ಬೆಳಗಾವಿ: ಯೋಗ ಮಾಡುವುದರಿಂದ ಮನುಷ್ಯನ ಜೀವನ ಶೈಲಿ ಬದಲಾವಣೆಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ ಅಲ್ಲದೇ ನಿಗರ್ವಿಯಾಗುತ್ತಾನೆ. ಪ್ರತಿಯೊಬ್ಬ ಭಾರತಿಯನೂ ಯೋಗದ ಮೊರೆ ಹೋಗುವ ಕಾಲ ಬಂದಿದೆ ಎಂದು ಖ್ಯಾತ ನಗೆ ಮಾತುಗಾರ ಗಂಗಾವತಿ ಪ್ರಾಣೇಶ ಹೇಳಿದರು.
ಹುಕ್ಕೇರಿ ತಾಲೂಕಿನ ಹೆಬ್ಟಾಳ ಗ್ರಾಮದ ವಂದೇ ಮಾತರಂ ಯೋಗ ಕೇಂದ್ರದವರು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಮಾಡುವ ವ್ಯಕ್ತಿ ಸಾಧನೆಯತ್ತ ಹೆಜ್ಜೆ ಹಾಕುತ್ತಾನೆ.ಸಾಧನೆ ಮನುಷ್ಯನ ಏಕೈಕ ಗುರಿಯಾಗಿರಬೇಕು. ಸಾಧಕರು ಆಕಾಶದ ನಕ್ಷತ್ರಗಳಾಗುತ್ತಾರೆ ಎಂದರು.
ಜಯಪ್ರಕಾಶ್ ಕರಜಗಿ ಹಾಗೂ ಅಜೇಯ ಸಾರಾಪುರೆಯವರ ಸಾರಥ್ಯದಲ್ಲಿ ನಡೆಯುತ್ತಿರುವ ಈ ಯೋಗ ಕೇಂದ್ರವು ಕರ್ನಾಟಕದಲ್ಲಿ ಶ್ರೇಷ್ಠ ಯೋಗ ಕೇಂದ್ರವಾಗಿ ನಿಲ್ಲುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು. ಯೋಗ ಕೇಂದ್ರದ ಮುಖ್ಯ ಶಿಕ್ಷಕ ಹಾಗೂ ಹಾಸ್ಯ ಕಲಾವಿದ ಅಜೇಯ ಸಾರಾಪುರೆ ಮಾತನಾಡಿ, ಗರ್ವ ಪಡುವ ವ್ಯಕ್ತಿ ತಿಂಗಳಿಗೆ ಒಮ್ಮೆಯಾದರೂ ಸ್ಮಶಾನ ಸುತ್ತಾಡಿ ಬರಬೇಕು. ಏಕೆಂದರೆ ಈ ಭೂಮಿ ಮೇಲೆ ನಾನೇ ಶ್ರೇಷ್ಠ ಎನ್ನುವ ಅನೇಕ ಜನರು ಮಣ್ಣಾಗಿ ಹೋಗಿದ್ದನ್ನು ನೋಡಬಹುದು.ನನಗೆ ಆರೋಗ್ಯದ ಅವಶ್ಯಕತೆ ಇಲ್ಲ ಎನ್ನುವವರು ಆಸ್ಪತ್ರೆಗೆ ಹೋಗಿ ಅಲ್ಲಿರುವ ರೋಗಿಯನ್ನು ಭೇಟಿ ಆಗಿ ಬಂದರೆ ಆರೋಗ್ಯದ ಮಹತ್ವ ತಿಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದರಾದ ಬಸವರಾಜ ಮಹಾಮನಿ, ನರಸಿಂಹ ಜೋಶಿ, ಹಿರಿಯ ಸಾಹಿತಿ ಪ್ರೊ. ಎಲ್. ವಿ. ಪಾಟೀಲ, ರೋಹನ್ ನೇಸರಿ, ಭಾಗ್ಯಶ್ರೀ ಮೊಕಾಶಿ, ವಿಠಲ ಡೊಳ್ಳಿನವರ, ಸುಧಾಕರ್ ಶೆಟ್ಟಿ, ರಾಜು ಸುತಾರ್, ಅಶೋಕ ಖಾನಾಯಿ, ಕಿರಣ್ ನೇಸರಿ, ಖಜಾಂಚಿ ಗುಂಡಪ್ಪ ನಾಯ್ಕಮನಿ, ಕಾಡಪ್ಪಾ ಬಸ್ತವಾಡಿ, ಸಂಗೀತಾ ಗಿಜವನೇ, ರೂಪಾಲಿ ಪಾಟೀಲ, ಸರೋಜಿನಿ ಮಹಾಳಂಕ, ಲಲಿತಾ ಶಿವಾನಂದ ನೇಸರಿ, ಸವಿತಾ ಅಶೋಕ್ ನೇಸರಿ, ವೀನಾ ಎಸ್. ಢಾಂಗೆ, ಸುಪ್ರಿಯಾ ಸಾರಾಪುರೆ, ಗೀತಾ ಬಿದರೊಳಿ, ಸುವರ್ಣ ಪಾಟೀಲ, ಗೀತಾ ಗಾರಡಿ, ಗೀತಾ ಸಂಸುದ್ದಿ, ಶಾಂತಾ ಮಿರ್ಜಿ, ಶುಭಾಂಗಿ ಸುತಾರ್, ಮಂಜುಳಾ ಸುತಾರ್ ಮಂಜುಳಾ ವಾಲಿ, ಡಾ. ಸಾವಿತ್ರಿ ಕರಿಗಾರ ಉಪಸ್ಥಿತರಿದ್ದರು. ರಮೇಶ್ ಮಸರಗುಪ್ಪಿ ನಿರೂಪಿಸಿದರು, ಮಹಾದೇವಿ ಸನ್ನಾಯಕರ ವಂದಿಸಿದರು.