Advertisement

ವೃತ್ತಿಯಲ್ಲಿ ಆಸಕ್ತಿಯಿದ್ದರೆ ಜೀವನ ಸುಗಮ: ಶಿವಗುಂಡಪ್ಪ

11:46 AM Aug 06, 2018 | Team Udayavani |

ಭಾಲ್ಕಿ: ನಾವು ಯಾವುದೇ ವೃತ್ತಿಯಲ್ಲಿದ್ದರೂ, ನಾವು ಮಾಡುವ ಕೆಲಸದಲ್ಲಿ ನಮಗೆ ಆಸಕ್ತಿ ಇರಬೇಕು. ಆಗ ಮಾತ್ರ ನಮ್ಮ ವೃತ್ತಿ ಜೀವನ ಸುಗಮವಾಗಿ ಸಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಗುಂಡಪ್ಪ ಎಚ್‌.ಎಸ್‌. ಹೇಳಿದರು.

Advertisement

ಕಲವಾಡಿ ಗ್ರಾಮದ ಮಹಾತ್ಮಾಗಾಂಧಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ನಿವೃತ್ತ ಮುಖ್ಯ ಶಿಕ್ಷಕ
ಮನೋಹರ ಮೇತ್ರೆ ಅವರ ಸನ್ಮಾನ, ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಮನೋಹರ ಮೇತ್ರೆಯವರು 33 ವರ್ಷಗಳ ಶಿಕ್ಷಣ ಸೇವೆಯಲ್ಲಿ ನಿರಂತರವಾಗಿ ಆಸಕ್ತಿಯಿಂದ
ಕಾರ್ಯ ನಿರ್ವಹಿಸಿದ್ದಾರೆ. ಅವರ ಉತ್ತಮ ಸೇವೆ ಗುರುತಿಸಿ ಶಿಕ್ಷಣ ಇಲಾಖೆಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತಿದೆ ಎಂದರು. 

ಕಲವಾಡಿಯ ಮಹಾತ್ಮಾಗಾಂಧಿ ಪ್ರೌಢಶಾಲೆಯ ಪ್ರಭಾರ ವಹಿಸಿಕೊಂಡ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿಯವರೂ
ಕ್ರಿಯಾಶೀಲ ವ್ಯಕ್ತಿಗಳಾಗಿದ್ದು, ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ದುಡಿಯುತ್ತಿದ್ದಾರೆ ಎಂದರು.

ಸಮೂಹ ಸಂಪನ್ಮೂಲ ವ್ಯಕ್ತಿ ರಾಜಕುಮಾರ ಸಾಲಿ ಮಾತನಾಡಿ, ಶಿಕ್ಷಕರು ಸದಾ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ದುಡಿಯುವಂತವರಾಗಿರಬೇಕು. ವಿದ್ಯಾರ್ಥಿಗಳ ಲೋಪ ದೋಷಗಳನ್ನು ಕಂಡು ಹಿಡಿದು ಅವರಿಗೆ ಉತ್ತಮ ಮಾರ್ಗದರ್ಶನ ನೀಡಿದಲ್ಲಿ, ವಿದ್ಯಾರ್ಥಿಗಳ ಏಳ್ಗೆ ಖಂಡಿತ ಸಾಧ್ಯ ಎಂದು ಹೇಳಿದರು.

Advertisement

ಗುರುಕುಲ ಶಿಕ್ಷಣ ಸಮುತ್ಛಯ ಬಿ.ಇಡಿ ಕಾಲೇಜಿನ ಪ್ರಾಂಶುಪಾಲ ಮಹಾದೇವ ಪಟೆ ಮಾತನಾಡಿ, ಶಿಕ್ಷಕರಲ್ಲಿ ಕ್ಷಮಾಗುಣವಿರಬೇಕು. ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಪಾಠ ಮಾಡಬೇಕು. ಅಂತಹ ವ್ಯಕ್ತಿತ್ವ ಹೊಂದಿರುವ
ಮನೋಹರ ಮೇತ್ರೆಯವರು 33 ವರ್ಷಗಳಕಾಲ ನಿರಂತರ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರ ನಿವೃತ್ತಿ ಜೀನವ ಸುಖಮಯವಾಗಿ ಸಾಗಲಿ ಎಂದು ಹಾರೈಸಿದರು.
 
ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ ಮಾತನಾಡಿ, ಸುಮಾರು 33 ವರ್ಷಗಳ
ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮನೋಹರ ಮೇತ್ರೆಯವರು ಆದರ್ಶ ಶಿಕ್ಷಕರಾಗಿದ್ದಾರೆ. ಅವರ ಮಾರ್ಗದರ್ಶನದಂತೆ ಮುಂದಿನ ಶಿಕ್ಷಕರೂ ಉತ್ತಮ ರೀತಿಯಿಂದ ಸೇವೆ ಸಲ್ಲಿಸಿ, ಶಾಲೆಯ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತೇವೆ ಎಂದು ಹೇಳಿದರು. 

ಹಿರಿಯ ಶಿಕ್ಷಕ ಯುವರಾಜ ಪಾಟೀಲ, ದೀಪಕ ಗಾಯಕವಾಡ, ಶೋಭಾ ಮಾಸಿಮಾಡೆ, ಪ್ರವೀಣ ಸಿಂಧೆ, ಶಿವಶರಣಪ್ಪ ಸೊನಾಳೆ, ಸುಭಾಷ ಜಲ್ಲೆ, ಪ್ರದೀಪ ಜೊಳದಪಕೆ, ಚಂದ್ರಕಾಂತ ಬಿರಾದಾರ, ಬುದ್ಧಮ್ಮಾ ಕರಕರೆ, ಅಮೃತ ಮುದ್ದಾ, ಪರಶುರಾಮ ಕರ್ಣಂ ಉಪಸ್ಥಿತರಿದ್ದರು. ಶಿವಕುಮಾರ ವಾಡಿಕರ ಸ್ವಾಗತಿಸಿದರು. ಈಶ್ವರಿ ಐನೋಳಿ ನಿರೂಪಿಸಿದರು. ಸಂತೋಷ ಕಾಳೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next