ಕೆಲವೊಮ್ಮೆ ಜನ ತಾವು ಮಾಡದ ಕೆಲಸಗಳಿಗೆ ಹೆಸರು ಪಡೆಯುತ್ತಾರೆ; ಇನ್ನು ಕೆಲವೊಮ್ಮೆ ಮಾಡಿದಕೆಲಸಗಳಿಗೂ ಹೆಸರಾಗದೆ ಅಜ್ಞಾತರಾಗಿ ಉಳಿಯುತ್ತಾರೆ. ಲೋಕ ವ್ಯವಹಾರದಲ್ಲಿ ಹೇಗೋಹಾಗೆ ವಿಜ್ಞಾನದಲ್ಲೂ ಇಂಥ ಅದೃಷ್ಟವಂತರು ಹಾಗೂ ಅದೃಷ್ಟಹೀನರು ಕಡಿಮೆಯೇನಿಲ್ಲ.
ನತದೃಷ್ಟ ವಿಜ್ಞಾನಿಗಳ ಪಟ್ಟಿ ಮಾಡುವಾಗ ನಿಜವಾಗಿಯೂ ಆಪಟ್ಟಿಯಲ್ಲಿ ಕಾಣಿಸಿಕೊಳ್ಳಲೇಬೇಕಾದ; ಆದರೆ ಬಹಳಷ್ಟು ಬಾರಿ ಕಾಣಿಸದಿರುವ ನತದೃಷ್ಟನ ಹೆಸರು:ಕಾರ್ಲ್ ವಿಲ್‌ಹೆಮ್ ಷೀಲ್.
ಈತ ಮೂಲತಃ ಸ್ವೀಡಿಶ್ ರಸಾಯನಶಾಸ್ತ್ರಜ್ಞ. ಹುಟ್ಟಿದ್ದು 1742ರ ಡಿಸೆಂಬರ್ 9ರಂದು, ಸ್ವೀಡನ್ನಿನ ಸ್ಟ್ರಾಲ್‌ಸಂಡ್ ಎಂಬಲ್ಲಿ. ಕೇವಲ 43ವರ್ಷಗಳಷ್ಟೇ ಬದುಕಿದ್ದ ಷೀಲ್,ತನ್ನ ಜೀವಿತಾವಧಿಯಲ್ಲಿ ಆಕ್ಸಿಜನ್, ಹೈಡ್ರೋಜನ್,ಬೇರಿಯಂ, ಕ್ಲೋರಿನ್, ಮಾಲಿಬಿxನಂ, ಟಂಗ್‌ಸ್ಟನ್‌ಮುಂತಾದ ಧಾತುಗಳನ್ನು ಮೊದಲಬಾರಿಗೆಕಂಡುಹಿಡಿದ. ಆದರೆ, ಆ ಸಂಶೋಧನೆಗಳಕ್ರೆಡಿಟ್ಟುಗಳೆಲ್ಲವೂ ಆಯಾ ಕ್ಷೇತ್ರದಲ್ಲಿ ಕೆಲಸ ಮಾಡಿದ ಉಳಿದವಿಜ್ಞಾನಿಗಳಿಗೆ ಹೋಯಿತು. ವಿಜ್ಞಾನವಲಯದಲ್ಲಿ ಅತ್ಯಂತ ಪ್ರತಿಭಾನ್ವಿತನೆಂದು ಹೆಸರಾಗಿದ್ದರೂ ಷೀಲ್, ಜನಸಾಮಾನ್ಯರ ವರ್ಗದಲ್ಲಿ ಹೆಸರು ಮಾಡಿದವನಲ್ಲ .ಜನಪ್ರಿಯತೆಯ ಬೆನ್ನು ಹತ್ತದೆ ಸಾಧನೆಯ ಬೆನ್ನು ಹತ್ತಿ ಹಗಲಿರುಳು ಕೆಲಸ ಮಾಡಿದ ಷೀಲೆಯ ಬಗ್ಗೆ, ಬೇರೆ ದೇಶದಲ್ಲಿರಲಿ ಸ್ವತಃ ಅವನ ದೇಸ್ವೀಡನ್ನಿನಲ್ಲೂ ಜನಸಾಮಾನ್ಯರಿಗೆ ಗೊತ್ತಿರಲಿಲ್ಲ.
ಒಮ್ಮೆಸ್ವೀಡನ್ನಿನ ರಾಜ ಮುಮ್ಮಡಿ ಗುಸ್ತಾವ್, ಪ್ಯಾರಿಸಿಗೆ ಸೌಹಾರ್ದ ಭೇಟಿ ಕೊಟ್ಟ. ಆತನ ಕಾರ್ಯಕ್ರಮಗಳ ಪಟ್ಟಿಯಲ್ಲಿ ವಿಜ್ಞಾನಿಗಳ ಭೇಟಿ ಎಂಬುದೂ ಇತ್ತು. ವಿಜ್ಞಾನದ ಬಗ್ಗೆ ಗುಸ್ತಾವ್‌ಗೆ ವಿಶೇಷ ಮಮತೆ ಇರದಿದ್ದರೂ ಆ ಕಾಲದಲ್ಲಿ ವಿಜ್ಞಾನಿಗಳನ್ನುಭೇಟಿಯಾಗುವುದೆಂದರೆ ಪ್ರತಿಷ್ಠಿತ ಸಂಗತಿ ಎಂದು ಪರಿಗಣಿಸಲ್ಪಟ್ಟಿತ್ತು. ವಿಜ್ಞಾನಿಗಳ ಭೇಟಿಯ ಸಂದರ್ಭದಲ್ಲಿ, ಅಲ್ಲಿದ್ದ ಎಲ್ಲಾ ವಿಜ್ಞಾನಿಗಳೂ ತಮ್ಮಮಾತುಗಳಲ್ಲಿ ಷೀಲೆಯ ಪ್ರಸ್ತಾಪ ಮಾಡಿದರು.
ಷೀಲೆ, ಜಗತ್ತಿಗೆ ಸ್ವೀಡನ್ ದೇಶದ ಬಹುದೊಡ್ಡ ಕೊಡುಗೆ – ಎಂಬ ಮಾತೂ ಬಂತು. ಇದನ್ನೆಲ್ಲ ಕೇಳಿದ ಗುಸ್ತಾವ್ ಹೊರಗೆ ಹರ್ಷಿತನಾದಂತೆ ತೋರಿಸಿಕೊಂಡರೂ ಒಳಗೊಳಗೆ ಬಿಳಿಚಿಕೊಂಡಿದ್ದ. ಅಸಲಿಗೆ ಆತನಿಗೆ ಷೀಲೆ ಯಾರೆಂದೇ ಗೊತ್ತಿರಲಿಲ್ಲ! ತನ್ನ ಭೇಟಿ ಮುಗಿಸಿ ಸ್ವೀಡನ್ನಿಗೆ ವಾಪಸಾಗುತ್ತಲೇ ಆತತನ್ನ ಮಂತ್ರಿಗೆ ಷೀಲೆಯನ್ನು ಕೂಡಲೇ ಹುಡುಕಿತರುವಂತೆ ಆದೇಶಿಸಿದ! ಆದರೆ ಆಮಂತ್ರಿಗಾದರೋ ವಿಜ್ಞಾನ ಮತ್ತು ಷೀಲೆಯ ಬಗ್ಗೆ ಮಾಹಿತಿ ಅಷ್ಟಕ್ಕಷ್ಟೆ. ಆತ ತನ್ನ ಕಾರ್ಯದರ್ಶಿಯನ್ನುಕರೆದು ಷೀಲೆಯನ್ನು ತಕ್ಷಣ ಹುಡುಕಿಕರೆ ತರಬೇಕೆಂದೂ ಆತನಿಗೆ “ಕೌಂಟ್” ಪದವಿಯನ್ನು ಕೊಡಬೇಕೆಂದು ರಾಜರ ಅಪ್ಪಣೆಯಾಗಿದೆಯೆಂದೂ ತಿಳಿಸಿದ. ಕಾರ್ಯದರ್ಶಿ ತನ್ನ ಕೈಕೆಳಗಿನ ಗುಮಾಸ್ತರಿಗೆ ಆ ಜವಾಬ್ದಾರಿ ವಹಿಸಿದ. ಆ ಅಷ್ಟೂ ಮಂದಿಯಲ್ಲಿ ಯಾರೊಬ್ಬರಿಗೂ ಷೀಲೆಯ ಪರಿಚಯ ಇರಲೇ ಇಲ್ಲ.
ಈ ಆದೇಶಗಳೂ ಪತ್ರಗಳೂ ಅಧಿಕಾರಿಯಿಂದ ಅಧಿಕಾರಿಗೆ ಹರಿದುಬಂದು, ಕೊನೆಗೆ ಸೇನೆಯಲ್ಲಿದ್ದ ಒಬ್ಬ ಲೆಫ್ಟಿನೆಂಟನವರೆಗೆ ಹೋಗಿ ನಿಂತಿತು. ಆಲೆಫ್ಟಿನೆಂಟ್‌ನ ಹೆಸರು ಷೀಲೆ ಎಂದಾಗಿತ್ತು! “ಈತ ಬಿಲಿಯರ್ಡ್‌ಸ್ ಆಟವನ್ನು ಬಹಳ ಚೆನ್ನಾಗಿ ಆಡುತ್ತಾನೆ” ಎಂಬ ಪ್ರಶಂಸಾ ಪತ್ರವೂ ಬಂತು! ಕೂಡಲೇ ರಾಜನ ಆದೇಶದ ಮೇರೆಗೆ ಆ ಲೆಫ್ಟಿನೆಂಟ್ ಷೀಲೆಗೆ “ಕೌಂಟ್” ಪದವಿಯನ್ನಿತ್ತು ಉದ್ಯೋಗದಲ್ಲಿ ಮುಂಬಡ್ತಿ ಕೊಡಲಾಯಿತು. ತನ್ನ ಲ್ಯಾಬೊರೇಟರಿಯಲ್ಲಿ ಪ್ರನಾಳ, ಬೀಕರು,ಜಾಡಿಗಳ ನಡುವೆ ಕಳೆದುಹೋಗಿದ್ದ ಕಾರ್ಲ್ ವಿಲ್‌ಹೆಮ್ ಷೀಲೆಗೆ ಮಾತ್ರ ತನ್ನ ಹೆಸರಲ್ಲಿ ನಡೆದುಹೋದಈ ಎಲ್ಲ ಚಟುವಟಿಕೆಗಳ ಶೇಕಡಾ 1 ರಷ್ಟಾದರೂ ಮಾಹಿತಿ ಇರಲಿಲ್ಲ!
ರೋಹಿತ್ ಚಕ್ರತೀರ್ಥ