Advertisement
ಅದೇ ಸಮಯಕ್ಕೆ ಅವನ ಸಾರಥಿಯು ರಥವನ್ನು ಸಿದ್ಧಪಡಿಸಿ ಹೊರಗೆ ಕಾಯುತ್ತಿದ್ದನು. ಅವನ ಸಾರಥಿಯು ಕಾಯುತ್ತಾ ಕಾಯುತ್ತಾ ತಾನೇ ಯೋಚಿಸುತ್ತಾನೆ. ಸಾಮಾನ್ಯವಾಗಿ, ಕೃಷ್ಣ ತತ್‌ಕ್ಷಣ ಬರುತ್ತಾನೆ, ಇಂದು ಅವನು ಇನ್ನೂ ಬಂದಿಲ್ಲ ಯಾಕಿರಬಹುದು ಎಂದು ಯೋಚಿಸಿ ಕೃಷ್ಣನೇನು ಮಾಡುತ್ತಿ¨ªಾನೆಂದು ನೋಡಲು ಒಳಗೆ ಹೋಗುತ್ತಾನೆ. ಸಾರಥಿಯು ಒಳಗೆ ಹೋಗಿ ಕೃಷ್ಣ ಕನ್ನಡಿಯ ಮುಂದೆ ನಿಂತು ತನ್ನನ್ನು ತಾನೇ ಮೆಚ್ಚಿಕೊಳ್ಳುವುದನ್ನು ನೋಡುತ್ತಾನೆ. ಆಗ ನಯವಾಗಿ ಸಾರಥಿಯು, ಇಂದು ಯಾಕೆ ತುಂಬಾ ಅಲಂಕಾರ ಮಾಡುತ್ತಿದ್ದೀರಿ, ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂದು ಪ್ರಶ್ನಿಸುತ್ತಾನೆ.
Related Articles
Advertisement
ಸಂಬಂಧಗಳು ದೀಪದ ಎಣ್ಣೆಯಂತಿರಬೇಕು. ಯಾರೇ ಎಷ್ಟೇ ಬತ್ತಿ ಇಟ್ಟರೂ ಅದು ಬೆಳಗುವಂತಿರಬೇಕು. ಇದು ವಾಟ್ಸ್‌ಆ್ಯಪ್‌ನಲ್ಲಿ ಬಂದಿದ್ದ ಒಂದು ಸುಂದರ ಸಂದೇಶ. ಒಂದು ದೀಪ ಉರಿಯಲು ಎಣ್ಣೆ ಎಷ್ಟು ಅಗತ್ಯವೋ ಬತ್ತಿಯೂ ಕೂಡ ಅಷ್ಟೇ ಮುಖ್ಯವಾದದ್ದು. ಸಂಬಂಧಗಳು ದೀಪ, ಎಣ್ಣೆ, ಬತ್ತಿಯಂತೆ ಸದೃಢವಾಗಿದ್ದರೆ ದೀಪ ಸುಂದರವಾಗಿ ಹೆಚ್ಚು ಹೊತ್ತಿನವರೆಗೂ ಬೆಳಕನ್ನು ಬೀರುತ್ತದೆ. ಎಷ್ಟೇ ಅಡೆತಡೆಗಳು ಎದುರಾದರೂ ಅದನ್ನು ಎದುರಿಸಿ ಹೋರಾಡುತ್ತದೆ. ಅಂತೆಯೇ ನಾವು ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು. ಯಾರು ಏನೇ ಹೇಳಲಿ ನಾವು ಯಾವುದರ ಬಗ್ಗೆಯೂ ಚಿಂತೆ ಮಾಡದೆ ಸುಂದರ ಬದುಕನ್ನು ನಮ್ಮದಾಗಿಸಿಕೊಳ್ಳಬೇಕು. ನಾವು ದೀಪದಂತೆ ಬೆಳಗಿ ಇತರರಿಗೆ ಬೆಳಕನ್ನು ಹಂಚಬೇಕು. – ಉಮೇಶ, ಮಂಗಳೂರು
ಕಾಯುವ ತಾಳ್ಮೆಯಿರಲಿ :
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ, ಮನಸ್ಸಿಗೆ ಹಾಸುಹೊಕ್ಕಾದ ಒಂದು ಮೌಲ್ಯಯುಕ್ತ ಸಂದೇಶ “ಬಾಳಿನಲ್ಲಿ ಯಾವುದು, ಯಾರಿಗೆ, ಯಾವಾಗ ಸೇರಬೇಕು ಎಂದು ವಿಧಿಲಿಖೀತವಾಗಿರುತ್ತದೆಯೋ ಅವಾಗ ತಡವಾದರೂ ಸಹ ಅವರಿಗೆ ಸೇರುತ್ತದೆ’ ಎಂಬುದು. ಅದು ವ್ಯಕ್ತಿಯಾದರೂ ಸರಿ, ವಸ್ತುವಾದರೂ ಸರಿ. ಏಕೆಂದರೆ ಹೆಣ್ಣು, ಹೊನ್ನು, ಮಣ್ಣು ಈ ಮೂರು ಸೇರೋ ಋಣ ಇದ್ದರೆ ಏನೇ ಅಡೆತಡೆಗಳಿದ್ದರೂ ಸೇರೋ ಕಾಲ ಬಂದೇಬರುತ್ತದೆ. ಕಾಯುವ ತಾಳ್ಮೆ ನಮ್ಮದಾಗಿರಬೇಕು. ಮನುಷ್ಯನ ಶ್ರಮ, ನಡತೆ, ಗೌರವಕ್ಕೆ ತಕ್ಕ ಪ್ರತಿಫಲ ಖಂಡಿತಾ ಸಿಗುತ್ತದೆ. ಹಣೆಯಲ್ಲಿ ಬರೆದಂತೆ ಅಗುವುದು ಹೊರತು ನಾವು ಬಾಯಿ ಮಾತಿನಲ್ಲಿ ಹೇಳಿದ ಹಾಗೆ ಯಾವುದು ನಡೆಯಲ್ಲ. ಬಯಸಿದ್ದು ಸಿಗಲ್ಲ ಎಂದು ಕೋಪಿಸಿಕೊಳ್ಳುವುದು ಮೂರ್ಖತನ. ಕಾಯುವ ತಾಳ್ಮೆಯೇ ಇದಕ್ಕೆ ಪರಿಹಾರ.– ಸತೀಶ್ ಬಿಳಿಯೂರು