Advertisement
ಲೈಫ್ ಮಿಷನ್‌ನ ದ್ವಿತೀಯ ಹಂತದಲ್ಲಿ ಮಾತ್ರ 143.08 ಕೋಟಿ ರೂ. ಜಿಲ್ಲೆಯ ಫಲಾನುಭವಿಗಳಿಗೆ ಹಸ್ತಾಂತರಗೊಂಡಿದೆ. ಇದರಲ್ಲಿ ರಾಜ್ಯ ಸರಕಾರದ ಪಾಲು ಎಂಬ ರೀತಿಯಲ್ಲಿ 18.14 ಕೋಟಿ ರೂ., ಸ್ಥಳೀಯಾಡಳಿತ ಸಂಸ್ಥೆಗಳ ಪಾಲು ರೂಪದಲ್ಲಿ 9.01 ಕೋಟಿ ರೂ., ಹುಡ್ಕೊàದಿಂದ 47.44 ಕೋಟಿ ರೂ., ಲೈಫ್-ಪಿ.ಎಂ.ಆರ್.ವೈ. ರೂರಲ್ ಮೂಲಕ 22.75 ಕೋಟಿ ರೂ., ಲೈಫ್-ಪಿ.ಎಂ.ಆರ್.ವೈ. ಅರ್ಬನ್ ಪಾಲು ರೂಪದಲ್ಲಿ 45.73 ಕೋಟಿ ರೂ. ಲಭಿಸಿದೆ.
Related Articles
ಕೇವಲ ಎರಡೂವರೆ ವರ್ಷಗಳ ಅವಧಿಯಲ್ಲಿ ಲೈಫ್ ಮಿಷನ್ ಯೋಜನೆ ನಡೆಸಿದ ಸಾಧನೆ ದಾಖಲೆಯದ್ದು. ಪುಟ್ಟ ಅವಧಿಯಲ್ಲಿ ಜಿಲ್ಲೆಯಲ್ಲಿ 7,903 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಈ ಹಿಂದೆ ವಿವಿಧ ಯೋಜನೆಗಳ ಮೂಲಕ ಆರ್ಥಿಕ ಸಹಾಯ ಲಭಿಸಿದ ಫಲಾನುಭವಿಗಳ ಮನೆಗಳ ಕಾಮಗಾರಿ ಪೂರ್ತೀಕರಣ ಮೊದಲ ಹಂತದಲ್ಲಿ 2017ರ ನವೆಂಬರ್ ತಿಂಗಳಲ್ಲಿ ಆರಂಭಿಸಲಾಗಿತ್ತು. ದ್ವಿತೀಯ ಹಂತದ್ದು 2018ರ ಮಾರ್ಚ್ ತಿಂಗಳಲ್ಲಿ ಜಾಗವಿದ್ದರೂ, ಮನೆಯಿಲ್ಲದ ಮಂದಿಗಾಗಿ ವಸತಿ ನಿರ್ಮಾಣ ನಡೆಸಲಾಗಿತ್ತು. ಮೂರನೇ ಹಂತದಲ್ಲಿ ಜಾಗ, ಮನೆ ಇಲ್ಲದವರಿಗಾಗಿ ಮನೆಗಳ ನಿರ್ಮಾಣ ನಡೆಸಲಾಗುವುದು.
Advertisement
ಲೈಫ್ ಭವನ : ಅರ್ಹ ಫಲಾನುಭವಿಗಳಿಗೆ ಭವನ ನಿರ್ಮಾಣಕ್ಕೆ 4 ಲಕ್ಷ ರೂ. ಆರ್ಥಿಕ ಸಹಾಯ ಒದಗಿಸಲಾಗುತ್ತದೆ. ವಸತಿ ನಿರ್ಮಾಣದ ಪ್ರಗತಿಗನುಸಾರ ಕಂತುಗಳಲ್ಲಿ ಮೊಬಲಗು ವಿತರಿಸಲಾಗುತ್ತದೆ. ಆದರೆ ವಿವಿಧ ಕಾರಣಗಳಿಂದ ಪರಿಶಿಷ್ಟ ಪಂಗಡದ ಮಂದಿಗೆ 6 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುತ್ತದೆ. 12 ವಿಭಿನ ಡಿಸೈನ್‌ಗಳಲ್ಲಿ ಯಾವುದಾದರೊಂದು ಶೈಲಿಯಲ್ಲಿ ಮನೆ ನಿರ್ಮಾಣವನ್ನು ಫಲಾನುಭವಿ ಆಯ್ಕೆಮಾಡಿಕೊಳ್ಳಬಹುದಾಗಿದೆ.
ಪ್ರಗತಿಯಲ್ಲಿ ಮೂರನೇ ಹಂತ ಲೈಫ್ ಮಿಷನ್ ಯೋಜನೆಯ ಮೂರನೇ ಹಂತವಾಗಿರುವ ಜಾಗ, ವಸತಿ ರಹಿತರಿಗೆ ಸೂರು ಒದಗಿಸುವ ಫಲಾನುಭವಿಗಳಿಗೆ ವಸತಿ ಸಮುತ್ಛಯಗಳನ್ನು ನಿರ್ಮಿಸುವ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಪ್ರಗತಿಯಲ್ಲಿವೆ. ಚೆಮ್ನಾಡ್ ಗ್ರಾಮ ಪಂಚಾಯತ್‌ನ ಚಟ್ಟಂಚಾಲ್‌ನಲ್ಲಿ ಪತ್ತೆ ಮಾಡಲಾದ ಜಾಗದಲ್ಲಿ ಪೈಲೆಟ್ ಯೋಜನೆಯಲ್ಲಿ ಅಳವಡಿಸಿ ಫ್ಲಾಟ್ ನಿರ್ಮಾಣ ನಡೆಸಲಾಗುವುದು. ಇದಕ್ಕಿರುವ ಟೆಂಡರ್ ಕ್ರಮಗಳು ಪೂರ್ಣಗೊಂಡಿವೆ. ನೀಲೇಶ್ವರ ನಗರಸಭೆ ವ್ಯಾಪ್ತಿಯ ಕೋಟ್ಟಪುರದಲ್ಲಿ ಪತ್ತೆ ಮಾಡಿರುವ 50 ಸೆಂಟ್ಸ್ ಜಾಗದಲ್ಲಿ ಜಿಲ್ಲೆಯ ಎರಡನೇ ವಸತಿ ಸಮುಚ್ಚಯ ನಿರ್ಮಾಣಕ್ಕೆ ಪ್ರಾರಂಭದ ಕ್ರಮಗಳು ಆರಂಭಗೊಂಡಿವೆ. ಇದಲ್ಲದೆ ಭವನ ಸಮುಚ್ಚಯಕ್ಕಾಗಿ ಗ್ರಾಮ ಪಂಚಾಯತ್, ನಗರಸಭೆಗಳಲ್ಲಿ ಈ ಸಂಬಂಧ ಪರಿಶೀಲನೆ ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಭೂರಹಿತ, ಭವನ ರಹಿತರಾಗಿರುವ 12,081 ಮಂದಿ ಪಟ್ಟಿಯಲ್ಲಿ ಸೇರಿದ್ದು, 8,751 ಫಲಾನುಭವಿಗಳ ಅರ್ಹತಾ ಪರಿಶೀಲನೆಯಲ್ಲಿ 455 ಮಂದಿ ದ್ವಿತೀಯ ಹಂತಕ್ಕೆ ವರ್ಗಾವಣೆಗೊಂಡಿದ್ದಾರೆ. 2,730 ಮಂದಿ ಮೂರನೇ ಹಂತದ ಅರ್ಹರಾಗಿ ಆಯ್ಕೆಯಾಗಿದ್ದಾರೆ. ದುರಂತಗಳ ನಡುವೆಯೂ ಮನೆ ಲಭಿಸಿದ ನೆಮ್ಮದಿ
ದುರಂತಗಳ ಸರಮಾಲೆಯ ನಡುವೆಯೇ ನೊಂದು-ಬೆಂದು ಬದುಕುತ್ತಿರುವ ಉಚ್ಚಿರಿಯಮ್ಮ ಅವರು 90ನೇ ವಯಸ್ಸಿನಲ್ಲಿ ಸ್ವಂತ ಮನೆ ಲಭಿಸಿದ ಸಾರ್ಥಕತೆ ಅನುಭವಿಸುತ್ತಿದ್ದಾರೆ. ಕೋಡೋಂ- ಬೇಳೂರು ಗ್ರಾಮ ಪಂಚಾಯತ್‌ನ ಅಡ್ಕಂ ನಿವಾಸಿ ಉಚ್ಚಿರಿಯಮ್ಮ ಅವರಿಗೆ ಕನಸಾಗಿಯೇ ಉಳಿದಿದ್ದ ಸ್ವಂತ ಮನೆ ಈಗ ನನಸಾಗಿದೆ. ಮೇಲ್ಛಾವಣಿಗೆ ಪ್ಲಾಸ್ಟಿಕ್ ಟರ್ಪಾಲ್ ಹಾಸಿದ ಶಿಥಿಲ ಗುಡಿಸಲಲ್ಲಿ ಅನೇಕ ವರ್ಷಗಳಿಂದ ಯಾತನೆಯೊಂದಿಗೆ ಬದುಕುತ್ತಿದ್ದ ಅವರಿಗೆ ರಾಜ್ಯ ಸರಕಾರದ ಲೈಫ್ ಮಿಷನ್ ಯೋಜನೆ ಮೂಲಕ ಸದೃಢ ಮನೆ ಲಭಿಸಿದೆ. ದೇಹದಲ್ಲಿ ಶಕ್ತಿ ಇರುವಲ್ಲಿಯವರೆಗೆ ಆರಾಧನಾಲಯವೊಂದರಲ್ಲಿ ನೌಕರಿಯಲ್ಲಿದ್ದ ಉಚ್ಚಿರಿಯಮ್ಮ ಅವರಿಗೆ ಇಂದು ವಯೋ ಸಹಜ ಬಳಲಿಕೆ ಮತ್ತು ಅಸೌಖ್ಯಗಳಿಂದ ಕಾಯಕಕ್ಕೆ ತೆರಳಲಾಗುತ್ತಿಲ್ಲ. ಕೌಟುಂಬಿಕವಾಗಿ ಅನೇಕ ಸಮಸ್ಯೆಗಳನ್ನು ಹೊಂದಿರುವ ಅವರಿಗೆ ಮನೆ ಲಭಿಸಿರುವುದು ಸಂಕಷ್ಟಗಳ ನಡುವೆಯೂ ಬದುಕಿನಲ್ಲಿ ನೆಮ್ಮದಿ ಕಾಣುವಂತಾಗಿದೆ. ಸಂತಸ ತಳೆದ ಖದೀಜಾ ಅವರ ಕುಟುಂಬ
ಸತತ 20 ವರ್ಷಗಳ ಬಾಡಿಗೆ ಮನೆಯ ವಾಸಕ್ಕೆ ವಿದಾಯ ಹೇಳಿ ಖದೀಜಾ ಮತ್ತು ನಿಝಾರ್ ದಂಪತಿ ರಾಜ್ಯ ಸರಕಾರ ಒದಗಿಸಿದ ಸೂರಿನಡಿ ನೆಮ್ಮದಿ ಕಾಣುತ್ತಿದ್ದಾರೆ. ಪಳ್ಳಿಕ್ಕರೆ ನಿವಾಸಿ ಖದೀಜಾ ಮತ್ತು ನಿಝಾರ್ ಅವರು ಲೈಫ್ ಮಿಷನ್ ಯೋಜನೆಯ ಮೂಲಕ ಸ್ವಂತ ಮನೆಯನ್ನು ಹೊಂದಿದ್ದಾರೆ. ಇದು ಖದೀಜಾ, ಕೂಲಿ ಕಾರ್ಮಿಕ ನಿಝಾರ್ ಮತ್ತು 9ನೇ ತರಗತಿ ವಿದ್ಯಾರ್ಥಿ ನಿಝಾಮುದ್ದೀನ್ ಅವರಿಗೆ ಅತೀವ ಸಂತಸ ತಂದಿದೆ. ಗೆಳೆಯರನ್ನೆಲ್ಲ ಮನೆಗೆ ಕರೆಸಿ ಹೊಟ್ಟೆ ತುಂಬ ಉಂಡು ಈ ಸಂತೋಷವನ್ನು ಹಂಚಿಕೊಂಡಿದ್ದಾರೆ. ಬಾಡಿಗೆ ಮನೆಯಲ್ಲಿದ್ದ ಖದೀಜಾ ಅವರ ಬಡ ಕುಟುಂಬಕ್ಕೆ ಚಿಕ್ಕ ಪುತ್ರಿ ನಿಷಾಂತ್ ಸಾರಿ ಅವರ ಅಸೌಖ್ಯ ತುಂಬ ಬಸವಳಿಯುವಂತೆ ಮಾಡಿದೆ. ಭಾರೀ ವೆಚ್ಚದಲ್ಲಿ ಚಿಕಿತ್ಸೆ ಅಗತ್ಯವಿದ್ದರೂ, ಇವರ ಕುಟುಂಬಕ್ಕೆ ಅದನ್ನು ಭರಿಸುವ ಶಕ್ತಿ ಇಲ್ಲ. ಕೂಲಿಕಾರ್ಮಿಕ ನಿಝಾರ್ ಅವರ ದುಡಿಮೆ, ಸಮೀಪದ ಮನೆಗಳಲ್ಲಿ ಕೆಲಸ ನಡೆಸಿ ಮನೆ ಮಂದಿಯ ಹೊಟ್ಟೆ ಹೊರೆಯುವಲ್ಲಿ ಖದೀಜಾ ಅವರ ಕಾಯಕ ದೈನಂದಿನ ಖರ್ಚು ವೆಚ್ಚಕ್ಕೇ ಸಾಲುವುದಿಲ್ಲ. ಇಂತಹ ದುಃಸ್ಥಿತಿಯಲ್ಲೂ ಸ್ವಂತದ್ದೊಂದು ಮನೆ ಲಭಿಸಿರುವುದು ಇವರಿಗೆ ಕೊಂಚ ಮಟ್ಟಿಗೆ ಸಾಂತ್ವನ ನೀಡಿದೆ. ಯತ್ನಗಳ ಫಲ
ಗ್ರಾಮ ವಿಸ್ತರಣೆ ಅಧಿಕಾರಿಯಾಗಿದ್ದ ಇಕ್ಬಾಲ್ ಸಹಿತ ಕೆಲವು ಸರಕಾರಿ ಸಿಬಂದಿ ನಡೆಸಿದ ಯತ್ನಗಳ ಫಲವಾಗಿ ಉಚ್ಚಿರಿಯಮ್ಮ ಅವರಿಗೆ ಮನೆ ಲಭಿಸುವಂತಾಗಿದೆ.
-ಮುಸ್ತಫಾ ತಾಯನ್ನುರು,
ಕೋಡೋಂ-ಬೇಳೂರು, ಗ್ರಾಮ ಪಂಚಾಯತ್ ಸದಸ್ಯ