Advertisement

ಪದಕಗಳನ್ನುಉಳಿಸಿದ ರಸಾಯನ!

05:15 PM Mar 02, 2021 | Team Udayavani |

2ನೇ ಮಹಾಯುದ್ಧದ ಕಾಲ. ಪ್ರತಿ ಮನೆಯ ಗೋಡೆಗೂ ನಾಝಿ ಪಡೆ ಕಿವಿಯಿಟ್ಟು ಆಲಿಸುತ್ತಿದ್ದ ಸಮಯ. ಯೆಹೂದಿ ವಿಜ್ಞಾನಿಗಳಿಗೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಾದ ಪರಿಸ್ಥಿತಿ. ಬಹುತೇಕ ಯೆಹೂದಿಗಳು ಬದುಕುಳಿದರೆ ಬೇಡಿ ತಿಂದೇವು ಎನ್ನುತ್ತ ನಾಝಿ ಆಕ್ರಮಿತಜರ್ಮನಿಯಿಂದ ಪರಾರಿಯಾಗಿದ್ದರು. ಹಾಗೆ ಓಡಿಹೋಗುವ ಮಂದಿ ನಾಝಿ ಸೈನಿಕರಿಗೆ ಸಿಕ್ಕಿಬಿದ್ದರೆ ಕಥೆ ಮುಗಿದಂತೆ.

Advertisement

ಅವರಲ್ಲಿದ್ದ ಚಿನ್ನ, ದುಡ್ಡು ಎಲ್ಲವೂ ಲೂಟಿಯಾಗುತ್ತಿತ್ತು. ಸಿಕ್ಕಿಬಿದ್ದವರನ್ನು ಯಾತನಾಶಿಬಿರಗಳಿಗೆ ಕಳಿಸಲಾಗುತ್ತಿತ್ತು. ಅಂಥ ಸಂದಿಗ್ಧದಲ್ಲಿ ಸಿಕ್ಕಿಕೊಂಡ ಇಬ್ಬರು ನೊಬೆಲ್‌ ಪ್ರಶಸ್ತಿ ವಿಜೇತ ವಿಜ್ಞಾನಿಗಳು ನೀಲ್ಸ್‌ಬೋರ್‌ರನ್ನು ಗುಟ್ಟಾಗಿ ಭೇಟಿ ಮಾಡಿ, ತಮ್ಮ ನೊಬೆಲ್‌ ಚಿನ್ನದಪದಕಗಳನ್ನು ಬೋರ್‌ ಕೈಗೆ ಹಸ್ತಾಂತರಿಸಿದರು. ತಮ್ಮ ಬಳಿ ಅವು ಇರುವುದಸುರಕ್ಷಿತವಲ್ಲ ಎಂಬುದೇ ಅವರಿಬ್ಬರ ಅಭಿಪ್ರಾಯವಾಗಿತ್ತು. ಆದರೆ, ಅವನ್ನು ಪಡೆ ಬೋರ್‌ ಗೆ, ಕೆಂಡವನ್ನು ತನ್ನ ಸೆರಗಿನಲ್ಲಿ ಕಟ್ಟಿಕೊಂಡ ಧರ್ಮಸಂಕಟ! ಪದಕಗಳನ್ನು ಸುರಕ್ಷಿತವಾಗಿಡಬೇಕು, ಒಂದಷ್ಟು ವರ್ಷಗಳ ನಂತರ ಕೊಟ್ಟವರಿಗೇ ಹಿಂದಿರುಗಿಸಬೇಕು. ನಾಝಿ ಕಣ್ಣುಗಳಿಂದ ಅವನ್ನು ಬಚ್ಚಿಟ್ಟು ಕಾಪಾಡಬೇಕು. ಮಾಡುವುದೇನು? ವಿಜ್ಞಾನಿ ಬೋರ್‌ಗೆ ಆಗ ನೆರವಾಗಿದ್ದು ರಸಾಯನ ವಿಜ್ಞಾನ ಮತ್ತು ಆತನ ಹಂಗೇರಿಯನ್‌ ರಸಾಯನ ವಿಜ್ಞಾನಿ ಸ್ನೇಹಿತ ಜಾರ್ಜಿ ಡಿ ಹೆವೆಸಿ. ಆಕ್ವಾ ರೆಜಿಯಾ ಎಂಬುದು ಪ್ರಬಲ ನೈಟ್ರಿಕ್‌ಆಮ್ಲ ಮತ್ತು ಹೈಡ್ರೋಕ್ಲೋರಿಕ್‌ ಆಮ್ಲಗಳ ಒಂದು ಹದವಾದ,ತಿಳಿಕೇಸರಿ ಬಣ್ಣದ ದ್ರಾವಣ.

ಸಾಧಾರಣವಾಗಿ ಸುಲಭದಲ್ಲಿ ಕರಗಿಸಲಾಗದ ಚಿನ್ನದಂಥ ಶುದ್ಧ ಲೋಹ ಕೂಡ ಈ ದ್ರಾವಣದಲ್ಲಿ ಕರಗುತ್ತದೆ. ಬಳಿಕ ಬೇರೊಂದು ವಿಧಾನದ ಮೂಲಕ ಆ ಚಿನ್ನವನ್ನು ದ್ರಾವಣದಲ್ಲಿ ಘನರೂಪಕ್ಕಿಳಿಸಿ ವಾಪಸು ಪಡೆಯಬಹುದು. ಬೋರ್‌ ತನ್ನ ಗೆಳೆಯನ ಜೊತೆ ಸೇರಿ, ತನ್ನ ಬಳಿಯಿದ್ದ ಎರಡು ನೊಬೆಲ್‌ ಪದಕಗಳನ್ನೂ ಆಕ್ವಾ ರೆಜಿಯಾ ದ್ರಾವಣದಲ್ಲಿ ಅದ್ದಿದರು. ಅವು ಅದರೊಳಗೆ ಕರಗಿಯೇ ಹೋದವು. ಆ ದ್ರಾವಣದ ಜಾಡಿಯನ್ನು ಬೋರ್‌ ತನ್ನ ಪ್ರಯೋಗ ಶಾಲೆಯಲ್ಲಿ ಎಲ್ಲರಿಗೂ ಕಾಣುವಂಥ ಸಾಮಾನ್ಯ ಜಾಗವೊಂದರಲ್ಲಿಟ್ಟರು. ನೋಡಿದ ಯಾರಿಗೂ ಅದರೊಳಗೆ ಹೀಗೆ ಎರಡು ಚಿನ್ನದ ಪದಕಗಳು ಕರಗಿವೆಯೆಂಬುದರ ಸಣ್ಣ ಅಂದಾಜಾದರೂ ಆಗುವಂತಿರಲಿಲ್ಲ!

ಯುದ್ಧ ತೀವ್ರಗೊಂಡಿತು. ನಾಝಿ ಪಡೆಗಳು ಜರ್ಮನಿ ಅಷ್ಟೇ ಅಲ್ಲದೆ ಪಕ್ಕದ ಹಂಗೇರಿ, ಸ್ವೀಡನ್‌ಗಳನ್ನೂ ಆಕ್ರಮಿಸಿಕೊಂಡವು. ಬೋರ್‌ ರಾತ್ರೋರಾತ್ರಿ ಮೀನುಗಾರಿಕೆಯ ಬೋಟ್‌ಗಳಲ್ಲಿ ತಪ್ಪಿಸಿಕೊಂಡು ಸಮುದ್ರದಾಟಿ ಅಮೆರಿಕವನ್ನು ಸೇರಿಕೊಳ್ಳಬೇಕಾಯಿತು.ಊಹಿಸಿದಂತೆಯೇ, ನಾಝಿಗಳು ಬೋರ್‌ರಪ್ರಯೋಗಾಲಯವನ್ನು ಕೂಡ ಜಾಲಾಡಿ ಹೋದರು.ಹಲವು ವರ್ಷಗಳೇ ಕಳೆದವು. ಅಮೆರಿಕದ ಮ್ಯಾನ್ಹಟನ್‌ಯೋಜನೆ ಪೂರ್ಣಗೊಂಡಿತ್ತು. ಜಪಾನ್‌ ಮೇಲೆ ಅಣು ಬಾಂಬಿನ ದಾಳಿಯಾಗಿತ್ತು. ಯುದ್ಧ ನಿಂತಿತ್ತು. ಹಿಟ್ಲರ್‌ ಸತ್ತುಬಿದ್ದಿದ್ದ. ಎಲ್ಲಾ ಸಾಮಾನ್ಯ ಸ್ಥಿತಿಗೆ ಬರತೊಡಗಿದ ಮೇಲೆ ಡಿ ಹೆವೆಸಿ ವಾಪಸು ಬೋರ್‌ರ ಪ್ರಯೋಗಾಲಯಕ್ಕೆ ಬಂದಾಗ, ಆಕ್ವಾ ರೆಜಿಯಾದ ಜಾಡಿ ಹಾಗೇ ಮೇಜಿನ ಮೇಲೆ ಕೂತಿತ್ತು! ಡಿ ಹೆವೆಸಿ, ರಾಸಾಯನಿಕ ಪ್ರಕ್ರಿಯೆಯ ಮೂಲಕ ಅದರಿಂದ ಚಿನ್ನವನ್ನು ಹೊರತೆಗೆದು, ಅವುಗಳನ್ನು ಮತ್ತೆ ಪದಕಗಳಾಗಿ ಅಚ್ಚು ಹಾಕಿಸಲು ನೊಬೆಲ್‌ ಅಕಾಡೆಮಿಗೆ ಕಳಿಸಿಕೊಟ್ಟ.

 

Advertisement

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next