Advertisement
“”ನೋಡು ವಶೂ… ನಮ್ಮಿಬ್ಬರ ನಡುವೆ ಘಟಿಸುವುದಕ್ಕೇನು ಉಳೀಲಿಲ್ಲ. ಗೌರವವಿಲ್ಲದ ಜಾಗದಲ್ಲಿ ಪ್ರೀತಿ-ನಂಬಿಕೆ ಬಾಳಲಾರವು. ಯಾವ ಪ್ರಯತ್ನಗಳನ್ನೂ ಮಾಡಬೇಡ. ದೊಡ್ಡವರ ಹಗೆ ಸಲ್ಲ, ಬಡವರ ನೆರೆ ಸಲ್ಲ ಅನ್ನೋ ಹಾಗಾಯ್ತು ನನ್ನ ಬದುಕು”.
.
ವರ್ಷಾಳ ಬಾಲ್ಯದ ಗೆಳತಿಯಾಗಿದ್ದ ಜಾನ್ಸಿ , ಮದುವೆಯಾದ ಸ್ವಲ್ಪ ದಿನಗಳಲ್ಲಿಯೇ ಗಂಡನಿಂದ ದೂರವಾಗಿದ್ದಳು. ತನಗೆ ಸ್ವತಂತ್ರವಾಗಿರಲು ಬಿಡುತ್ತಿಲ್ಲ. “ನನ್ನ ಕ್ಲಬ್-ಕಚೆೇರಿ ಕೆಲಸಗಳಿಗೆ ನನ್ನ ಗಂಡ ಅವಕಾಶ ಕೊಡುತ್ತಿಲ್ಲ. ಮಹಿಳಾ ಹಕ್ಕುಗಳಿಗೆ ವಿರುದ್ಧವಾದುದು. ಹಕ್ಕುಚ್ಯುತಿ ಆಧಾರದಲ್ಲಿ ನನಗೆ ಡೈವೋರ್ಸ್ ಬೇಕು’ ಎಂಬ ಜಾನ್ಸಿಯ ವಾದವನ್ನು ಪರಿಗಣಿಸಿ ಒಂದು ತಿಂಗಳು ಕಾಲಾವಕಾಶ ನೀಡಿ ನ್ಯಾಯಾಲಯ ಒಪ್ಪಿಗೆ ನೀಡಿತ್ತು. ಅದನ್ನೇ ದೊಡ್ಡ ಗೆಲುವೆಂದು ಭಾವಿಸಿಕೊಂಡು ನಗರದ ಮಹಿಳಾವಲಯದಲ್ಲಿ ಅಧಿಪತ್ಯವನ್ನು ಸ್ಥಾಪಿಸುವ ಪ್ರಯತ್ನಪಡುತ್ತಿದ್ದಳು. ಆಗಾಗ ಭೇಟಿಯಾದಾಗ ವರ್ಷಾ ಹೇಳುತ್ತಿದ್ದ ಸಾಂಸಾರಿಕ ಜಂಜಾಟಗಳಿಗೆ ಸೂಕ್ತ ಪರಿಹಾರ ಒದಗಿಸಿ ಹೊಂದಿಕೊಂಡು ಬಾಳುವ ಮಾತುಗಳನ್ನು ಜಾನ್ಸಿ ಹೇಳುತ್ತಿರಲಿಲ್ಲ. ಗಂಡಸರೇ ಹಾಗೆ, ರಾತ್ರಿ ಜವಾನರು ಹಗಲು ದಿವಾನರು. ತಮ್ಮನ್ನು ತಾವು ಇಪ್ಪತ್ತನೆಯ ಶತಮಾನದ ಪ್ರತಿನಿಧಿಗಳು ಎಂದುಕೊಂಡಿದ್ದಾರೆ. ನಮ್ಮನ್ನು ಎರಡನೆಯ ಶತಮಾನದ ಹಿಂದಿನ ಪಹರೆಯಲ್ಲಿಡುತ್ತಾರೆ. ನಮಗೆ ಮಗ್ಗಲು ಹೊರಳಿಸಲು ಬಿಡುವುದಿಲ್ಲ. ಅವರು ಮಾತ್ರ ಮಾರು ದೂರ ಉರುಳುತ್ತಾರೆ. ನಾವು ಯಾವಾಗ ಎದ್ದು ಹೊರಬರುತ್ತೇವೋ ಅವಾಗಲೇ ಬೆಳಕು, ಇಲ್ಲದಿದ್ದರೆ ನರಳಾಟದ ಬದುಕು ಎಂಬಂತಹ ಮನಸ್ಸು ಮುರಿಯುವ ಧಾಟಿಯ ಮಾತನಾಡುತ್ತಿದ್ದಳು. ವರ್ಷಾ ಮಾತ್ರ, “”ನಾನು ವಸಂತನನ್ನು ಇಷ್ಟಪಟ್ಟು ಮದುವೆಯಾದವಳು, ವಸಂತ್ ನನ್ನನ್ನು ಕಷ್ಟಪಟ್ಟಾದ್ರೂ ಸಹಿಸಿಕೊಂಡಿದ್ದಾನೆ. ನಮ್ಮಿಬ್ಬರ ಮಧ್ಯೆ ಏನೇ ಆದರೂ ಅದು ಅಮ್ಮನಿಗೆ ಗೊತ್ತಾಗಬಾರದು. ಜೀವನದಲ್ಲಿ ಏರುಪೇರುಗಳು ಸಹಜ. ನಾವು ಎಷ್ಟೇ ಶತಮಾನಗಳನ್ನು ಕಳೆದರೂ ಗಂಡಸೇ ಗಂಡ. ಹೆಂಗಸೇ ಹೆಂಡತಿ! ಸಾಮರಸ್ಯದಲ್ಲಿ ಬದುಕಿನ ಸುಖ ಕಾಣಬಹುದು” ಎಂದು ಜಾನ್ಸಿಗೆ ಹೇಳಬೇಕೆಂದುಕೊಂಡರೂ ಹೇಳುತ್ತಿರಲಿಲ್ಲ.
.
ಆದರೆ, ಇವತ್ತು ಜಾನ್ಸಿ ಇನ್ನಿಲ್ಲದಂತೆ ನೆನಪಾದಳು. ಜಾನ್ಸಿಗೆ ಕಾಲ್ ಮಾಡಿ ಮಾತೇ ಇಲ್ಲದಷ್ಟು ಅತ್ತುಬಿಟ್ಟಳು ವರ್ಷಾ.
“”ಏನಾಯೆ¤à ವರೂ…?”
“”ಜಾನ್ಸಿ…”
“”ಡೋಂಟ್ ವರೀ ಪಾಪು ನಾನಿದೀನಿ, ಮಾತಾಡು”.
“”ವಸಂತ ಇವತ್ತು ತುಂಬಾ ರೇಗಾಡಿºಟ್ರಾ ಕಣೇ. ನಿಮ್ಮ ಅಮ್ಮನಿಗೋಸ್ಕರನಾದ್ರೂ ಒಂದು ಮಗು ಮಾಡ್ಕೊàಬಹುದಿತ್ತು. ಎಲ್ಲರ ಆಸೆ-ಕನಸುಗಳಿಗೆ ಕೊಳ್ಳಿಯಿಟ್ಟೆ. ಹಾಗೆ ಹೀಗೇ ಏನೇನೊ! ಹೆಂಡತಿ ಅಂದ್ರೆ ಮಕ್ಕಳು ಹೆರುವ ಮಷಿನ್ ಏನೇ?”
“”ವರೂ… ನಿನ್ನ ಗಂಡ ಇವತ್ತು ಬಣ್ಣ ಕಳಚಿದ್ದಾನೆ. ಮನಸ್ಸಿನ ಬಯಕೇನಾ ನಿಮ್ಮಮ್ಮ ಅನ್ನೋ ಮುಖವಾಡಕ್ಕೆ ಅಂಟ್ಸೆದಾನೆ. ಗಂಡಸರಿಗೆ ಮದುವೆಯಾದ ಕೂಡಲೇ ಮಕ್ಕಳು, ಅದಾದ್ಮೇಲೆ ಮನೆ, ಮನೆಯಾದ್ಮೇಲೆ ಮತ್ತೂಂದು. ಅವಕ್ಕೆಲ್ಲ ಮಹತ್ವಾಕಾಂಕ್ಷೆ ಅನ್ನೋ ಹೆಸರು ಕೊಟ್ಕೊಂಡಿ¨ªಾರೆ. ಹೆಂಡತಿಯನ್ನೇ ಮಗು ಅಂದುಕೊಂಡು ತನ್ನ ಮನಸ್ಸಿನಲ್ಲಿ ಹೆಂಡತಿಗೊಂದು ಮನೆ ಮಾಡಿಕೊಟ್ಟು ಸೆಕ್ಯೂರ್ ಫೀಲಿಂಗ್ ಕೊಡಲಾರ. ನೀನೀವಾಗ ನಿನ್ನ ಡಿಟೇಲ್ಸ… ಮೇಲ… ಮಾಡು. ನಾಳೇನೇ ಲಾಯರ್ ಹತ್ರ ಹೋಗೋಣ. ನಾನೀವಾಗ ಅವರ ಜೊತೆ ಮಾತಾಡ್ತೀನಿ”.
Related Articles
.
“”ಹರ್ಷಾ, ವರ್ಷಾಗೊಂದು ಕಾಲ… ಮಾಡಿ ಮಾತಾಡು. ನಮ್ಮ ಆರು ವರ್ಷದ ಜೀವನ ಇವತಾöಕೊ ಕೊನೆಯ ಅಧ್ಯಾಯದಲ್ಲಿದೆ ಅನ್ನಿಸ್ತಿದೆ. ವರ್ಷಾಳನ್ನು ಸಹಿಸಿಕೊಂಡು ನಾನಾಗಿರೋದಕ್ಕೆ ಬಾಳಿದೀನಿ. ಅದು ನಿನಗೂ ಗೊತ್ತು. ನಿಮ್ಮಮ್ಮ ನಿಮಗಷ್ಟೆ ಅಮ್ಮ ಅಲ್ಲ. ನನಗೂ, ಸಂತೂಗೂ! ಋಣ ತೀರಿಸೋಕೆ ಸಿಕ್ಕ ಸಣ್ಣ ಅವಕಾಶ ಅಂತಾ ಒಪ್ಪಿಕೊಂಡೆ. ವರ್ಷಾಳ ಮೇಲೆ ಪ್ರೀತಿನೂ ಇತ್ತು. ಹುಚ್ಚು ಪ್ರೀತಿ ಎಂಥದ್ದು ಅಂತಾ ನಿನಗೂ ಗೊತ್ತು. ನಾನು ನಿಮ್ಮನೆ ಕೆಲಸದವನಾದ್ರೂ ಅಮ್ಮ ಮುಂದೆ ನಿಂತು ಮದುವೆ ಮಾಡಿದ್ರು. ಸಂತೂ ವಿಷಯ ಗೊತ್ತಾದ್ರೂ ಅಷ್ಟೇ ಖುಷಿಯಿಂದ ನಿಂಜೊತೆ ಮದುವೆ ಮಾಡ್ತಾರೆ. ನಿಂದು ಪ್ಯಾಷನ್ ಡಿಜೈನಿಂಗ್ ಕೋರ್ಸ್ ಮುಗಿದ ಮೇಲೆ ನಿಮಗೊಂದು ಕಂಪೆನಿ ಮಾಡಿಕೊಡ್ತಾರೆ. ಸಾರಿ ಹರ್ಷಾ, ನಾನೇನೇನೋ ಮಾತಾಡ್ತೀದೀನಿ. ವರ್ಷಾ ಜೊತೆಯಲಿಲ್ಲದಿರೋದನ್ನು ನಂಗೆ ನಂಬೋಕಾಗ್ತಾ ಇಲ್ಲ. ಹೇಳು ಅವಳಿಗೆ ಆರು ವರ್ಷ ಅಂದ್ರೆ ನೂರು ವರ್ಷಕ್ಕಾಗೋ ನೆನಪುಗಳಿವೆ ಅಂತಾ. ಮರೆತರೆ ಬದುಕ್ತೀನಾ ನಾನು?! ಆದರೆ ವರ್ಷಾಗೆ ಇದ್ಯಾವುದು ಅರ್ಥವಾಗಲ್ಲ. ಅವಳ ಕಾರ್ ಡ್ರೈವರ್ ಆಗಿ ಪ್ರೀತಿಸಿದ್ದೇ ಇಷ್ಟವಿತ್ತೆನೋ? ಕಾರಲ್ಲಿ ಜೊತೆಯಲ್ಲೇ ಓಡಾಡೊದು ಕಷ್ಟವಾಗ್ತಿದೆ ಅನ್ಸುತ್ತೆ. ನಂಗೆ ಪ್ರೀತಿ ಅಷ್ಟೇ ಗೊತ್ತು ಹರ್ಷಾ. ವ್ಯಾಪಾರ ಮತ್ತು ಬುದ್ಧಿವಂತಿಕೆ ಭಾವುಕ ಮನಸ್ಸಿನ ಪರಿಧಿಯೊಳಗೆ ಬರೋದಿಲ್ಲ. ಅಮ್ಮ ನಮ್ಮನ್ಯಾವತ್ತೂ ಹಣ ಮುಂದಿಟ್ಟುಕೊಂಡು ನೋಡಲಿಲ್ಲ. ನಂಬಿಕೆಯಿಂದ ಸಾಕಿದರು. ಅವರು ನಮ್ಮ ಪಾಲಿನ ದೇವರು. ವರ್ಷಾಗೆ ಹೇಳು, ದೇವರಂತಹ ಅಮ್ಮನಿಗೆ ಈ ರಾದ್ಧಾಂತ ಗೊತ್ತಾಗೋದು ಬೇಡ. ಇದಕ್ಕೂ ಮೊದಲಿನ ಸಣ್ಣಪುಟ್ಟ ನೋವು ನೀಡಿರೋದೇ ನಂಗೆ ಸಹಿಸಿಕೊಳ್ಳೋಕಾಗಲ್ಲ. ಅವಳ ಸಂಕಟ, ಚಡಪಡಿಕೆ, ಹಾರಾಟ, ಗೋಳಾಟ ನಂಗೊತ್ತು. ಆದರೆ ಇವತ್ತು ಹೃದಯ ಘಾಸಿಗೊಳ್ಳೋ ಮಾತಾಡಿಬಿಟ್ಟಳು. ಮಗು ಬೇಕಾದೋರು ಬೇರೆ ಯಾರನ್ನಾದರೂ ನೋಡ್ಕೊàಳಿ ಅನ್ನೋದಾ? ಅವಳ ಮಾತುಗಳಿಂದಲೇ ಹಾಳಾಗ್ತಾಳೆ. ತತ್‌ಕ್ಷಣದ ನಿರ್ಧಾರಗಳು ಅವಳ ನಿಯಂತ್ರಣ ತಪ್ಪಿಸುತ್ತವೆ. ನಾನೂ ಸಹನೆ ದಾಟಿಬಿಟ್ಟೆ. ಅವಳಿಗೆ ನೋವು ಮಾಡಿಬಿಟ್ಟೆ. ಅವಳಿಗೆ ಹೇಳು I am standing on the tip of the finger to join her” ವಸಂತನ ಆದ್ರì ಮಾತುಗಳಿಗೆ ನಲುಗಿಹೋದಳು ಹರ್ಷಾ.
.
ರಿಂಗಣಿಸಿದ ಸದ್ದು ವಸಂತನದ್ದಿರಬೇಕೆಂದುಕೊಂಡ ವರ್ಷಾಳಿಗೆ ಕೇಳಿಸಿದ್ದು ಜಾನ್ಸಿಯ ಧ್ವನಿ. “”ವರೂ, ಲಾಯರ್ ಹೇಳಿದಾರೆ ಮಾರ್ನಿಂಗ್ ಭೇಟಿ ಮಾಡ್ಸೋಕೆ. ಪೇಪರ್ಸ್ ರೆಡಿ ಮಾಡಿರ್ತಾರೆ. ನೀನೊಂದು ಸೈನ್ ಹಾಕಿದರೆ ಸಾಕು, ಮುಂದಿನದು ನೆಮ್ಮದಿಯ ಬದುಕು. ಗುಡ್ ನೈಟ… ಸ್ವೀಟಿ”. ಜಾನ್ಸಿ ಅಲೆಯಂಥವಳು ದಡಮುಟ್ಟುವುದಕ್ಕೂ, ಮರಳಿ ಸಾಗರವಾಗುವುದಕ್ಕೂ ಅಂತರವಿಲ್ಲದಂಥವಳು.
Advertisement
ಹರ್ಷಾ, ವರ್ಷಾಳಿಗೆ ಕಾಲ… ಮಾಡಿದಳು.ಮತ್ತೂಮ್ಮೆ ಫೋನ್ ರಿಂಗಣಿಸಿತು. ಜಾನ್ಸಿಯ ಯೋಚನೆಯಲ್ಲೇ ಇದ್ದ ವರ್ಷಾ, “”ಇಲ್ಲಾ ಜಾನ್ಸಿ, ನಾನು ಡಿವೋರ್ಸ್ ಯೋಚನೆ ಮಾಡಿಲ್ಲ. ಈಗಾಗಿರೋದನ್ನೇ ಅಮ್ಮ ತಡ್ಕೊàಳಲ್ಲ. ವಸಂತ ನನ್ನವರು”. ಇನ್ನು ಮಾತಾಡುತ್ತಿದ್ದಳೇನೊ, ಆ ಕಡೆಯಿಂದ ಹರ್ಷಾ, “”ಅಕ್ಕಾ ನಾನು ಕಣೇ, ಭಾವ ಕಾಲ… ಮಾಡಿದ್ರು. ಭಾವ ನಿನ್ನ ಬಿಟ್ಟು ಬದುಕೋರಲ್ಲ. ಪ್ರೀತಿಸಿದವರಿಗೂ, ಪ್ರೀತಿಸಿಕೊಂಡವರಿಗೂ ಬಹಳ ವ್ಯತ್ಯಾಸ ಇರುತ್ತೆ ಕಣೇ. ಬೆಲೆ ಗೊತ್ತಾಗೋದು ವಸ್ತುವಿಗಲ್ಲ, ಅದು ಬೇಕಾದವರಿಗೆ. ಭಾವ ಸಂತೂ ಮನೇಲೀದಾರೆ. ಅಮ್ಮಂಗೆ ವಿಷಯ ಗೊತ್ತಾಗಿದೆ. ಬೆಳಿಗ್ಗೆ ಮಾತಾಡ್ತಾರಂತೆ ಟೈಮ… ಆಯ್ತು ಮಲಗು…”. “”ಅರಣ್ಯರೋದನ ಕಣೇ.. ತುಂಬಾ ನೋವಾಗ್ತಿದೆ. ನನ್ನ ಸ್ವಭಾವ ನಿಮ್ಮ ಭಾವಂಗೂ ಗೊತ್ತು”. ಇವತ್ತು ಅರೆಸತ್ತ ದನಿಯಲ್ಲಿ ಜಲಪಾತದಂತೆ ಧುಮ್ಮಿಕ್ಕತೊಡಗಿದಳು. ಹೆಚ್ಚು ಮಾತನಾಡಿದರೆ ಇನ್ನೂ ಅಳುತ್ತಾಳಿವಳು ಅಂದುಕೊಂಡ ಹರ್ಷಾ ಕಾಲ್ ಕಟ… ಮಾಡಿದಳು.
.
ಹರ್ಷಾಳ ಮಾತುಗಳಿಂದ ಸಮಾಧಾನವಾಗಬಹುದಿತ್ತಾದರೂ ವಸಂತನೇ ಸಾಂತ್ವನಗೊಳಿಸುವವರೆಗೂ ತಣ್ಣಗಾಗದವಳು ವರ್ಷಾ. ಮನಸ್ಸಿನ ಯಾವುದೋ ಮೂಲೆಯಲ್ಲಿದ್ದ ನಂಬಿಕೆಯಿಂದ ಲ್ಯಾಪಿಗೆ ಜೀವ ಕೊಟ್ಟಳು. ಅಮ್ಮ ಮತ್ತು ವಸಂತ್ ಇಬ್ಬರು ಮಾತನಾಡಿದ್ದರು. ವರ್ಷಾಳಿಗೆ ಮೊದಲು ವಸಂತ್,
“”ಡಿಯರ್, ಅಷ್ಟೊಂದು ಫೋಟೋಸ್ ಕಳಿಸುವ ಅಗತ್ಯಾನೇ ಇರಲಿಲ್ಲ. ಹೃದಯದಲ್ಲಿ ಇಡಿಯಾಗಿ ಅಚ್ಚಾಗಿರೊ ಪ್ರತಿಮೆ ನೀನು. ವಸ್ತುಗಳನ್ನು ಮುಂದಿಟ್ಟು ನೆನಪಿಸೋದು ಬೇಡ. ನೀನಿಲ್ಲದ ಅರ್ಧ ದಿನಕ್ಕೆ ಅರ್ಧ ಜೀವವಾಗಿದೀನಿ. ಕೆಲವರು ಗೆದ್ದಾಗ ಸೋಲುತ್ತಾರೆ. ಕೆಲವರು ಸೋತಾಗ ಗೆಲ್ಲುತ್ತಾರೆ. ನಾನು ನಿನಗೆ ಸೋತವನು. ಆದರೆ ನೀನು…?”
ವರ್ಷಾ ಕೊಂಚ ಚೇತರಿಸಿಕೊಳ್ಳುತ್ತಿದ್ದಾಗಲೇ ಅಮ್ಮನ ಮೇಲ್ ನೋಡಿ ಕಂಪಿಸತೊಡಗಿದಳು. “”ಮಗಳೇ… ಭಾರೀ ಸಂಪತ್ತಿಗಿಂತ ಗುಣಗಳಿಂದಲೇ ಮನುಷ್ಯನಿಗೆ ಗೌರವ. ವಸಂತ್ ವಜ್ರದಂಥವನು. ನಿಮ್ಮಪ್ಪ ಕಟ್ಟಿದ ಭಾಂದವ್ಯ ಸೌಧದಲ್ಲಿ ಅವನೊಂದು ಅಡಿಗಲ್ಲು. ನಿಜ ಮಗಳೇ, ನಿನ್ನನ್ನು ಮಾಡ್ ಆಗಿ ಬೆಳೆಸಿದ್ದೇ ಹೆಂಗರುಳ ವಸಂತನಿಗೆ ಮಗ್ಗಲು ಮುಳ್ಳಾಯ್ತು. ಜಾನ್ಸಿ ಕಾಂಟ್ಯಾಕr… ಮಾಡಿದ ಲಾಯರ್ ನಿಮ್ಮಪ್ಪಾಜಿಗೆ ಪರಿಚಿತರು. ಕಾಲ… ಮಾಡಿದ್ರು ನಿನ್ನ ರಾದ್ಧಾಂತ ಗೊತ್ತಾಯ್ತು. ಬೆಳಿಗ್ಗೆ ಮನೆಗೆ ಬರ್ತಾರಂತೆ ನೀನು ಬಾ. ನಿನ್ನನ್ನು ತಿದ್ದುವ ಪ್ರಯತ್ನಗಳು ಮುಗಿದವು ಅನ್ನಿಸ್ತಿದೆ”.
ಸಮುದ್ರದ ನೀರೆಲ್ಲ ಸಿಹಿಯಾದಾಗ ಬಟ್ಟಲು ಕಳೆದುಕೊಂಡವರಂತಾಗಿಬಿಟ್ಟಳು ವರ್ಷಾ.
.
ಬೆಳಕು ಹರಿಯುವುದಕ್ಕಾಗಿ ವರ್ಷಾಳ ಮನಸ್ಸು ಸೂರ್ಯನನ್ನು ಹಗ್ಗ ಕಟ್ಟಿ ಎಳೆಯುತ್ತಿತ್ತು. ರಾತ್ರಿಯ ಕತ್ತಲೆಯೆಲ್ಲ ಕಳೆದು ಹೋಗಲಿ, ಬೆಳಗಿನ ಬೆಳಕು ಬಾಳಲ್ಲಿ ಬರಲಿ ಅಂದುಕೊಳ್ಳುತ್ತ ಅಮ್ಮನ ಮನೆಗೆ ಬಂದಳು. ತನ್ನ ಊಹೆಗೂ ನಿಲುಕದಂತೆ ಎಲ್ಲರೂ ಇದ್ದದ್ದನ್ನೂ ಕಂಡು ಸ್ತಬ್ಧಳಾಗಿ ನಿಂತಳು. ವಸಂತನೇ ಮುಂದೆ ಬಂದು, “”ಬಾ ವರ್ಷಾ, ಅಮ್ಮ ಎಲ್ಲ ಮಾತಾಡಿದ್ದಾರೆ. ನಾನು ಸೈನ್ ಮಾಡಿದೀನಿ. ಲಾಯರ್ ಜೊತೆ ಹೋಗು, ಜಾನ್ಸಿನೂ ಬರ್ತಾಳೆ. ನಿನ್ನ ನಿರ್ಧಾರದ ಮೇಲೆ ಎಲ್ಲರ ಬದುಕು ನಿಂತಿದೆ” ಎನ್ನುತ್ತ ಒಳಗೊಳಗೆ ನಗುತ್ತಿದ್ದ. “”ಯಾಕಪ್ಪಾ ಅವಳಿಗೆ ರೇಗಿಸ್ತೀಯಾ? ತಿಳಿದು ಅರ್ಧ ಕೆಟ್ಟರೆ ತಿಳಿಯದೆ ಇನ್ನರ್ಧ ಕೆಟ್ಟಿರುತ್ತಾಳೆ. ನೋಡಿ ಮಕ್ಕಳಾ, ಜೀವನ ಅಂದ್ರೆ ಒಂದು ಕಿವಿಗೆ ಸಂಗೀತ ಇನ್ನೊಂದು ಕಿವಿಗೆ ಶೋಕಗೀತೆ. ಓರೆಕೋರೆ ತಿದ್ದದಿದ್ದರೆ ವಜ್ರ ಮಿನುಗಲ್ಲ, ಕಷ್ಟಗಳಿಲ್ಲದೆ ಬದುಕೋಕಾಗಲ್ಲ. ಹಣಕ್ಕೋಸ್ಕರ ಲಾಯರಿಕಿ ಮಾಡಿದ್ರೆ ಕೋಟ್ಯಾಧಿಪತಿಯಾಗುತ್ತಿದ್ದೆ. ಮೊಬೈಲ…-ಲ್ಯಾಪ್ ಯಾವಾಗ್ಲೋ ನಮ್ಮ ಕೈಗೆ ಬಂದಿವೆ. ನಾವು ನಮಗೆ ಬೇಕಾದಷ್ಟು ಬಳಸಿಕೊಂಡ್ವಿ. ಆದರೆ ನೀವು…?” ಮಧ್ಯದಲ್ಲೊಮ್ಮೊಮ್ಮೆ ಜಾನ್ಸಿಯ ಕಡೆಗೆ ನೋಡುತ್ತಿದ್ದ ಲಾಯರ್ ಮಾತು ನಿಲ್ಲಿಸಿದರು. ಅಮ್ಮನಿಗೆ ಮುಖ ತೋರಿಸಲಾಗದೆ ಅಳುತ್ತಿದ್ದ ವರ್ಷಾಳನ್ನು ವಸಂತನೇ ಕೈಹಿಡಿದುಕೊಂಡು ರೂಮಿನೊಳಗೆ ಕರೆದುಕೊಂಡು ಹೋದ. ಜಾನ್ಸಿ ತನ್ನ ಗಂಡನಿಗೆ ಕಾಲ… ಮಾಡಿ, “”ಸಾರೀ ಕಣ್ರೀ, ಲಾಯರ್ ಹತ್ತಿರ ಹೋಗಿ ಲಾಸ್ಟ್ ಹೀಯರಿಂಗ್ ನಾವು ಬರಲ್ಲ ಅಂತಾ ಹೇಳಿ ಸೆಟ್ಲಮೆಂಟ… ಆಫ್ ಔಟ… ಆಫ್ ಕೋರ್ಟ್ ಫಾರ್ಮ್ ತಗೊಂಡು ಮನೆಗೆ ಬನ್ನಿ. ನಾನು ನಿಮಗೋಸ್ಕರ ಕಾಯ್ತಾ ಇರ್ತೀನಿ”. ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು. ಲಾಯರ್ ಮುಖದಲ್ಲಿ ನಗು ಮೂಡಿತ್ತು. ಸೋಮು ಕುದುರಿಹಾಳ