ಕಲಬುರಗಿ: ಸಾದ್ವಿ ಶಿರೋಮಣಿ ಹೇಮ ರೆಡ್ಡಿ ಮಲ್ಲಮ್ಮ ಅವರಂತ ಮಹನೀಯರು ಸಮಾಜದಲ್ಲಿ ಜಾಗೃತಿ ಮೂಡಿಸುವ ಸಂದೇಶಗಳನ್ನು ಸಾರಿದ್ದು, ಅವುಗಳಿಂದ ನಾವು ಪ್ರೇರೇಪಿತರಾಗಬೇಕೆಂದು ಉನ್ನತ ಶಿಕ್ಷಣ ಸಚಿವರಾದ ಸಮಕುಲಾಧಿಪತಿ ಡಾ| ಸಿ.ಎನ್.ಅಶ್ವತ್ಥ ನಾರಾಯಣ ಹೇಳಿ ದರು.
ನಗರದ ಗುಲಬರ್ಗಾ ವಿಶ್ವವಿದ್ಯಾಲ ಯದಲ್ಲಿ ಶನಿವಾರ ರಾಷ್ಟ್ರೀಯ ಉತ್ಛತರ ಶಿಕ್ಷಾ ಅಭಿಯಾನ (ರೂಸಾ) ಅಡಿಯಲ್ಲಿ ನಿರ್ಮಿಸಲಾದ ಸಾದ್ವಿ ಶಿರೋಮಣಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಮಹನೀಯರ ಅಧ್ಯಯನದಿಂದ ಪ್ರೇರಣೆ ಪಡೆಯಬೇಕು. ಆಗ ಮಾತ್ರ ಜೀವನ ಸಾರ್ಥಕತೆ ಸಾಧ್ಯ. ಈಗಿನ ಕಾಲಘಟ್ಟದಲ್ಲಿ ಮಹನೀಯರ ಸಂದೇಶಗಳನ್ನು ಅರಿಯುವುದರಿಂದ ಹೆಚ್ಚು ಅನುಕೂಲಗಳು ಇವೆ. ಎಲ್ಲೆಡೆ ಸ್ವಾರ್ಥತೆ ಹೆಚ್ಚುತ್ತಿದೆ. ಹಣಕ್ಕೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಎಲ್ಲ ಅನುಕೂಲತೆ ಪಡೆದುಕೊಂಡಿದ್ದರೂ, ಮಾನವನಿಗೆ ಇನ್ನಷ್ಟು ಹಣ ಗಳಿಸಬೇಕೆಂಬ ದಾಹ ಹೆಚ್ಚುತ್ತಿದೆ. ಅಲ್ಲದೇ, ಎಲ್ಲರೂ ತಪ್ಪು ಮಾಡುತ್ತಾರೆ, ನಾವು ತಪ್ಪು ಮಾಡಿದರೆ ಏನಾಗುತ್ತದೆ ಎಂಬ ಮನಸ್ಥಿತಿ ಬೆಳೆ ಯುತ್ತಿದೆ. ಇದು ಸರಿಯಲ್ಲ ಎಂದರು.
ಮಹನೀಯರ ಹೆಸರಲ್ಲಿ ಸ್ಥಾಪನೆ ಮಾಡುವ ಅಧ್ಯಯನ ಪೀಠಗಳು ಕೇವಲ ಸರ್ಕಾರದ ಅನುದಾನ ಆಶ್ರಯಿಸುವಂತೆ ಆಗಬಾರದು. ಇಂತಹ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರಗಳಿಗೆ ನೆರವು ನೀಡಲು ದಾನಿಗಳು ಮುಂದೆ ಬರಬೇಕು. ಈ ಮೂಲಕ ಸಂಶೋಧನೆ ಮಾಡುವವರಿಗೆ ಅನುಕೂಲವಾಗಲಿದೆ ಎಂದರು.
ಕುಲಪತಿ ಪ್ರೊ| ದಯಾನಂದ ಅಗಸರ ಮಾತನಾಡಿ, ವಿವಿಯಲ್ಲಿ 11 ಜನ ಮಹನೀಯರ ಹೆಸರಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳಿವೆ. ಆದರೆ, ಅವುಗಳ ಉದ್ದೇಶ ಮತ್ತು ಸಾಹಿತ್ಯ ಚಟುವಟಿಕೆ ಈಡೇರಿಸಲು ಅನುದಾನ ಕೊರತೆ ಇದೆ. ಆದ್ದರಿಂದ ಸರ್ಕಾರ ಅಥವಾ ಕೆಕೆಆರ್‌ಡಿಬಿ ಅನುದಾನ ಕಲ್ಪಿಸಬೇಕು ಎಂದರು.
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾ ತ್ರೇಯ ಪಾಟೀಲ ರೇವೂರ, ಎಂಎಲ್‌ಸಿ ಶಶೀಲ ನಮೋಶಿ, ರಫೀಕ್ ಯತಿಂಖಾನ್, ಪ್ರೊ| ಬಸವರಾಜ ಸಿ.ಎಸ್., ಕುಲಸಚಿವ ಶರಣಬಸಪ್ಪ ಕೋಟ್ಟೆಪ್ಪಗೋಳ್, ಕುಲ ಸಚಿವ (ಮೌಲ್ಯ) ಪ್ರೊ| ಸೋನಾರ ನಂದಪ್ಪ, ವಿತ್ತಾ ಧಿಕಾರಿ ಪ್ರೊ| ಎನ್.ಬಿ. ನಡುಮನಿ, ಹೇಮರೆಡ್ಡಿ ಮಲ್ಲಮ್ಮ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರದ ಸಲಹಾ ಸಮಿತಿ ಸದಸ್ಯರಾದ ವಿಶಾಲಾಕ್ಷಿ ಕರಡ್ಡಿ, ಚನ್ನಾರೆಡ್ಡಿ, ನಿರ್ದೇಶಕ ಪ್ರೊ| ಎಸ್.ಎಸ್. ಮುಲಗಿ ಮತ್ತಿತರರು ಇದ್ದರು.
ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾದ ಅಧ್ಯಯನಪೀಠಗಳಿಗೆ ಸರ್ಕಾರ, ಇಲ್ಲವೇ ಕೆಕೆಆರ್‌ಡಿಬಿ ಮೂಲಕ ನೆರವು ನೀಡುವ ಕುರಿತು ಚಿಂತಿಸಲಾಗುವುದು. ಜತೆಗೆ ಇಂತಹ ಕೇಂದ್ರಗಳಿಗೆ ನೆರವು ನೀಡಲು ದಾನಿಗಳು ಮುಂದೆ ಬರಬೇಕು.
-ಡಾ| ಸಿ.ಎನ್.ಅಶ್ವತ್ಥ ನಾರಾಯಣ, ಉನ್ನತ ಶಿಕ್ಷಣ ಸಚಿವ