Advertisement

Methane: ಕರಗಿ ಮೇಲೆ ಹರಿದರೆ ಭೂಮಿಯಲ್ಲಿ ಬದುಕೇ ಕಷ್ಟ!

10:14 PM Dec 21, 2023 | Team Udayavani |

ಓಸ್ಲೋ: ಪ್ರಕೃತಿಯಲ್ಲಿ ಮನುಷ್ಯರಿಗೆ ಸೂಚನೆಯನ್ನೇ ನೀಡದೇ ಕೆಲವು ವಿಕೋಪಗಳಿಗೆ ವೇದಿಕೆ ಸಜ್ಜಾಗುತ್ತಿರುತ್ತದೆ. ಅಂತಹದ್ದೇ ಒಂದು ವಿಕೋಪದ ಬಗ್ಗೆ ನಾರ್ವೆ ಸಮೀಪವಿರುವ ಸ್ವಾಲ್‌ಬಾರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಉತ್ತರಧ್ರುವದಲ್ಲಿರುವ ಸ್ವಾಲ್‌ಬಾರ್ಡ್‌ನಡಿ ಭಾರೀ ಮೀಥೇನ್‌ ಸಂಗ್ರಹವಿದೆ. ಇದು ನಿಧಾನಕ್ಕೆ ಕರಗಿ ಭೂಮಿಯ ಮೇಲಕ್ಕೆ ಬಂದರೆ, ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಉಷ್ಣಾಂಶ ಏರಲಿದೆ. ಆಗ ಬದುಕು ದುಸ್ತರವಾಗಲಿದೆ ಎಂದು ಡಾ.ಥಾಮಸ್‌ ಬರ್ಕಲ್‌ ನೇತೃತ್ವದ ಅಧ್ಯಯನ ಸಮಿತಿ ಹೇಳಿದೆ.

Advertisement

ಸ್ವಾಲ್‌ಬಾರ್ಡ್‌ ಹಿಮಾವೃತವಾಗಿರುವ ಒಂದು ದ್ವೀಪಸಮೂಹ. ಇಲ್ಲಿನ ಭೂಗರ್ಭದಾಳದಲ್ಲಿ ಗಟ್ಟಿಯಾದ ಪರ್ಮಾಫ್ರಾಸ್ಟ್‌ ಪದರವಿದೆ. ಇದರಲ್ಲಿ ಮೀಥೇನ್‌ ಅನಿಲ ಹೆಪ್ಪುಗಟ್ಟಿದೆ. ಸದ್ಯ ಆ ಪದರದಲ್ಲಿ ಮಂಜುಗಡ್ಡೆಯ ಪ್ರಮಾಣ ಜಾಸ್ತಿಯಿರುವುದರಿಂದ ಮೀಥೇನ್‌ ಮೇಲೆ ಬರದಂತೆ ತಡೆದಿದೆ. ಆದರೆ ಜಾಗತಿಕವಾಗಿ ತಾಪಮಾನ ಏರುತ್ತಲೇ ಇದೆ. ಹೀಗಾಗಿ ನಿಧಾನಕ್ಕೆ ಇಲ್ಲಿರುವ ಪರ್ಮಾಫ್ರಾಸ್ಟ್‌ ಪದರ ಕರಗುವ ಭೀತಿಯುಂಟಾಗಿದೆ. ಇನ್ನೂ ಗಮನಿಸಬೇಕಾದ ಸಂಗತಿಯೆಂದರೆ ಪರ್ಮಾಫ್ರಾಸ್ಟ್‌ ಕೇವಲ ಸ್ವಾಲ್‌ಬಾರ್ಡ್‌ನಡಿ ಮಾತ್ರವಿಲ್ಲ, ಉತ್ತರಧ್ರುವದ ಇತರೆ ಪ್ರದೇಶಗಳಲ್ಲೂ ಇದೆ. ಇದೇನಾದರೂ ಕರಗತೊಡಗಿದರೆ, ಮೀಥೇನ್‌ ಮೇಲೆ ಬರುತ್ತದೆ. ಆಗ ಜಾಗತಿಕ ತಾಪಮಾನ ವಿಪರೀತಗೊಳ್ಳಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next