Advertisement

ಪುರಾಣ ಕೇಳಿದರೆ ಜೀವನ ಪಾವನ: ಗಿರಿಮಲ್ಲ ಬೆಳ್ಳುಂಡಗಿ

04:59 PM Aug 12, 2024 | Team Udayavani |

■ ಉದಯವಾಣಿ ಸಮಾಚಾರ
ತೆಲಸಂಗ: ಪುರಾಣ-ಪುಣ್ಯಕಥೆಗಳ ಶ್ರವಣದಿಂದ ಜೀವನ ಪಾವನವಾಗುತ್ತದೆ ಎಂದು ಸಿರಡೋಣದ ಡೊಳ್ಳಿನ ಹಾಡುಗಳ ಹಿರಿಯ ನಿರ್ದೇಶಕ ಗಿರಿಮಲ್ಲ ಬೆಳ್ಳುಂಡಗಿ ಹೇಳಿದರು. ಕನ್ನಾಳ ಗ್ರಾಮದ ಸಿದ್ಧರಾಮೇಶ್ವರ ದೇವಸ್ಥಾನದ ವನದಲ್ಲಿ ನಡೆದ 38ನೇ ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪುರಾಣ ಶ್ರವಣ ಕಾರ್ಯಕ್ರಮ, ಸತ್ಸಂಗ, ಸತ್ಸಂಪ್ರದಾಯದಿಂದ ಜೀವನ ಪಾವನಗೊಂಡು ಶಾಂತಿ ನೆಲೆಸಿದೆ. ಮನುಷ್ಯ ಹೊಟ್ಟೆ ಹಸಿವು ಹೇಗಾದರೂ ಹೋಗಲಾಡಿಸಬಲ್ಲ. ಆದರೆ ಜ್ಞಾನದ ಹಸಿವನ್ನು ಸತ್ಸಂಗದಿಂದ ಮಾತ್ರ ನೀಗಿಸಿಕೊಳ್ಳಲು ಸಾಧ್ಯ. ಸತ್ಸಂಗದ ಮೂಲಕ ದೊರಕಿದ ನಿಶ್ಚಲವಾದ ಭಕ್ತಿ ಮೂಲಕ ಜೀವನದಲ್ಲಿ ಮುಕ್ತಿ ಕಾಣಬಹುದಲ್ಲದೇ ಪುಣ್ಯ ಪ್ರಾಪ್ತಿ ಪಡೆದು ಸಾರ್ಥಕ ಬದುಕು ನಡೆಸಬಹುದು ಎಂದರು.

ನಿವೃತ್ತ ಶಿಕ್ಷಕ ಬಿ.ಜಿ. ಸಾರ್ವಾಡ ಮಾತನಾಡಿ, ಇಂದಿನ ದಿನಗಳಲ್ಲಿ ಮನೆಯಿಂದಲೇ ಸಂಸ್ಕಾರ ನೀಡುವ ಕಾರ್ಯ ನಡೆಯಬೇಕು. ಸಾಮಾಜಿಕವಾಗಿ ಇಂದು ಮನೆ-ಮನಸ್ಸು ಒಂದಾಗಿಸುವ ಕೆಲಸ ನಡೆಯಬೇಕು ಎಂದರು.

ನಿವೃತ್ತ ಶಿಕ್ಷಕ ಬಿ.ಎನ್‌. ಅವಟಿ ಮಾತನಾಡಿ, ಚಂಚಲ ಮನಸ್ಸಿಗೆ ಬುದ್ಧಿ ನೀಡಿ ಎಚ್ಚರಿಸುತ್ತ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಚಂಚಲ ಮನಸ್ಸಿನ ಕಡಿವಾಣಕ್ಕೆ ಸಂಸ್ಕಾರ ಬೇಕು. ಪ್ರಚಾರದ ಮೋಹ ಬಿಟ್ಟು ದೈವಿಕ ಪ್ರಜ್ಞೆ ಮೂಡಿಸಿಕೊಳ್ಳುವ ಕೆಲಸ ಸಮಾಜದಲ್ಲಿ ಆಗಬೇಕಿದೆ ಎಂದರು.

ಕನ್ನಾಳದ ಬಸವಲಿಂಗ ಸ್ವಾಮೀಜಿ, ಹಿರಿಯರಾದ ನಾನಾಗೌಡ ಪಾಟೀಲ, ಯಂಕಣ್ಣಾ ಅಸ್ಕಿ, ಧರೆಪ್ಪಾ ದಳವಾಯಿ, ಶೇಖರ ವಳಸಂಗ ಸೇರಿದಂತೆ ಇತರರಿದ್ದರು. ಶ್ರೀಶೈಲ ಇಸರಗೊಂಡ ನಿರೂಪಿಸಿದರು. ಸಂಜೀವ ಅಸ್ಕಿ ಸ್ವಾಗತಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next