Advertisement

ನಾಲ್ಕರ ನಂಟು ಬಾಳಿನ ಗಂಟು

05:41 AM May 19, 2020 | Lakshmi GovindaRaj |

ಜರ್ಮನಿಯ ಸಾಮ್ರಾಟ ನಾಲ್ಕನೆಯ ಚಾರ್ಲ್ಸ್‌ನಿಗೂ, ನಾಲ್ಕರ ಸಂಖ್ಯೆಗೂ ಒಂದು ಬಗೆಯ ವಿಚಿತ್ರವಾದ ನಂಟು. ಈ ಮಹರಾಯ, ನಾಲ್ಕು ಬಾಗಿಲುಳ್ಳ ಮಹಲಿನಲ್ಲಿ ವಾಸಿಸುತ್ತಿದ್ದ. ಪ್ರತಿ ಮಹಲಿನಲ್ಲೂ ನಾಲ್ಕು ಕೋಣೆಗಳಿದ್ದವು. ಆ ನಾಲ್ಕು  ಕೋಣೆಗಳಲ್ಲೂ ತಲಾ ನಾಲ್ಕು ಕಿಟಕಿಗಳಿದ್ದವು. ದಿನವೂ ಆತ, ನಾಲ್ಕು ಬೇರೆ ಬೇರೆ ಡೈನಿಂಗ್‌ ಟೇಬಲ್‌ಗ‌ಳ ಮೇಲೆ ಕುಳಿತು, ನಾಲ್ಕು ನಮೂನೆ ಅಡುಗೆಯ ಊಟ ಮಾಡುತ್ತಿದ್ದ. ಅಷ್ಟೇ ಅಲ್ಲ, ನಾಲ್ಕು ಬಗೆಯ ಮದ್ಯ ಕುಡಿಯುತ್ತಿದ್ದ!  ಇಷ್ಟು ಸಾಲದೆಂಬಂತೆ, ಪ್ರತಿದಿನ, ನಾಲ್ಕು ಬಗೆಯ ಪೋಷಾಕು ಧರಿಸುತ್ತಿದ್ದ.  ಚಾರ್ಲ್ಸ್ ದೊರೆ ಮತ್ತು ನಾಲ್ಕನೆಯ ಸಂಖ್ಯೆ ಜೊತೆಗಿನ ಸ್ವಾರಸ್ಯಗಳು ಇಷ್ಟಕ್ಕೇ ಮುಗಿಯುವುದಿಲ್ಲ.

Advertisement

ಅವನ ಖಾಸಾ ಕುದುರೆ ಲಾಯದಲ್ಲಿ ನಾಲ್ಕು ಕುದುರೆಗಳಿದ್ದವು.  ಅವನ ಸೈನ್ಯದಲ್ಲಿ ನಾಲ್ಕು ವಿಭಾಗಗಳಿದ್ದವು. ನಾಲ್ಕು ಜನ ಗೌರ್ನರ್‌ಗಳು, ನಾಲ್ಕು ಜನ ಜನರಲ್‌ಗ‌ಳು, ನಾಲ್ಕು ಮಂದಿ ಡ್ನೂಕ್‌ ಮತ್ತು ನಾಲ್ಕು ಮಂದಿ ಕ್ಯಾಪ್ಟನ್‌ಗಳನ್ನ ಆತ ನೇಮಿಸಿಕೊಂಡಿದ್ದ. ಜೀವನವಿಡೀ ಅವನನ್ನು ಮೋಹಿಸಿದ ಈ  ನಾಲ್ಕು, ಆತನ ಸಾವಿನಲ್ಲೂ ಜೊತೆಯಾಯಿತು. ಆತ ಅನಾರೋಗ್ಯಕ್ಕೆ ತುತ್ತಾದಾಗ, ನಾಲ್ಕು ಜನ ವೈದ್ಯರು, ನಾಲ್ಕು ದಿನಗಳ ಕಾಲ, ಆತನನ್ನು ಬದುಕಿಸಲು ಹೋರಾಡಿದರು. ಆದರೆ  ಆತ ನಾಲ್ಕನೆಯ ದಿನ, ನಾಲ್ಕು ಗಂಟೆ ನಾಲ್ಕು ನಿಮಿಷಕ್ಕೆ ಕೊನೆಯುಸಿರೆಳೆದ! ಸಾಯುವ ಮುನ್ನ ಸುತ್ತಲೂ ಇದ್ದವ್ರಿಗೆ, ನಾಲ್ಕು ಸಲ ಗುಡ್‌ ಬೈ ಹೇಳಿದ್ದ!

Advertisement

Udayavani is now on Telegram. Click here to join our channel and stay updated with the latest news.

Next