ಮಂಡ್ಯ: ಕೋವಿಡ್ ದಿನನಿತ್ಯ ಜೀವನ ನಡೆಸುವ ಸಾಮಾನ್ಯ ಜನರಿಗೆ ದೊಡ್ಡ ಅಘಾತ ನೀಡಿದೆ. ಮಾನವೀಯ ಸಂಬಂಧಗಳಿಗೆ ತೊಡಕಾಗಿದೆ ಎಂದುಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ನಗರದ ಹೊರವಲಯದಲ್ಲಿರುವ ಅಗ್ರಿಸಂಸ್ಥೆ ಆವರಣದಲ್ಲಿಅಂತಾರಾಷ್ಟ್ರೀಯಲಯನ್ಸ್‌ಸಂಸ್ಥೆಗಳ ಒಕ್ಕೂಟ ಜಿಲ್ಲೆ317ಎ, ಟಾಟಾ ಎಜುಕೇಷನ್ ಮತ್ತು ಅಭಿವೃದ್ಧಿ ದತ್ತಿ ಸಂಸ್ಥೆ, ಮುಂಬೈ, ಜಿಲ್ಲಾ ಲಯನ್ಸ್ ಸರ್ವಿಸ್ ಫೌಂಡೇಷನ್, ಜಿಲ್ಲಾ ಲಯನ್ಸ್ ಸೇವಾ ಸಂಸ್ಥೆಗಳು ಆಯೋಜಿಸಿದ್ದ25 ಲಕ್ಷ ರೂ.ಕೋವಿಡ್ -19ರ ಪರಿಕರ ಸಾಮಗ್ರಿಗಳ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ದಿಂದ ಪ್ರಸ್ತುತ ತಲ್ಲಣ ಉಂಟಾಗಿದ್ದು, ಭಯಭೀತಿ ವಾತಾವರಣ ನಿರ್ಮಾಣವಾಗಿದೆ. ಬಡವರು, ಶ್ರೀಮಂತರು ಎನ್ನದೆ ವಿವಿಧ ರೀತಿಯ ಸಮಸ್ಯೆಗಳು ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಇಂಥ ಸಂಕಷ್ಟದಲ್ಲಿ ಲಯನ್ಸ್ ಸಂಸ್ಥೆಗಳು ಸೇರಿದಂತೆಕೆಲವು ಸಂಘ-ಸಂಸ್ಥೆಗಳು ಸಮಾಜ ಸೇವೆ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಅತ್ಯಂತ ಮಾದರಿ ಕೆಲಸ: ಲಾಕ್‌ಡೌನ್‌ನಿಂದ ಪ್ರತಿಮನೆಗಳಲ್ಲೂ ಆರ್ಥಿಕ ಸಮಸ್ಯೆ ಉಂಟಾಗಿದೆ. ಕೋವಿಡ್ ಹಾಗೂ ಮನೆಯವರನ್ನು ಅಸ್ಪಶ್ಯರಂತೆ ನೋಡುವ ಕಾಲ ಬಂದಿದೆ. ಜಿಲ್ಲಾಸ್ಪತ್ರೆಗೆ ಬಡವರು, ನಿರ್ಗತಿಕರು ಆರೋಗ್ಯ ತಪಾಸಣೆ ಬರುತ್ತಾರೆ. ರೋ ಗಿಗಳ ಸೇವಾ ದೃಷ್ಟಿಯಿಂದ ಲಯನ್ಸ್ ಪದಾಧಿಕಾರಿ ಗಳು ಸಮಾರು25 ಲಕ್ಷ ರೂ.ಕೊರೊನಾ ಪರಿಕರ ಸಾಮಗ್ರಿಗಳ ವಿತರಣೆ ಮಾಡುತ್ತಿರುವುದು ಅತ್ಯಂತ ಮಾದರಿ ಕೆಲಸವಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಿಮ್ಸ್ ವೈದ್ಯರು, ಸಿಬ್ಬಂದಿಗಳು ಮತ್ತು ನಾಗರಿಕರ ಸಹಕಾರ ಪ್ರಮುಖವಾಗಿದೆ. ರಾಜ್ಯದಲ್ಲಿ ಜಿಲ್ಲೆಯು ಕೋವಿಡ್ ನಿಯಂತ್ರಣದಲ್ಲಿ ಅಂಕಿ ಅಂಶಗಳ ಪ್ರಕಾರ ಉತ್ತಮ ಸ್ಥಿತಿಯಲ್ಲಿದೆ ಎಂದರು.
ಲಯನ್ಸ್ ಮಾಜಿ ರಾಜ್ಯಪಾಲ ಡಾ.ನಾಗ ರಾಜು ವಿ.ಬಾಯರಿ ಮಾತನಾಡಿ, ಸಮಾಜಸೇವೆ ಮತ್ತು ಸಾರ್ವಜನಿಕರಿಗೆ ಅಗತ್ಯ ಸೇವೆ ಸಲ್ಲಿಸುವುದೇ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಗಳ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮೂಲಕ ಕೋವಿಡ್-19ರ ಪರಿಕರಗಳನ್ನು ಜಿಲ್ಲಾಸ್ಪತ್ರೆಯ ಅಧೀಕ್ಷಕ ಡಾ.ಶಿವಕುಮಾರ್ ಅವರಿಗೆ ಹಸ್ತಾಂತರಿಸಿ ದರು. ಕೋವಿಡ್ ಸೈನಿಕಕಾರ್ಯಪಡೆ ಅಧ್ಯಕ್ಷ ಡಾ.ಪಿ.ಆರ್.ಎಸ್.ಚೇತನ್ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ಲಯನ್ಸ್ ಸಂಸ್ಥೆ ರಾಜ್ಯಪಾಲ ಡಾ.ಜಿ.ಎ.ರಮೇಶ್, 2ನೇ ಉಪ ರಾಜ್ಯಪಾಲ ಡಾ.ಶ್ರೀವಿದ್ಯಾ, ಮಾಜಿ ರಾಜ್ಯಪಾಲ ಡಾ.ಕೆ.ಎಂ.ಮುನಿಯಪ್ಪ, ಮಾಜಿ ರಾಜ್ಯಪಾಲ ಎಂ.ಅನಿಲ್‌ಕುಮಾರ್, ರೈತ ಕಲ್ಯಾಣ ಸಂಸ್ಥೆ ಅಧ್ಯಕ್ಷ ಕೆ.ಟಿ.ಹನುಮಂತು, ಕೃಷಿಕ ಲಯನ್ಸ್ ಸಂಸ್ಥೆ ಅಧ್ಯಕ್ಷ ಶಶಿಧರ್‌ಈಚಗೆರೆ,ಖಜಾಂಚಿ ಮಾದೇ ಗೌಡ, ನಿಂಗೇಗೌಡ, ಡಾ.ಮೋಹನ್ ಹಾಜರಿದ್ದರು.