Advertisement

ಹೊಲಿಗೆಯಿಂದ ಹೊಸಬಾಳು

09:13 AM Sep 26, 2019 | mahesh |

ಬೆಂಗಳೂರಿನಂಥ ಮಹಾನಗರದಲ್ಲಿ ಒಬ್ಬರ ದುಡಿಮೆಯಿಂದ ಜೀವನ ಸಾಗಿಸುವುದು ಕಷ್ಟ. ಈ ಮಾತು ಇಂದಿಗೆ ಎಷ್ಟು ಸತ್ಯವೋ, ನಲವತ್ತು ವರ್ಷಗಳ ಹಿಂದೆಯೂ ಅಷ್ಟೇ ಸತ್ಯ. ಆ ಕಾಲದಲ್ಲಿಯೇ ದುಡಿಮೆಯ ಮಹತ್ವವನ್ನು ಅರಿತು, ಗಂಡನ ಹೆಗಲಿಗೆ ಹೆಗಲಾದವರು ಪದ್ಮಕಲಾ. ಸ್ವಾವಲಂಬನೆಯ ಹಾದಿಯಲ್ಲಿ ನಡೆಯಲು ಅವರಿಗೆ ನೆರವಾಗಿದ್ದು ಹೊಲಿಗೆ ಕೆಲಸ.

Advertisement

ಮಕ್ಕಳನ್ನು ಓರಗಿತ್ತಿಯ ಸುಪರ್ದಿಗೆ ಒಪ್ಪಿಸಿ, ಹಗಲಿರುಳು ಬಟ್ಟೆ ಹೊಲಿಯುತ್ತಿದ್ದ ಪದ್ಮಕಲಾ, ಅಷ್ಟಕ್ಕೇ ಸುಮ್ಮನಾಗದೆ, ಉಷಾ ಟೈಲರಿಂಗ್‌ ಕ್ಲಾಸ್‌ ಅನ್ನು ಪ್ರಾರಂಭಿಸಿದರು. ಆ ಮೂಲಕ ಅನೇಕ ಹೆಣ್ಮಕ್ಕಳಿಗೆ ಹೊಲಿಗೆ ಕಲಿಸಿ, ಅವರೆಲ್ಲಾ ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡಿದರು.

ಇವರಿಂದ ಹೊಲಿಗೆ ಕಲಿತ ನೂರಾರು ಯುವತಿಯರು ಈಗ ಬೇರೆ ಅಂಗಡಿ, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿರುವುದಲ್ಲದೆ, ಸ್ವಂತ ಉದ್ಯಮವನ್ನೂ ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ ಮಹಿಳೆಯರಿಗಾಗಿ, ಐ.ಟಿ.ಐ. ಸ್ಥಾಪಿಸಿದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೂ ಅವರದ್ದು. 1995ರಲ್ಲಿ ಟೈಲರಿಂಗ್‌ನಲ್ಲಿ ಭಾರತಕ್ಕೆ ಪ್ರಥಮ ರ್‍ಯಾಂಕ್‌ ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪಡೆದ ದಕ್ಷಿಣ ಭಾರತದ ಮೊದಲ ಐ.ಟಿ.ಐ. ಕೂಡಾ ಅದೇ.

ಹೊಲಿಗೆ ಕ್ಷೇತ್ರದಲ್ಲಿ ಮೂವತ್ತೈದು ವರ್ಷಗಳಷ್ಟು ಸುದೀರ್ಘ‌ ಅನುಭವ ಹೊಂದಿರುವ ಪದ್ಮಕಲಾ, ವಿನೂತನ ಶೈಲಿಯಲ್ಲಿ ಬಟ್ಟೆಗಳನ್ನು ಹೊಲಿಯುವುದಷ್ಟೇ ಅಲ್ಲದೆ, ವಸ್ತ್ರ ವಿನ್ಯಾಸವನ್ನೂ ಮಾಡಬಲ್ಲರು. ಧಾರಾವಾಹಿ, ಸಿನಿಮಾ ಹಾಗೂ ಜಾನಪದ ಜಾತ್ರೆಗಳಿಗೆ ವಸ್ತ್ರವಿನ್ಯಾಸ ಮಾಡಿದ ಅನುಭವ ಅವರಿಗಿದೆ. ಕಿರುತೆರೆ, ಹಿರಿತೆರೆಯಲ್ಲಿ ನಟಿಸಿರುವುದು ಇವರ ಮತ್ತೂಂದು ಸಾಧನೆ. ಕೆಲ ವರ್ಷಗಳಿಂದ ಹೊಲಿಗೆ ಶಾಲೆಯನ್ನು ನಡೆಸುತ್ತಿಲ್ಲವಾದರೂ, ಕಲಿಯುವ ಆಸಕ್ತಿಯಿದ್ದವರಿಗೆ ದಾರಿ ತೋರಿಸುವ ಕೆಲಸ ಮಾಡುತ್ತಿದ್ದಾರೆ ಪದ್ಮಕಲಾ.

ಪುಷ್ಪಾ ಎನ್‌.ಕೆ. ರಾವ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next