Advertisement

ದೀನ ದಲಿತರ ಸೇವೆಯಲ್ಲೇ ಜೀವನ ಸಾರ್ಥಕತೆ: ಹಿರೋಳಿ

11:48 AM Nov 11, 2018 | |

ಕಲಬುರಗಿ: ಜೀವಿತಾವಧಿಯಲ್ಲಿ ಸಾಧ್ಯವಾದಷ್ಟು ದೀನ-ದಲಿತರಿಗೆ ಸಹಾಯ ಮಾಡಬೇಕು. ಅವರ ಸೇವೆಯಲ್ಲಿಯೇ ಬದುಕಿನ ಸಾರ್ಥಕತೆ ಇದೆ. ನಾವು ಅಳಿದರೂ ಉಳಿಯುವಂಥ ಸೇವೆ ನಮ್ಮಿಂದಾಗಬೇಕು ಎಂದು ತಹಶೀಲ್ದಾರ್‌ ಅಶೋಕ ಹಿರೋಳಿ ಮಾತನಾಡಿದರು.

Advertisement

ನಗರದ ಹೊರವಲಯದ ಸೈಯದ್‌ ಚಿಂಚೋಳಿ ಕ್ರಾಸ್‌ನಲ್ಲಿರುವ ಮಹಾದೇವಿ ತಾಯಿ ವೃದ್ಧಾಶ್ರಮದ ನಿಸರ್ಗದ ಮಡಿಲಲ್ಲಿ ಇಲ್ಲಿನ ದೇವೀಂದ್ರಪ್ಪ ಜಿ.ಸಿ.ಸಂಗೀತ ಸಾಹಿತ್ಯ ಕಲಾ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವಜ್ಯೋತಿ ಪ್ರತಿಷ್ಠಾನವು ಆಯೋಜಿಸಿದ “ಆರದಿರಲಿ ಬೆಳಕು’ ಇದು ಭರವಸೆ ಬೆಳಕು… ಎನ್ನುವ ವಿಶೇಷ ಸಂದೇಶ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವೀರಶೈವ ಮಹಾಸಭಾದ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ ಮಾತನಾಡಿ, ಬಾಲ್ಯದಲ್ಲಿ ನಾವು ನಮ್ಮ ತಂದೆ-ತಾಯಿಯಿಂದ ಪಡೆದ ಪ್ರೀತಿ, ವಾತ್ಸಲ್ಯ, ಸೇವೆಯನ್ನು ಅವರ ವೃದ್ಯಾಪ್ಯದಲ್ಲಿ ನೀಡಿ ಜೀವನವನ್ನು ಪಾವನಗೊಳಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಹಿರಿಯ ಸಾಹಿತಿ ಡಾ| ವಾಸುದೇವ ಸೇಡಂ, ಮಳಖೇಡದ ಅಲ್ಟ್ರಾಟೆಕ್‌ ಕಮ್ಮುನಿಟಿ ಫೌಂಡೇಷನ್‌ ಮುಖ್ಯಸ್ಥೆ ಚಂದಮ್ಮ ಅಂಬಲಗಿ, ಇಂಡಿಯನ್‌ ಬ್ಯಾಂಕಿನ ವ್ಯವಸ್ಥಾಪಕಿ ರಮಾ ಎಸ್‌.ಧರ್ಗಿ, ಸಹಕಾರಿ ಧುರೀಣ ಮಲ್ಲಿಕಾರ್ಜುನ ಖೇಮಜಿ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಸಂದೀಪ, ಸಮಾಜ ಚಿಂತಕಿ ರೀಟಾ ಜೇಮ್ಸ್‌ ಮಿನೇಂಜೇಸ್‌, ಸಾಹಿತ್ಯ ಪ್ರೇಮಿ ರವೀಂದ್ರಕುಮಾರ ಭಂಟನಳ್ಳಿ, ಚಿಂತಕ ಶಿವಕುಮಾರ ದೊಡ್ಮನಿ, ಕಾಂಗ್ರೇಸ್‌ ಯುವ ಮುಖಂಡ ಶಿವಾನಂದ ಹೊನಗುಂಟಿ, ಹಿರಿಯ ಸಾಹಿತಿ ಶಿವಕವಿ ಜೋಗೂರ, ಜಲಜಾಕ್ಷಿ ಕೋರೆ, ಪ್ರಮುಖರಾದ ಡಾ| ನಾಗರತ್ನಾ ಬಿ.ದೇಶಮಾನ್ಯೆ, ಡಾ| ಕೆ.ಗಿರಿಮಲ್ಲ, ಪರಮೇಶ್ವರ ಶಟಕಾರ, ಶಿವರಾಜ ಅಂಡಗಿ, ಶ್ರೀಕಾಂತ ಪಾಟೀಲ ತಿಳಗೂಳ, ಶಿವಾನಂದ ಮಠಪತಿ, ಸವಿತಾ ಪಾಟೀಲ, ಜಗದೀಶ ಮರಪಳ್ಳಿ, ನಾಗೇಂದ್ರಪ್ಪ ಮಾಡ್ಯಾಳೆ, ಪ್ರಭುಲಿಂಗ ಮೂಲಗೆ, ಸತೀಶ ಸಜ್ಜನ ಹಾಗರಗುಂಡಗಿ, ಎಸ್‌.ಬಿ.ಐ.ಬ್ಯಾಂಕಿನ ವ್ಯವಸ್ಥಾಪಕ ಅಶೋಕ ಕಾಳೆ, ವಿರಾಜಕುಮಾರ ವಿ.ಕಲ್ಯಾಣ ಹಾಗೂ ನೂರಾರು ಜನರು ಭಾಗವಹಿಸಿದ್ದರು.

ಖ್ಯಾತ ಸಂಗೀತ ಕಲಾವಿದರಾದ ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಶ್ರೀಧರ ಹೊಸಮನಿ, ನಾಗಲಿಂಗಯ್ಯ ಸ್ಥಾವರಮಠ, ಕವಿರಾಜ ಪಾಟೀಲ ಭಂಟನಳ್ಳಿ ಅವರಿಂದ ಜಾನಪದ ಝೇಂಕಾರ ಮುದುಡಿದ ಮನಗಳಿಗೆ ಮುದ ನೀಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next