ಗುಮ್ಮಟ ನಗರಿ ವಿಜಯಪುರದಲ್ಲಿಕರಕುಶಲ ವಸ್ತುಗಳಿಗೆ ಬರವಿಲ್ಲ. ಬೇರೆ ರಾಜ್ಯಗಳಿಂದ ಅನೇಕ ವ್ಯಾಪಾರಿಗಳು ವಲಸೆ ಬಂದು ಇಲ್ಲಿ ವಸ್ತುಗಳನ್ನು ಮಾರುತ್ತಾ ಜೀವನ ಸಾಗಿಸುತ್ತತ್ತಿದ್ದಾರೆ.
ಅಂಥವರಲ್ಲಿ ಆಂಧ್ರದ ನೆಲ್ಲೂರು ಜಿಲ್ಲೆಯ ಸುಜಾತಕೂಡ ಒಬ್ಬರು. ಈಕೆ, ಗಂಡ ಹಾಗೂ ಪುಟ್ಟ ಮಗುವಿನೊಂದಿಗೆ ನಗರದ ಕೆಂಗಲ್ ಹನುಮಂತರಾಯ ರಂಗಮಂದಿರದ ಬಳಿ ರಸ್ತೆಯ ಪಕ್ಕದಲ್ಲಿ ಗುಡಿಸಿಲು ಹಾಕಿಕೊಂಡು, ವಸ್ತುಗಳನ್ನು ಮಾರಾಟ ಮಾಡುತ್ತಾರೆ. ವರ್ಷಕ್ಕೆ5. ಲಕ್ಷ ರೂ.ಗಳ ಬಂಡವಾಳ ಹಾಕಿ ಆಸ್ಸಾಂನಿಂದ ಬೆತ್ತಗಳನ್ನು ತರಿಸುತ್ತಾರೆ. ಅದರಿಂದ ಸ್ಟೂಲ್, ಟೇಬಲ್ ಮತ್ತು ಇತರೆ ಗೃಹಬಳಕೆ ವಸ್ತುಗಳನ್ನು ತಯಾರಿಸುತ್ತಾರೆ. ಜೊತೆಗೆ ನೆರೆಯ ಆಂಧ್ರ ಪ್ರದೇಶದಿಂದ ಟೇಬಲ್, ಆ್ಯಪಲ್ ಡಿಸೈನ್ ಸೋಫಾ, ಮುಂತಾದ ವಸ್ತುಗಳನ್ನು ತಂದು ಮಾರಾಟ ಮಾಡುತ್ತಾರೆ.
ಬ್ಯುಸಿನೆಸ್‌ನ ಕಾರಣದಿಂದ ಮಂಗಳೂರು, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಸೊಲ್ಲಾಪುರ, ಪುಣೆಗಳಿಗೂ ಹೋಗಿ ಬರುತ್ತಾರೆ. ಬೆತ್ತದಿಂದ ತಯಾರಿಸಿದ ವಸ್ತುಗಳನ್ನು ಸುಲಭವಾಗಿ ಎತ್ತಿಡಬಹುದಾಗಿದೆ. ಇವುಗಳನ್ನು ನೀರು ಹಾಕಿ ಸಹ ತೊಳೆಯಬಹುದು. ಬೇಸಿಗೆ ದಿನದಲ್ಲಿ ದೇಹಕ್ಕೆ ತಂಪು. ಒಳಾಂಗಣ ಹಾಗೂ ಹೊರಾಂಗಣದಲ್ಲಿಯೂ ಇವನ್ನು ಬಳಸಬಹುದಾಗಿದೆ. ಈ ವಸ್ತುಗಳ ಮಾರಾಟದಿಂದ ಎಲ್ಲಾ ಖರ್ಚು ಕಳೆದು ನಮಗೆ ವರ್ಷಕ್ಕೆ50 ಸಾವಿರ ಲಾಭವಾಗುತ್ತದೆ. ಮೂರು ಹೊತ್ತಿನ ಅನ್ನ ಸಂಪಾದನೆಗೆ ಈ ಬ್ಯುಸಿನೆಸ್‌ನಿಂದ ಸಹಾಯವಾಗಿದೆ ಅನ್ನುತ್ತಾರೆ ಸುಜಾತಾ.
ಕಾಂಚನಾ ಬ. ಪೂಜಾರಿ