Advertisement

ಹೀಗಿದ್ರೆ ಅನುಮಾನವೇ ಬೇಡ ನೀವು ಸೆಕ್ಸ್ ಗೆ ಅಡಿಕ್ಟ್ ಆಗಿದ್ದೀರಿ ಅಂತರ್ಥ..!

11:41 AM Jan 23, 2021 | Team Udayavani |

‘ಸೆಕ್ಸ್’ ಜೀವನದ ಒಂದು ಭಾಗ. ಆದರೇ, ಅದು ಎಷ್ಟು ಬೇಕು ಅಷ್ಟಿದ್ದರೇ ಮಾತ್ರ ಲೇಸು. ಸೆಕ್ಸ್ ಬಗ್ಗೆ ಅಸಹ್ಯ ಪಡುವ ಅಗತ್ಯವೇ ಇಲ್ಲ. ಯಾಕಂದರೇ, ನಮ್ಮ ಹುಟ್ಟು ಅದರ ಕಾರಣದಿಂದಲೇ. ಅದನ್ನು ನೋಡುವ ದೃಷ್ಟಿ ಬದಲಾಗಬೇಕಿದೆ.

Advertisement

ಒತ್ತಡವನ್ನು ನಿಯಂತ್ರಿಸಲು ಕೆಲವರು ಸಿಗರೇಟ್ ಸೇದುವುದು, ಆಲ್ಕೋಹಾಲ್ ಸೇವಿಸುವುದು, ಸೆಕ್ಸ್ ಬಯಸುವುದು ಸಾಮಾನ್ಯ. ಅವೆಲ್ಲವೂ ನಮ್ಮ ಮಿತಿಯಲ್ಲಿದ್ದರೇ ಆರೋಗ್ಯ ದೃಷ್ಟಿಯಿಂದಲೂ ಉತ್ತಮ. ಇನ್ನು, ಸೆಕ್ಸ್ ನಮ್ಮ ಮಿತಿಮೀರುವುದು ಕೂಡ ಇದೆ. ಹಾಗಾದರೇ, ಸೆಕ್ಸ್ ಗೆ ನೀವು ಅಡಿಕ್ಟ್ ಆಗಿದ್ದೀರಿ ಎನ್ನುವುದಕ್ಕೆ ಈ ಕೆಲವು ಲಕ್ಷಣಗಳು ನಿಮಗೆ ಉತ್ತರಿಸುತ್ತದೆ.

ನೀವು ಸೆಕ್ಸ್ ಗೆ ಅಡಿಕ್ಟ್ ಆಗಿದ್ದೀರಾ, ಎನ್ನುವುದನ್ನು ಸೂಚಿಸುವ ಲಕ್ಷಣಗಳು

ದಾಂಪತ್ಯ ಜೀವನ ಸಂತೋಷವಾಗಿರಲು, ನಿಮ್ಮ ಆರೋಗ್ಯ ಸರಿಯಾಗಿರಲು ಸೆಕ್ಸ್ ತುಂಬಾ ಮುಖ್ಯ ಪಾತ್ರವಹಿಸುತ್ತದೆ.ಆದರೆ, ಕೆಲವೊಮ್ಮೆ ಸೆಕ್ಸ್ ಮಾಡಬೇಕು ಎನ್ನುವ ಆಸೆ ನಿಮ್ಮಲ್ಲಿ ಅತಿಯಾದರೇ ನೀವು ಸೆಕ್ಸ್ ಗೆ ಅಡಿಕ್ಟ್ ಆಗಿ ಬಿಡುತ್ತೀರಿ.

Advertisement

ಆಸೆಗೂ, ಅಡಿಕ್ಷನ್ ಅಥವಾ ಚಟಕ್ಕೂ ಹಲವು ವ್ಯತ್ಯಾಸವಿದೆ. ಮನೋಶಾಸ್ತ್ರದ ಪ್ರಕಾರ ವ್ಯಕ್ತಿ ವಾರದಲ್ಲಿ ಎರಡು ಮೂರು ದಿನ ಸೆಕ್ಸ್ ಬಯಸುವುದು ಸಾಮಾನ್ಯ. ಆದರೆ, ನಿತ್ಯವೂ ನಿಮಗೆ ಸೆಕ್ಸ್ ಮಾಡಬೇಕು ಅಂತನ್ನಿಸಿದರೇ ನೀವು ಸೆಕ್ಸ್ ಗೆ ಅಡಿಕ್ಟ್ ಆಗಿದ್ದೀರಿ ಅನ್ನುವುದಕ್ಕೆ ಅನುಮಾನವೇ ಬೇಡ.

ಇದನ್ನೂ ಓದಿ: ಅವಿಭಜಿತ ಭಾರತದ ಪ್ರಧಾನಿ ನೇತಾಜಿ?

ಹಸ್ತಮೈಥುನ: ದಿನ ನಿತ್ಯವೂ ನೀವು ಒಂದಕ್ಕಿಂತ ಹೆಚ್ಚು ಬಾರಿ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದರೇ, ಸೆಕ್ಸ್  ನಿಮಗೆ ಚಟವಾಗಿ ಮಾರ್ಪಟ್ಟಿದೆ ಎಂದರ್ಥ.

ಹೆಂಡತಿ ಅಥವಾ ಲವರ್ ಗೆ ಗೊತ್ತಾಗದ ಹಾಗೇ ನೀವು ಬೇರೆಯವರ ಜೊತೆ  ಲೈಂಗಿಕ ಸಂಪರ್ಕ ಇಟ್ಟುಕೊಂಡಿದ್ದೀರಿ ಎಂದಾದರೆ ನೀವು ಸೆಕ್ಸ್ ಗೆ ಅಡಿಕ್ಟ್ ಆಗಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.

ಇತರ ವಿಚಾರಗಳಿಗಿಂತ ನಿಮಗೆ ಲೈಂಗಿಕ ವಿಷಯದ ಬಗ್ಗೆ ಹೆಚ್ಚು ಆಲೋಚಿನೆ ಬರುತ್ತಿದ್ದರೇ ಸಂಶಯವೇ ಬೇಕಾಗಿಲ್ಲ. ನೀವು ಸೆಕ್ಸ್ ಅಡಿಕ್ಟೆಡ್.

ಆನ್ ಲೈನ್ ನಲ್ಲಿ ಪೋರ್ನೋಗ್ರಫಿ ವಿಡಿಯೋಗಳನ್ನು ನೀವು ಪದೇ ಪದೇ ವೀಕ್ಷಣೆ ಮಾಡುತ್ತಿದ್ದೀರಿ ಎಂದಾದರೇ ಅದು ನೀವು ಸೆಕ್ಸ್ ಗೆ ಅಡಿಕ್ಟ್ ಆಗಿರುವ ಸೂಚನೆ.

ನಿಮಗೆ 5 ರಿಂದ 10 ನಿಮಿಷಕ್ಕೂ ಹೆಚ್ಚು ಬೇರೆ ವಿಷಯಗಳ ಬಗ್ಗೆ ಏಕಾಗ್ರತೆ ನೀಡಲು ಆಗದೇ, ಯಾವುದಾದರೂ ಹುಡುಗಿಯನ್ನು ನೆನಪಿಸಿಕೊಂಡು ಆಕೆಯ ಜೊತೆ ಸೆಕ್ಸ್ ಮಾಡಬೇಕು ಅಂತನ್ನಿಸಿದರೇ, ಎಚ್ಚರ ನೀವು ಸೆಕ್ಸ್ ಗೆ ಅಡಿಕ್ಟ್ ಆಗಿದ್ದೀರಿ.

ಮನೋವೈದ್ಯರು ಹೇಳುವ ಪ್ರಕಾರ, ನಿಮ್ಮ ಗರ್ಲ್ ಫ್ರೆಂಡ್/ಬಾಯ್ ಫ್ರೆಂಡ್ ನಿಮ್ಮ ಬಳಿ ಕಷ್ಟ ಸುಖ ಹೇಳಿಕೊಳ್ಳುವಾಗ ಕಿರಿಕಿರಿ ಆಗುತ್ತಿದೆಯೇ ? ಅವರ ಬಳಿ ಯಾವಾಗಲೂ ಸೆಕ್ಸ್ ವಿಚಾರಗಳ ಬಗ್ಗೆಯೇ ಮಾತನಾಡಬೇಕನ್ನಿಸುತ್ತಿದ್ದರೇ ? ಇದು ಕೂಡ ಸಂಭೋಗ ಚಟವಾಗಿರುವ ಲಕ್ಷಣ.

ಇದನ್ನೂ ಓದಿ: ಕೋವಿಡ್ ರೂಪಾಂತರಿ ವೈರಸ್ ಹೆಚ್ಚು ಅಪಾಯಕಾರಿ: ಬೋರಿಸ್ ಜಾನ್ಸನ್

Advertisement

Udayavani is now on Telegram. Click here to join our channel and stay updated with the latest news.

Next