Advertisement

ಜೀವನದಿ ನೇತ್ರಾವತಿಯಿದ್ದರೂ ಕುಡಿಯುವ ನೀರಿಗೆ ಬರ

10:28 AM Apr 04, 2019 | pallavi |

ಪುಂಜಾಲಕಟ್ಟೆ : ಜಿಲ್ಲೆಯ ಜೀವನದಿ ನೇತ್ರಾವತಿ ಮೈಯೊಡ್ಡಿ ಹರಿಯುವ ಸರಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಅಭಾವ ಕಂಡು ಬಂದಿದೆ. ಪಕ್ಕದಲ್ಲಿಯೇ ನದಿ ಹರಿಯುತ್ತಿದ್ದರೂ ಜನ ಕುಡಿಯುವ ನೀರಿಗೆ ತತ್ವಾರ ಪಡುವ ಸ್ಥಿತಿ ನಿರ್ಮಾಣಗೊಂಡಿದೆ.

Advertisement

ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಸರಪಾಡಿ ಬಹುತೇಕ ನೇತ್ರಾವತಿ ನದಿ ತಟದ ಪಕ್ಕದಲ್ಲಿದೆ. ಆದರೆ ಗ್ರಾ.ಪಂ.ವ್ಯಾಪ್ತಿಯ ಅಲ್ಲಿಪಾದೆ ಪರಿಸರದ ಸುಮಾರು 40 ಕುಟುಂಬಗಳು ಮಾತ್ರ ನೀರಿನ ಸಮಸ್ಯೆಗೆ ಒಳಗಾಗಿವೆ.

ಮಳೆಗಾಲದಲ್ಲಿ ಅಣೆಕಟ್ಟಿನಿಂದಾಗಿ ಮುಳುಗಡೆಯಾಗುವ ಪೆರ್ಲ- ಬೀಯ ಪಾದೆ ಪ್ರದೇಶ ಬೇಸಗೆಯಲ್ಲಿ ಬರಡಾಗಿದೆ. ಜನರು ಕುಡಿಯಲು ಹಾಗೂ ಕೃಷಿ ಉಳಿಸಲು ಖಾಸಗಿಯಾಗಿ ನದಿಗೆ ಪಂಪ್‌ ಅಳವಡಿಸಿ ಒಂದೂವರೆ ಕಿ.ಮೀ. ದೂರದವರೆಗೆ ಪೈಪ್‌ ಮೂಲಕ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಿ ಕೊಂಡಿದ್ದಾರೆ. ಅಲ್ಲಿಪಾದೆ ಯಲ್ಲಿ ಕೊಳವೆ ಬಾವಿ ಕೆಟ್ಟಿರು ವುದೇ ಇದಕ್ಕೆಲ್ಲ ಕಾರಣವಾಗಿದೆ.

ಕೈಕೊಟ್ಟ ಕೊಳವೆ ಬಾವಿಗಳು
ಅಲ್ಲಿಪಾದೆಯಲ್ಲಿ ಎರಡು ಕೊಳವೆ ಬಾವಿಗಳು ಕೈಕೊಟ್ಟಿವೆ. ಇಲ್ಲಿನ ಒಂದು ಕೊಳವೆಬಾವಿಯಲ್ಲಿ ಸಾಕಷ್ಟು ನೀರಿ ದ್ದರೂ ಪಂಪ್‌ ಅಳವಡಿಕೆಗೆ ತಾಂತ್ರಿಕ ತೊಂದರೆ ಬಂದ ಕಾರಣ ಅದರ ಉಪಯೋಗ ಕೈ ಬಿಟ್ಟು ಹೊಸ ಕೊಳವೆ ಬಾವಿ ಕೊರೆಸಲಾಯಿತು. ದುರಾ ದೃಷ್ಟವಶಾತ್‌ ಅದು ಬರಡಾ ದುದರಿಂದ ನೀರಿನ ಸಮಸ್ಯೆ ಬಿಗಡಾಯಿಸಿದೆ.

ಪ್ರಸ್ತುತ ಸ್ಥಳೀಯ ಸಂತ ಅಂತೋನಿ ಚರ್ಚ್‌ ನವರು ನದಿಯಿಂದ ಪಂಪ್‌ ಮೂಲಕ ಮೇಲೆತ್ತಿದ ನೀರನ್ನು ಪಂ. ಟ್ಯಾಂಕ್‌ಗೆ ಸರಬರಾಜು ಮಾಡುವ ಮೂಲಕ ಕುಡಿಯುವ ನೀರಿನ ಆಶ್ರಯ ಒದಗಿಸಿದ್ದಾರೆ. ಆದರೆ ಕೃಷಿ ಕಾರ್ಯಕ್ಕಾಗಿ ಜನರು ನೇತ್ರಾವತಿಗೆ ಪೈಪ್‌ ಅಳವಡಿಸಿ ಬಹುದೂರದಿಂದ ನೀರು ಸರಬರಾಜು ಗೊಳಿಸುತ್ತಿದ್ದಾರೆ. ಕಳೆದ ವರ್ಷ ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿ ಒಂದು ತಿಂಗಳು ಟ್ಯಾಂಕರ್‌ನಲ್ಲಿ ನೀರು ಪೂರೈಕೆ ನಡೆಸಲಾಗಿತ್ತು.

Advertisement

ಸರಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಪಾಡಿ ಮತ್ತು ದೇವಶ್ಯಮೂಡೂರು ಗ್ರಾಮಗಳಿದ್ದು, ಹೆಚ್ಚಿನವರು ಖಾಸಗಿ ಬಾವಿ ಅಥವಾ ಖಾಸಗಿ ಕೊಳವೆ ಬಾವಿ ಯನ್ನು ಅವಲಂಬಿಸಿದ್ದಾರೆ. ಆದರೆ ಬಡ, ಮಧ್ಯಮ ವರ್ಗದವರು ಕುಡಿಯುವ ನೀರಿಗಾಗಿ ಗ್ರಾ.ಪಂ.ನ ಸಾರ್ವಜನಿಕ ನೀರಿನ ವ್ಯವಸ್ಥೆಯನ್ನೇ ಅವಲಂಬಿಸಬೇಕಾಗಿದೆ.

ಶಂಬೂರು ಎಎಂಆರ್‌ ಅಣೆಕಟ್ಟಿನಲ್ಲಿ ನೀರು ನಿಂತರೆ ನದಿಯಲ್ಲಿ ಸಾಧಾರಣ ನೀರಿರುತ್ತದೆ. ಒಂದೊಮ್ಮೆ ನೀರು ಬಿಟ್ಟರೆ ನೀರು ಬರಿದಾಗುತ್ತದೆ. ಮಂಗಳೂರಿಗೆ ಕುಡಿಯುವ ನೀರು ಪೂರೈಸಲು ತುಂಬೆ ಯಲ್ಲಿ ಕಟ್ಟಿರುವ ಅಣೆಕಟ್ಟಿನಿಂದಾಗಿ ಮೇಲ್ಭಾಗದ ಪ್ರದೇಶಗಳಿಗೆ ನೀರಿನ ಕೊರತೆಯಾಗುತ್ತದೆ. ಇದರಿಂದ ಅಂತ ರ್ಜಲ ಬತ್ತಿ ಹೋಗಿ ಕೊಳವೆ ಬಾವಿಯಲ್ಲಿ ನೀರು ಬತ್ತುತ್ತದೆ.

ಸರಪಾಡಿ ಗ್ರಾಮ ಪಂಚಾಯತ್‌ ಜನಸಂಖ್ಯೆ: ಸರಪಾಡಿ – 4,142, ದೇವಸ್ಯ ಮೂಡೂರು- 928,
ಒಟ್ಟು- 5,070.

ಕೊಳವೆ ಬಾವಿ: ಸರಪಾಡಿ-6, ದೇವಸ್ಯಮೂಡೂರು-2, ಒಟ್ಟು-8.
ಸರಕಾರಿ ಬಾವಿ: ಸರಪಾಡಿ-4, ದೇವಸ್ಯಮೂಡೂರು-2, ಒಟ್ಟು 6.
ಕೆರೆ: ಇಲ್ಲ
ಓವರ್‌ಹೆಡ್‌ಟ್ಯಾಂಕ್‌: ಸರಪಾಡಿ-8, ದೇವಸ್ಯಮೂಡೂರು-2, ಒಟ್ಟು 10.
ಖಾಸಗಿ ಕೊಳವೆ ಬಾವಿ: ಸರಪಾಡಿ-142, ದೇವಸ್ಯ ಮೂಡೂರು-28, ಒಟ್ಟು-170.

2,20,492 ರೂ. ಮೀಸಲು
ಪ್ರಸಕ್ತ ವರ್ಷ 14ನೇ ಹಣಕಾಸು ಯೋಜನೆಯಲ್ಲಿ 2,20,492 ರೂ. ಗಳನ್ನು ಕುಡಿಯುವ ನೀರಿಗಾಗಿ ಮೀಸಲಿರಿಸಲಾಗಿತ್ತು. ಉಳಿದಂತೆ ನಳ್ಳಿ, ಪೈಪ್‌ಲೈನ್‌ ದುರಸ್ತಿಗೆ ಪಂಚಾಯತ್‌ ತೆರಿಗೆ ಹಣವನ್ನು ಬಳಸಲಾಗಿದೆ ಎಂದು ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.

 ಬಹುಗ್ರಾಮ ಕುಡಿಯುವ ನೀರಿನ ಯೋಜನೆ
ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ಅಲ್ಲಿಪಾದೆಯಲ್ಲಿ ನೀರಿನ ಸಮಸ್ಯೆ ಇದೆ. ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಮೋದನೆಗೊಂಡು ಅನುಷ್ಠಾನ ಹಂತದಲ್ಲಿದೆ. ಇಲ್ಲಿನ ನೀರಿನ ಸಮಸ್ಯೆಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೇ ಶಾಶ್ವತ ಪರಿಹಾರವಾಗಿದೆ. ಕಾಮಗಾರಿ ಪ್ರಗತಿಯಲ್ಲಿದೆ.
 - ಧನಂಜಯ, ಪ್ರಭಾರ ಪಂ.ಅ. ಅಧಿಕಾರಿ, ಸರಪಾಡಿ ಗ್ರಾ.ಪಂ.

ರತ್ನದೇವ್‌ ಪುಂಜಾಲಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next