Advertisement

ಲೈಫ್ ಈಸ್‌ ಬ್ಯೂಟಿಫ‌ುಲ್‌

06:35 AM Sep 29, 2017 | |

ಮನುಷ್ಯ ಹುಟ್ಟಿದಾಗ ತುಂಬಾ ಉತ್ಸಾಹದಿಂದಿರುತ್ತಾನೆ, ಬೆಳೀತಾ ಚೈತನ್ಯ ಕಳೆದುಕೊಂಡು ಜೀವನ ಸುಸ್ತಾಗಿದೆ ಎಂದುಕೊಳ್ಳುತ್ತಾನೆ. ಈ ಮೊಬೈಲ್‌ ದುನಿಯಾದಲ್ಲಿ ಜನರಿಗೆ ಜೀವಿಸೋದನ್ನ ಕಲಿಸಬೇಕಿದೆ.

Advertisement

ಕೆಲವರು ಒಂದು ಹೊತ್ತು “ಬೋರ್‌’ ಎಂದು ಎನಿಸಿದರೆ ಸಾಕು, “ನಮ್‌ ಲೈಫ್ ಏನೂ ಪ್ರಯೋಜನವಿಲ್ಲ’ವೆಂದು ಬಾಯ್‌ಬಡ್ಕೊàತಾರೆ. ಬದುಕನ್ನು ಅನುಭವಿಸಲು ಎಷ್ಟೋ ಮಾರ್ಗಗಳಿದ್ದರೂ ಅದನ್ನು ಆಸ್ವಾದಿಸದೆ ನಿರ್ಜೀವ ವಸ್ತುವಿನಂತೆ ಜೀವನ ಸಾಗಿಸುತ್ತಾರೆ.

ಮಳೆ ಬರುವ ಸಮಯದಲ್ಲಿ “ಅಯ್ಯೋ ಮಳೆ’ ಎಂದು ಗೋಳಾಡೋದಕ್ಕಿಂತ, ಮಳೆಯಲ್ಲಿ ನೆನೆದು, ಕುಣಿದು ಮಳೆ ಹನಿಯಾಗೋ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು.

ಕಿಟಕಿ ಹೊರಗೆ ಇಣುಕಿದಾಗ ಕಾಣುವ ಆ ಚಿಟಪಟ ಮಳೆ, ಒಂದೆರಡು ಮಳೆ ಹಾಡುಗಳು, ಮತ್ತೂಂದು ಲೋಟ ಬಿಸಿ ಬಿಸಿ ಕಾಫಿ ಸವಿದು ನೋಡಿ ಆಗ ಬದುಕು “ಬೋರ್‌’ ಅನಿಸದು.ಮುಂಜಾನೆಯ ಸೂರ್ಯೋದಯ ನೋಡುವುದೇ ಒಂದು ಸಡಗರ. ಆ ಭಾಸ್ಕರ ನಭದಲ್ಲೆಡೆ ತಮ್ಮ ವರ್ಣ ಹರಡಿ ಇಡೀ ಲೋಕಕ್ಕೇ ಹೋಳಿ ಎಸೆಯುತ್ತಿರುವಂತೆ ಭಾಸವಾಗುತ್ತದೆ. ಬಿಸಿಲ ಶಾಖ ಇನ್ನೇನು ತೀವ್ರವಾಗೋಕೂ ಮುಂಚೆ ಕರಗಳು ಸಿದ್ಧವಾದ್ರೆ ಚಿಗುರೆಲೆ ಮೇಲೆ ಕುಳಿತಿರುವ ಮಂಜಿನ ಹನಿಯ ನೋಡಿದರೆ ಒಂದು ಕ್ಷಣ ಅದೇನೋ ರೋಮಾಂಚನ.

ಮಗುವಿಗೆ ತುತ್ತಣುನಿಸುವಾಗ ಅದರ ತುಂಟಾಟಿಕೆ, ಮುದ್ದು ಪೆದ್ದು ಸಂಭಾಷಣೆ ಮನಸ್ಸಿಗೊಂದು ಪುಳಕ ನೀಡುತ್ತದೆ.
ಇರುಳಲ್ಲಿ ಕರಗೋ ಚಂದಿರ ಅವನ ಸುತ್ತ ನೆರೆದಿರುವ ತಾರೆಗಳು; ಮನೆ ಮಹಡಿ ಮೇಲೆ ಮಲಗಿ ನಕ್ಷತ್ರಗಳ ಎಣಿಸಿ, “ಓರಿಯೋನ್‌’ನಂತಹ ನಕ್ಷತ್ರ ಪುಂಜಗಳ ಗುರುತಿಸುವುದು ಹಾಗೆ ನಿದಿರೆಯಲ್ಲಿ ಬೀಳುವ ಕನಸುಗಳಂತೂ ಎಂದೂ “ಬೋರ್‌’ ಹೊಡಿಸದು.

Advertisement

ಹೀಗೆ ನಮಗೆ “ಬೋರ್‌’ ಅನಿಸದಿರಲು ಇನ್ನೂ ಎಷ್ಟೋ ವಿಷಯಗಳಿವೆ, ಆದರೆ ಅದನ್ನು ಅರಿಯಲು, ಅರಿತು ಮೈಮರೆಯಲು ಪುರುಸೊತ್ತು ಇದ್ದಂತಿಲ್ಲ. ಈ ವಿಷಯಗಳು ತುಂಬಾ “ಸಿಲ್ಲಿ’ ಎನಿಸಿಬಿಡುತ್ತದೆ. ಆದರೆ ಇಂತಹ “ಸಿಲ್ಲಿ’ ವಿಷಯಗಳೇ ನಮ್ಮ ಬದುಕನ್ನು ಇನ್ನೂ ಹಸನಗೊಳಿಸುವುದು.ಲೈಫ್ “ಬೋರ್‌’ ಎನ್ನುವವರಿಗೆ ಇನ್ನೂ ಕಾಲ ಮಿಂಚಿಲ್ಲ. “ಲೈಫ್ ಎಂದೂ “ಬೋರಿಂಗ್‌’ ಅಲ್ಲ, ಲೈಫ್ ಇಸ್‌ ಬ್ಯೂಟಿಫ‌ುಲ್‌’.

– ರಕ್ಷಿತಾ ವರ್ಕಾಡಿ
ಪ್ರಥಮ ಬಿ. ಎಸ್ಸಿ.,
ಎಸ್‌ಡಿಎಂ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next