಲೆಕ್ಕಾಚಾರವಿಲ್ಲದ ಬದುಕು ಪರಿಪೂರ್ಣವಲ್ಲ: ಮೊಹಮ್ಮದ್‌

11:56 AM Dec 23, 2021 | Team Udayavani |

ಜೇವರ್ಗಿ: ಗಣಿತ ಕೇವಲ ವಿಷಯವಲ್ಲ. ಮಾನವನ ಜನನದಿಂದ ಮರಣದ ವರೆಗೆ ಪ್ರತಿಕ್ಷಣ ಅವಶ್ಯಕವಾಗಿದೆ ಎಂದು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮೊಹಮ್ಮದ್‌ ಅಲ್ಲಾ ಉದ್ದೀನ್‌ ಸಾಗರ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದ ಸಮೀಪವಿರುವ ಕಾಲೇಜಿನಲ್ಲಿ ಎನ್‌ಎಸ್‌ಎಸ್‌ ಘಟಕದ ಸಹಯೋಗದೊಂದಿಗೆ ಬುಧವಾರ ಏರ್ಪಡಿಲಾಗಿದ್ದ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್‌ರ ಜನ್ಮ ದಿನವಾದ “ರಾಷ್ಟ್ರೀಯ ಗಣಿತ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಲೆಕ್ಕವಿದ್ದರೆ ಜೀವನ ಪಕ್ಕ. ಗಣಿತವಿಲ್ಲದ ಜೀವನ ಉಹಿಸಲು ಅಸಾಧ್ಯ. ಲೆಕ್ಕಾಚಾರವಿಲ್ಲದ ಬದುಕು ಪರಿಪೂರ್ಣವಾಗಲಾರದು. ಗಣಿತ ಅಧ್ಯಯನ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು, ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರು.

ಗಣಿತಶಾಸ್ತ್ರ ಉಪನ್ಯಾಸಕಿ ನಯಿಮಾ ನಾಹಿದ್‌ ಮಾತನಾಡಿ, ಗಣಿತ ಜಗತ್ತಿಗೆ ಅನೇಕ ಸಿದ್ಧಾಂತ, ಕಲ್ಪನೆ, ಸೂತ್ರಗಳನ್ನು ನೀಡುವ ಮೂಲಕ ರಾಮಾನುಜನ್‌ ಗಣಿತಶಾಸ್ತ್ರ ಕ್ಷೇತ್ರ ಶ್ರೀಮಂತಗೊಳಿಸಿದ್ದಾರೆ ಎಂದರು. ಎನ್‌ಎಸ್‌ಎಸ್‌ ಅಧಿಕಾರಿ ಎಚ್‌.ಬಿ. ಪಾಟೀಲ, ಉಪನ್ಯಾಸಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next