Advertisement
ಯಾವುದೇ ಕಷ್ಟ ಬಂದರೂ ಅದನ್ನು ಇಷ್ಟದಿಂದ ಸ್ವೀಕರಿಸಿ ಮುಂದೆ ನಡೆಯಬೇಕು ಆಗ ಮಾತ್ರ ನೀವು ಸಾಧಿಸುತ್ತೀರಿ. ಜೀವನದಲ್ಲಿ ಯಶಸ್ಸು ಗಳಿಸಲು ಮೊದಲು ನಮ್ಮ ಯೋಚನೆ ದೊಡ್ಡದಾಗಿರಬೇಕು. ಹೀಗೆ ಯೋಚಿಸುವುದರಿಂದ ಲಾಭವಲ್ಲದೆ ನಷ್ಟವೇನೂ ಇಲ್ಲ. ಜೀವನದಲ್ಲಿ ಬರುವ ಯಾವುದೇ ಸಮಸ್ಯೆಗಳಿಗೆ ಹೆದರುವ ಬದಲಾಗಿ ಅದರಿಂದ ಹೊರ ಬರುವ ಮಾರ್ಗ ಹುಡುಕಿಕೊಳ್ಳುವುದು ಬಹಳ ಮುಖ್ಯ. ಒಂದು ಸೋಲು ನಮ್ಮ ಜೀವಕ್ಕಿಂತ ದೊಡ್ಡದಲ್ಲ ಎಂಬುದನ್ನು ಮನಗಂಡು ಅದರಿಂದ ಹೊರಬಂದು ಫಿನಿಕ್ಸ್‌ನಂತೆ ನಿಲ್ಲಲು ಕಲಿಯಬೇಕು.
ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಿ. ಅದರ ಜತೆಜತೆಗೆ ಟೀಕೆಗಳನ್ನು ಪ್ರೀತಿಸಿ, ಟೀಕೆಗಳಿಂದ ಮಾತ್ರ ನೀವು ಬೆಳೆಯಲು ಸಾಧ್ಯ. ಯಾವ ಟೀಕೆಗಳು ನಿಮ್ಮನ್ನು ದೃತಿಗೆಡಿಸದಿರಲಿ ಬದಲಾಗಿ ನಿಮ್ಮ ಸಾಧನೆಯಿಂದಲೇ ಟೀಕೆಗೆ ಉತ್ತರಿಸಲು ಪ್ರಯತ್ನಿಸಿ. ಇದೆಲ್ಲದರೊಂದಿಗೆ ಸಂಬಂಧಗಳನ್ನು ಗಟ್ಟಿಯಾಗಿ ನಿಭಾಯಿಸಿ. ಜೀವನದ ಪ್ರತೀ ಹಂತದಲ್ಲೂ ಸಂಬಂಧಗಳಿಗೆ ಬೆಲೆ ಕೊಡಿ, ಸಂಬಂಧಗಳನ್ನು ಗೌರವದಿಂದ ಉಳಿಸಿಕೊಳ್ಳಿ. ಇವಿಷ್ಟನ್ನು ಗಮನದಲ್ಲಿರಿಸಿದರೆ ಗೆಲುವು ನಿಮ್ಮದೇ!! -ದೀಪ್ತಿ ಉಜಿರೆ