Advertisement

ಬಾರೋ ಸಾಧಕರ ಕೇರಿಗೆ : ಪ್ರಾಮಾಣಿಕ ನೌಕರ

08:19 PM Dec 15, 2020 | Suhan S |

ಮೈಕೆಲ್‌ ಫ್ಯಾರಡೆ, ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿ. ಕೇವಲ ಮೂರೋ ನಾಲ್ಕೋ ವರ್ಷ ಶಾಲೆ ಕಲಿತಿದ್ದು ಬಿಟ್ಟರೆ, ಫ್ಯಾರಡೆಗೆ ಯಾವ ಶಾಸ್ತ್ರೀಯ ಶಿಕ್ಷಣವೂ ದೊರೆಯಲಿಲ್ಲ! ಕಡುಬಡತನದ ಕುಟುಂಬದಿಂದ ಬಂದ ಫ್ಯಾರಡೆ, ತನ್ನ ಹದಿಹರೆಯವನ್ನೆಲ್ಲ ಪ್ರಸ್ಸಿನಲ್ಲಿ ಪುಸ್ತಕಗಳಿಗೆ ಬೈಂಡ್‌ ಹಾಕುತ್ತ ಕಳೆಯಬೇಕಾಯಿತು.

Advertisement

ಆದರೆ, ಸ್ವಾಧ್ಯಾಯ ಮಾಡಿ, ಸರ್‌ ಹಂಫ್ರಿ ಡೇವಿಯ ಉಪನ್ಯಾಸಗಳನ್ನು ಕೇಳಿ, ಡೇವಿಯ ಕೈಕೆಳಗೆ ಸಹಾಯಕನಾಗಿ ದುಡಿದ ಫ್ಯಾರಡೆ, ಕೊನೆಗೆ ರಾಯಲ್‌ ಸೊಸೈಟಿಯ ಪ್ರಯೋಗಾಲಯದ ನಿರ್ದೇಶಕನಾಗುವ ಮಟ್ಟಕ್ಕೆ ಬೆಳೆದ. ವಿದ್ಯುತ್‌ ಮತ್ತು ಕಾಂತಶಕ್ತಿಗಳನಡುವಿನ ಸಂಬಂಧವನ್ನು ಬಳಸಿಕೊಂಡು ಅವನು ಮಾಡಿದ ಪ್ರಯೋಗಗಳು ಅವನಿಗೆ ವಿಶ್ವಮನ್ನಣೆ ಗಳಿಸಿಕೊಟ್ಟವು.

ಫ್ಯಾರಡೆ 25ರ ಯುವಕ ನಾಗಿದ್ದಾಗ, ಡೇವಿಯವರ ಅಚ್ಚುಮೆಚ್ಚಿನ ಸಹಾಯಕನಾಗಿದ್ದ. ಹೇಳಿದ ಕೆಲಸವನ್ನು ಚಾಚೂ ತಪ್ಪದೆ, ಕಿಂಚಿತ್‌ ಊನವೂ ಇಲ್ಲದಂತೆ ಮಾಡಿ ಮುಗಿಸುವ ಈ ಹುಡುಗನೆಂದರೆ ಡೇವಿಯವ ರಿಗೂ ಇಷ್ಟ. ಮುಂದೆ, ಫ್ಯಾರಡೆಯೇ ರಾಯಲ್‌ ಸೊಸೈಟಿಯ ಪ್ರಯೋಗಾಲಯದ ನಿರ್ದೇಶಕ ನಾದ ಮೇಲೆ, ಅವನ ಕೈಕೆಳಗೆ ಹಲವರು ಸಹಾಯಕರಾಗಿ ದುಡಿದರು. ಅವರಲ್ಲೊಬ್ಬ- ಆಂಡರ್‌ಸನ್‌. ಸೇನೆಯಲ್ಲಿ ಹಲವು ವರ್ಷ ಸೇವೆ ಸಲ್ಲಿಸಿ ನಿವೃತ್ತನಾಗಿ ಬಂದಿದ್ದ ಪ್ರಾಮಾಣಿಕ ಯೋಧ ಅವನು.

ಫ್ಯಾರಡೆ ವಿದ್ಯುತ್‌ ಮತ್ತು ಕಾಂತಗಳಲ್ಲದೆ ಗಾಜಿನ ತಯಾರಿಯಲ್ಲೂ ಬಹಳಷ್ಟು ಕೆಲಸ ಮಾಡಿದ್ದಾನೆ. ಅನೇಕ ಬಗೆಯ, ವಿವಿಧ ಗುಣಧರ್ಮದ ಗಾಜುಗಳನ್ನು ತಯಾರಿಸುವುದು ಅವನ ಪ್ರಯೋಗಗಳ ಭಾಗವಾಗಿತ್ತು. ಗಾಜಿನ ತಯಾರಿ ಕಷ್ಟ ಮಾತ್ರವಲ್ಲ, ಅಪಾರ ತಾಳ್ಮೆಯನ್ನು ಬೇಡುವ ಕೆಲಸ. ಒಂದೇ ಹದದಲ್ಲಿ ಬೆಂಕಿ ಊದುತ್ತ ಮರಳನ್ನು ಕರಗಿಸಿ ಬೇಕಾದ ದಪ್ಪದ ಗಾಜು ತಯಾರಿಸಬೇಕಾಗಿತ್ತು. ಅಂಥದೊಂದು ಕೆಲಸವನ್ನು ಒಂದು ದಿನ ಫ್ಯಾರಡೆ, ಆಂಡರ್‌ಸನ್‌ಗೆ ವಹಿಸಿ ಉಷ್ಣತೆ ಎಷ್ಟಿರಬೇಕು ಎನ್ನುವುದರ ಬಗ್ಗೆ ಸ್ಪಷ್ಟವಾದ ಸೂಚನೆಕೊಟ್ಟ.ಒಂದೇಉಷ್ಣತೆಯಲ್ಲಿಮರಳನ್ನುಕಾಯಿಸುವಂತೆ ಹೇಳಿ ಹೊರಟುಹೋದ. ಆದರೆ, ಬೇರೆ ಕೆಲಸಗಳಲ್ಲಿ ತೊಡಗಿಕೊಂಡ ಫ್ಯಾರಡೆಗೆ ಈ ಗಾಜಿನ ವಿಷಯ ಮರೆತೇ ಹೋಯಿತು. ಸೀದಾ ಮನೆಗೆ ಹೋಗಿಬಿಟ್ಟ! ಆದರೆ, ಹಲವು ಗಂಟೆಗಳು ಕಳೆದ ಮೇಲೆ ಅವನಿಗೆ ತಟ್ಟನೆ ಆಂಡರ್‌ಸನ್‌ನ ನೆನಪಾಯಿತು.

ಗಾಜಿನ ಕೆಲಸವನ್ನು ಮುಗಿಸುವುದಕ್ಕೆ ಹೇಳೇ ಇಲ್ಲವಲ್ಲ ಎಂದು ತಲೆಚಚ್ಚಿಕೊಂಡು, ವಾಪಸು ಪ್ರಯೋಗಾಲಯಕ್ಕೆ ಬಂದು ನೋಡಿದರೆ, ಅಲ್ಲಿ ಆಂಡರ್‌ಸನ್‌ ಉಷ್ಣತೆಯನ್ನು ಸಂಭಾಳಿಸಿಕೊಂಡು ಇನ್ನೂ ಮರಳಿನ ಜಾಡಿ ಹಿಡಿದುಕಾಯಿಸುತ್ತ ನಿಂತಿದ್ದ!

Advertisement

 

-ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next