Advertisement

ಜೀವನ್ಮುಖೀ

11:00 AM Oct 22, 2017 | Harsha Rao |

ಸರಕಾರಿ ನೌಕರಿಗೆ ಅರ್ಜಿ ಸಲ್ಲಿಸುವ ಸಲುವಾಗಿ ಕನ್ನಡ ಮಾಧ್ಯಮದ ಪ್ರಮಾಣ ಪತ್ರ ತರುವ ನೆಪದಲ್ಲಿ, ಇಪ್ಪತ್ತು ವರ್ಷಗಳ ಮೇಲೆ ನಾನು ಓದಿದ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಗೆ ಭೇಟಿಕೊಡುವ ಸದವಕಾಶ ಬಂದೊದಗಿತ್ತು.
ಪ್ರಾಥಮಿಕ ಶಾಲೆ ವಿದ್ಯಾಚೇತನವನ್ನು ನೋಡಿ ದಂಗಾದೆ. ಶಾಲೆ ಸಾಕಷ್ಟು ಅಭಿವೃದ್ಧಿಗೊಂಡಿತ್ತಾದರೂ ನಾವು ಆಟವಾಡಿದ ಶಾಲೆಯ ಆವರಣ ಮಾತ್ರ ಹಾಗೇ ಇದ್ದು ಆ ಬಾಲ್ಯದ ನೆನಪಿನ ಗರಿಬಿಚ್ಚುವಂತೆ ಮಾಡಿತ್ತು. ಆ ವಿಶಾಲವಾದ ಅಂಗಳದಲ್ಲಿ ಖೋ ಖೋ, ಕಬಡ್ಡಿ, ಕುಂಟಾಬಿÇÉೆ, ಎಂದೆಲ್ಲ ಆಡಿದ ಆಟಗಳು ಒಂದೇ ಎರಡೇ? ಬುಟ್ಟಿ ಹೊತ್ತು ಬೋರೆಹಣ್ಣು ನೆಲ್ಲಿಕಾಯಿ ಮಾರಲು ಬರುವ ಮಾರಾಟಗಾರರ ಬುಟ್ಟಿಯಿಂದ ನನಗಿಷ್ಟವಾದ ಹಣ್ಣುಗಳನ್ನು ಆಯ್ದುಕೊಂಡು ಮಾಸ್ತರು ನೋಡದಂತೆ ಕದ್ದುಮುಚ್ಚಿ ತಿನ್ನುತ್ತಿದ್ದದ್ದು, 60-70 ಮಕ್ಕಳ ಮಧ್ಯದ ಗದ್ದಲದಲ್ಲಿ, ಗೆಳತಿ ಗೀತಳನ್ನು ಹೊರಗೆ ಓಡಿಸಿ ಮಾಸ್ತರ ಗಮನ ಬೇರೆತ್ತಲೋ ಇರುವಾಗ, ಇಬ್ಬರ ಪಾಟೀಚೀಲಗಳನ್ನು ಕಿಟಕಿಯಲ್ಲಿ ಕೊಟ್ಟು ಪ್ರಾಮಾಣಿಕಳಂತೆ “ಸ…ರೀ’ ಎನ್ನುತ್ತಾ ಕಿರುಬೆರಳನ್ನು ಮುಂದೆ ಚಾಚಿ ನಿಂತು ಅವರಿಂದ ಗ್ರೀನ್‌ ಸಿಗ್ನಲ್‌ ಪಡೆಯುತ್ತಲೆ ಹೊರಗೋಡಿ ಹೋಗಿ ಎರಡೂ ಪಾಟೀಚೀಲಗಳನ್ನು ಹೊತ್ತು ನಿಂತಿರುತ್ತಿದ್ದ ಗೆಳತಿಯನ್ನು ಸೇರಿಕೊಳ್ಳುವ ದೃಶ್ಯಗಳೆಲ್ಲ ಕಣ್ಮುಂದೆ ನಿಂತಂತಾಗಿ ನಗು ತರಿಸಿತ್ತು.

Advertisement

ಪ್ರೌಢಶಾಲೆ ಸಂಪೂರ್ಣ ಬದಲಾಗಿತ್ತು. ಮುಖ್ಯೋಪಾಧ್ಯಾಯರ ಕೊಠಡಿಗೆ ಹೋಗಿ ಅನುಮಾನಿಸುತ್ತಲೇ ಅವರನ್ನು ಗುರುತಿಸಿ “”ನಮಸ್ಕಾರರಿ ಮೇಡಮ…” ಎನ್ನುತ್ತ, “”ನೀವು ನಳಿನಿ ಮೇಡಮ್‌ ಅಲಿÅ? ನಾ ನಿಮ್ಮ ಸ್ಟುಡೆಂಟರಿ. ಮೂರ ವರ್ಷ ನಾ ನಿಮ್ಮ ಕೈಯಾಗ ಕಲತೀನ್ರಿ ಮೇಡಮ…” ಎನ್ನುತ್ತಲೇ ಅವರು ಆಶ್ಚರ್ಯದಿಂದ, “”ಹೌದ್ರಿ ನಿಮ್ಮ ಹೆಸರ ಏನ್ರಿ? ಯಾವ ವರ್ಷ ನೀವು ಇಲ್ಲಿ ಇದ್ರಿ?” ಎಂದೆಲ್ಲ ಕೇಳಿದಾಗ, ನಾನು ನೆನಪಿಸಿಕೊಳ್ಳುತ್ತಾ, “”ವಿದ್ಯ ಹೊಸೂರು, ಭಾರತಿ ಬೈಲಹೊಂಗಲ, ಮುಳ್ಳೂರ ಗೀತಾ ಅಂತೆÇÉಾ ಇದ್ರ ನೋಡ್ರಿ. ಅವರ ಗ್ರೂಪನಾಗ ನಾನೂ ಓದೀನಿ” ಎಂದು ನನ್ನೊಂದಿಗೆ ಓದಿದ ಹೈಸ್ಕೂಲು ಗೆಳತಿಯರ ಹೆಸರು ಹೇಳಿದೆ. ಅವರು ಜ್ಞಾಪಿಸಿಕೊಳ್ಳಲು ಹೆಣಗಾಡಿ ಸೋತರೂ ಕೂಡ ನಾನು ಅವರ ವಿದ್ಯಾರ್ಥಿನಿ ಎಂದು ಹೇಳಿದ್ದರಿಂದ ಆಸಕ್ತಿಯಿಂದ ನನ್ನ ಬಗ್ಗೆ ಎಲ್ಲ ವಿಚಾರಿಸತೊಡಗಿ, ನಾನು ಬರಹಗಾರ್ತಿ ಎಂದು ತಿಳಿದೊಡನೆ ಮತ್ತಷ್ಟು ಆಸಕ್ತಿವಹಿಸಿ, ಮರುದಿನವೇ ನನಗೆ ಪ್ರಮಾಣ ಪತ್ರವನ್ನು ನೀಡುವ ಭರವಸೆಯೊಂದಿಗೆ, ತಮ್ಮ ವಿಜಿಟಿಂಗ್‌ ಕಾರ್ಡ್‌ ನೀಡಿ ಕಾಂಟ್ಯಾಕ್ಟ್ ನಲ್ಲಿರಲು ತಿಳಿಸಿ ಬೀಳ್ಕೊಟ್ಟರು.

ನಳಿನಿ ಮೇಡಮ್‌ ನಮಗೆ ಕನ್ನಡ ಹಾಗೂ ಇಂಗ್ಲೀಷ್‌ ವಿಷಯದ ಬೋಧಕಿಯಾಗಿದ್ದರು. ಕನ್ನಡಗಿಂತಲೂ ಇಂಗ್ಲೀಷ್‌ ಬಹಳ ಚೆನ್ನಾಗಿ ಪಾಠಮಾಡುತ್ತಿದ್ದರು. ಬರೀ ಪಾಠವಲ್ಲ ಅವರು ಹೇಳಿದ ಪಾಠ ನಾವೆಷ್ಟು ಅರ್ಥೈಸಿಕೊಂಡಿದ್ದೇವೆ ಎಂದು ಪ್ರಶ್ನೆಗಳ ಮೂಲಕ ಅಥವಾ ಬರೆಯಲು ಟಾಪಿಕ್‌ ಕೊಟ್ಟು ನಮ್ಮ ಜಾಣತನವನ್ನು ಅರಿತುಕೊಳ್ಳುತ್ತಿದ್ದರು. ಜೊತೆಗೆ ನಮ್ಮ ಪ್ರತಿಭೆಗೆ ಬೆಳಕು ಚೆಲ್ಲುವಂತಹ ಪ್ರಯತ್ನ ಮಾಡುತ್ತಿದ್ದರು.

ಎಂಟನೆ ತರಗತಿಯಲ್ಲಿರುವಾಗ, ನಮ್ಮ  ಹೈಸ್ಕೂಲಿನಿಂದ ವಿಜಾಪುರ ಗೋಳಗುಮ್ಮಟಕ್ಕೆ ಟ್ರಿಪ್‌ಗೆ ಕರೆದೊಯ್ದಿದ್ದರು. ಆ ಟ್ರಿಪ್‌ಗೆ ನಳಿನಿ ಮೇಡಮ್‌ ಬಂದಿರಲಿಲ್ಲವಾದರೂ ಆ ವಿಷಯದ ಮೇಲೆ ಪ್ರಬಂಧ ಬರೆಯಲು ತಿಳಿಸಿದ್ದರು. ನನಗಂತೂ ಖುಷಿಯೋ ಖುಷಿ. ನಾನು ಟ್ರಿಪ್‌ ಗೆ ಹೋದಾಗ ಅನುಭವಿಸಿದ್ದಕ್ಕಿಂತ ಹೆಚ್ಚು  ಖುಷಿಯಿಂದ ಪ್ರಬಂಧ ಬರೆದೆ.

ಗೋಳಗುಮ್ಮಟ ನೋಡಲು ಬಂದಿದ್ದ ವಿದೇಶಿಗರೊಂದಿಗೆ ಕುತೂಹಲದಿಂದ “ಹಾಯ…’, “ಹಲೋ’ ಎನ್ನುತ್ತ ಫೋಟೋ ತೆಗೆಸಿಕೊಂಡು ಏನನ್ನೋ ಸಾಧಿಸಿದಂತೆ ಸಂಭ್ರಮಪಡುತ್ತಾ ಮೆರೆದಾಡಿದ್ದು, ಅಷ್ಟು ಎತ್ತರದ ಗುಮ್ಮಟವನ್ನು ಹತ್ತುವ ಮಜವನ್ನು ವಿವರಿಸುತ್ತಾ, ಆ ಭದ್ರವಾದ ಬೃಹತ್‌ ಗಾತ್ರದ ಗೊಮ್ಮಟದ ಗೋಡೆಗೆ ಒಬ್ಬರು ಬಾಯಿ ಹಚ್ಚಿ ಮತ್ತೂಬ್ಬರು ಕಿವಿಗೊಟ್ಟು ಕೇಳುವ ಪರಿಯನ್ನು ನೂರಾರು ಜನ “ಓಹೋ ಹೋಯ…’ ಎಂದು ಕೂಗಾಡುವ ಮತ್ತು ಆ ಕೂಗು ಪ್ರತಿಧ್ವನಿಸುವ ವಿಚಿತ್ರವನ್ನು ಸ್ವಾರಸ್ಯಕರವಾಗಿ ವಿವರಿಸಿ ಬರೆದ ಪ್ರಬಂಧವನ್ನು ಅವರ ಮುಂದಿಟ್ಟಾಗ, ನಳಿನಿ ಮೇಡಮ್‌ ಅದನ್ನೋದಿ ಖುಷಿಯಿಂದ ಮತ್ತು ಹೆಮ್ಮೆಯಿಂದ ನನ್ನನ್ನು ಮೇಲೆಬ್ಬಿಸಿ ನಿಲ್ಲಿಸಿ, “”ನೋಡ್ರಿ ಈ ವೇದಾ ಎಷ್ಟ ಚೆಂದ ಬರದಾಳ ಅಂದ್ರ ನಾ ಟ್ರಿಪ್‌ಗೆ ಬರಲಿÇÉಾ. ಆದರ  ಇದನ್ನ ಓದಿದ ಮೇಲೆ ನನಗೂ ಟ್ರಿಪ್ಪಿಗೆ ಬಂದ ಅನುಭವ ಆತು” ಎಂದು ಹೊಗಳುತ್ತಾ ನನ್ನ ಬರಹಕ್ಕೆ ಎಲ್ಲರಿಂದ ಜೋರಾದ ಚಪ್ಪಾಳೆ ಹಾಕಿಸುವುದರೊಂದಿಗೆ ಆ ದಿನವೇ ನನ್ನ ಬರವಣಿಗೆಯ ಮುನ್ನುಡಿ ಬರೆದುಬಿಟ್ಟಿದ್ದರೇನೊ!

Advertisement

ನಳಿನಿ ಮೇಡಮ್‌ ನೋಡಲು ಸೊಬಗಿನ ಖನಿಯಂತಿದ್ದರು. ಅವರು ಬರೀ ಸುಂದರಿಯಷ್ಟೇ ಅಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳ ರಾಯಭಾರಿಯಾಗಿದ್ದರು. ಅವರು ಹಂಸ ನಡಿಗೆಯನ್ನು ಹೊತ್ತು ಬರುತ್ತಿದ್ದರೆ ಸುತ್ತಲೆಲ್ಲ ಹಬ್ಬದ ಸಡಗರ ಸುರಿದಂತಾಗುತ್ತಿತ್ತು. ಯಾವುದೇ ಕಾರ್ಯಕ್ರಮವಿರಲಿ ಅವರು ಮೈಕ್‌ ಮುಂದೆ ಗೋಚರಿಸಿ ತಮ್ಮ ಮಾಧುರ್ಯದ ಕಂಠಸಿರಿಯ ಕಂಪನ್ನು ಹರಡಿಸುತ್ತಿದ್ದಂತೇ ಸ್ತಬ್ಧತೆ ತಾನೇ ತಾನಾಗಿ ಹುಟ್ಟಿಕೊಳ್ಳುತ್ತಿತ್ತು. ಅದಕ್ಕಾಗಿಯೇ ನಮ್ಮ ಹೈಸ್ಕೂಲಿನಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ನಳಿನಿ ಮೇಡಮ್‌ ಅವರ ಮುಂದಾಳತ್ವದಲ್ಲಿಯೇ ನಡೆಯುತ್ತಿದ್ದವು. ಅಂತಹ ಉತ್ಸಾಹದ ಚಿಲುಮೆಯಂತಿದ್ದ ನಳಿನಿ ಮೇಡಮ್‌ ಮೇಲೆ ವಿಧಿಯ ಅದ್ಯಾವ ವಕ್ರ ದೃಷ್ಟಿ ಬಿದ್ದಿತೋ ಏನೋ ಅವರ ಹನ್ನೆರಡು ವರ್ಷದ ಮಗ ಸುಮಂತ ರಸ್ತೆ ಅಪಘಾತಕ್ಕೆ ಆಹುತಿಯಾಗಿದ್ದ. ನಳಿನಿ ಮೇಡಮ್‌ ಅವರಿಗೆ ಆದ ಆಘಾತ ಇಡೀ ಹೈಸ್ಕೂಲನ್ನೇ ತಲ್ಲಣಿಸಿಬಿಟ್ಟಿತ್ತು. ಇಡೀ ಹೈಸ್ಕೂಲು ಸಿಬ್ಬಂದಿ, ಅನೇಕ ವಿದ್ಯಾರ್ಥಿನಿಯರೆÇÉಾ ಅವರ ಮನೆಯತ್ತ ದೌಡಾಯಿಸುವುದರೊಂದಿಗೆ ಹೈಸ್ಕೂಲು ತುಂಬಾ ಸ್ಮಶಾನ ಮೌನ ಆವರಿಸಿ ಬಿಕೋ ಎನ್ನತೊಡಗಿತ್ತು.
ಆ ಆಘಾತದಿಂದ  ಚೇತರಿಸಿಕೊಂಡು ಹೈಸ್ಕೂಲಿಗೆ ಬರುವಲ್ಲಿಗೆ ನಾಲ್ಕೆ çದು ತಿಂಗಳೇ ಬೇಕಾದವು. ನಮ್ಮೆಲ್ಲರ ಪ್ರೀತಿಯ ನಳಿನಿ ಮೇಡಮ್‌ ಏನೋ ಮರಳಿ ಬಂದಿದ್ದರಾದರೂ ಅವರು ಮೊದಲಿನ ಉತ್ಸಾಹದ ಬುಗ್ಗೆಯಂತಿರದೇ ಜೀವಂತ ಶವದಂತಿದ್ದರು. ಮಗನ ಸಾವು ಎದೆಯಲ್ಲಿ ಎಂದೂ ಶಮನಗೊಳ್ಳದ ಬೆಂಕಿ ಹೊತ್ತುಕೊಂಡಂತೇ ಆರದ ಗಾಯವಾಗಿತ್ತು.
ನಳಿನಿ ಮೇಡಮ್‌ ಮರಳಿ ಶಾಲೆಗೆ ಬಂದು ಹದಿನೈದು ದಿನಗಳಲ್ಲಿಯೆ ಬೇಸಿಗೆ ರಜೆ ಬಂದಿತ್ತು. 

ಒಂಬತ್ತನೆ ತರಗತಿಗೆ ಬರುತ್ತಲೇ ಮತ್ತೆ ಮೊದಲಿನ ಲವಲವಿಕೆ ಇಲ್ಲದಿದ್ದರೂ ಪಾಠವನ್ನು ಮಾತ್ರ ಚೆನ್ನಾಗಿಯೇ  ಮಾಡತೊಡಗಿದ್ದರು. ತಮ್ಮ ದುಃಖ-ನೋವಿನಲ್ಲಿ ಯಾವುದೇ ವಿದ್ಯಾರ್ಥಿನಿಗೂ ತಮ್ಮ ಕರ್ತವ್ಯದಿಂದ ಅನ್ಯಾಯವಾಗದಂತೆ ನೋಡಿಕೊಳ್ಳತೊಡಗಿದರು. ಹೀಗಾಗಿ ಮೊದಲಿನಂತೆ ಅವರು ಗಂಭೀರವಾಗಿ ಪಾಠ ಮಾಡುತ್ತಾ ವಿದ್ಯಾರ್ಥಿಗಳ ಮನಸ್ಸನ್ನೆÇÉಾ ತಮ್ಮತ್ತ ಸೆಳೆದುಕೊಂಡು ಅವರ ಗಮನವನ್ನು ಕೇಂದ್ರೀಕರಿಸುತ್ತಿದ್ದರು.

ಮೊದಲಿನಿಂದಲೂ ಗದ್ಯಪಾಠಕ್ಕಿಂತ ಪದ್ಯಪಾಠವನ್ನು ಚೆನ್ನಾಗಿ ಮಾಡುತ್ತಿದ್ದರು. ಅವರು “ಗಳಂ’, “ಅಮ…’ “ಅಮ…’ ಎನ್ನುತ್ತಾ ಹಳೆಗನ್ನಡದ ಪದ್ಯವನ್ನು ಓದುತ್ತಿದ್ದರೆ, ನಾವೆÇÉಾ ತಲ್ಲೀನರಾಗಿ ಕೇಳುತ್ತಿ¨ªೆವು. ಹೀಗೆ ಹಳೆಗನ್ನಡದ ಪದ್ಯ “ಲೋಹಿತಾಶ್ವನ ಸಾವು’ ಎಂಬ ಪದ್ಯವನ್ನು ಹೇಳತೊಡಗಿದ್ದರು.  

ಅಡವಿಯೊಳು ಹೊಲಬುಗೆಟ್ಟನೋ ಗಿಡುವಿನೊಳಗೆ ಹುಲಿ ಹಿಡಿದುದೋ ಕಳ್ಳರೊಯ್ದರೆ ಭೂತಸಂಕುಲಂ ಹೊಡೆಯದುವೊ ನೀರಳರೊಳದ್ದನೋ ಮರದ ಕೊಂಬೇರಿ ಬಿದ್ದನೋ ಫ‌ಣಿ ತಿಂದುದೊ ಕಡುಹಸುರು ನಡೆಗೆಟ್ಟು ನಿಂದನೊ- ಎಂಬ ಸಾಲುಗಳನ್ನು ಓದುತ್ತಾ ಕಣ್ಣಂಚಿನಲ್ಲಿ ನೀರು ಚಿಮ್ಮಿಸಿದ್ದರು. ಮುಂದೆ ಕವನ ಓದಲಾಗಲಿ ಕವನದ ಸಾಲುಗಳನ್ನು ಅರ್ಥೈಸಲಾಗಲಿ ಆಗಲಿಲ್ಲ. ಇಡೀ ಕ್ಲಾಸ್‌ರೂಮು ಸ್ತಬ್ಧವಾಗಿತ್ತು. ಉಬ್ಬಿದ ಗಂಟಲನ್ನು ಸರಿಪಡಿಸಿಕೊಂಡು “ಬಂದರಂ ಲೋಹಿತಾಶ್ವಾ ಎಂದು ಬಟ್ಟೆಯೊಳು ನಿಂದರಾ ಲೋಹಿತಾಶ್ವಾ ಎಂದು ಗಾಳಿಗಿರಿಕೆಂಡರ ಲೋಹಿತಾಶ್ವಾ ಎಂದು ಕರೆಕರೆದು ಬಿಡೆ ಬೀದಿಗರುವಿನಂತೆ’ ಎಂಬ  ಮುಂದಿನ ಸಾಲುಗಳನ್ನು  ಹೇಳುವುದರಲ್ಲಿ ಅವರ ದುಃಖದ ಕಟ್ಟೆಯೊಡೆದು ಬಿಕ್ಕತೊಡಗಿದರು. ನಾವೆಲ್ಲ “ಟೀಚರ್‌’ ಎಂದು ಅಳುವ ಧ್ವನಿಯಲ್ಲಿ ಕೂಗಿಕೊಂಡೆವು. ಬುಕ್ಕನ್ನು ಟೇಬಲ್‌ ಮೇಲಿಟ್ಟು “ಸಾರಿ’ ಎಂದು ಹೇಳಿ ಬೇಗ ಬೇಗನೆ ಸ್ಟಾಫ್ ರೂಮಿನತ್ತ ಹೆಜ್ಜೆಕಿತ್ತರು.

ನಳಿನಿ ಮೇಡಮ್‌ ಅವರದು ಅಂತರ್‌ಜಾತಿ ಪ್ರೇಮವಿವಾಹ. ಅವರ ತವರವರು ಅದನ್ನು ಸಮ್ಮತಿಸದೇ ಮದುವೆಯ ನಂತರ ಅವರ ಸಂಬಂಧ ಕಡಿದುಕೊಂಡಿದ್ದರು. ವಿಷಯ ತಿಳಿದು ಅವರ ತಮ್ಮ ಶಶಿಕಾಂತ, ಮನೆಗೆ ಹೋಗುವ ಧೈರ್ಯವಾಗದೇ ಹೈಸ್ಕೂಲಿಗೆ ದೌಡಾಯಿಸಿದ್ದ. ತಮ್ಮನನ್ನು ನಳಿನಿ ಮೇಡಮ್‌ ತಬ್ಬಿಕೊಂಡು ಅತ್ತಿದ್ದರು. ಸಂಬಂಧ ಸರಿಹೋದಾಗ, ಅವನು ತನ್ನ ಮಗನನ್ನು ಕರೆತಂದು, “”ನೋಡವಾ ಅಕ್ಕಾ ನೀ ಚಿಂತಿ ಮಾಡಬ್ಯಾಡಾ. ನಿನ್ನ ತ್ರಾಸು ನನಗ ನೋಡಾಕ ಆಗೂದಿÇÉಾ. ನಾವು ಎಷ್ಟೊ ಮಾಡಿದ್ರೂ ರಕ್ತಾ ಹಂಚಕೊಂಡು ಹುಟ್ಟಿದಾರು. ಅವ್ವಾ ಅಪ್ಪನ ಕಳಕೊಂಡ ಪರದೇಶಿ ಮಕ್ಕಳು. ನಮ್ಮ ಅವ್ವನ ಸ್ಥಾನದಾಗ ನೀ ನಿಂದರಬೇಕಿತ್ತು. ಆದರ ಕೆಟ್ಟ ಗಳಿಗ್ಯಾಗ ನಮ್ಮಿಂದ ದೂರ ಆದಿ. ಅಂಗಾಲಿಗೆ ಹೇಸಗಿಲ್ಲ, ಕಳ್ಳಿಗೆ ನಾಚಿಗಿ ಇÇÉಾ ಅಂದಂಗ ಏನೇ ಆದ್ರೂ ಅದನ್ನ ಮರತ ನಾವು ಒಂದ ಆಗೂಣ ನಿನಗ ನಿನ್ನ ಮಗಾ ಇÇÉಾ ಅನ್ನೂ ಕೊರಗು ಬ್ಯಾಡಾ. ತುಗೋ ಇವನ್ನ ಈ ಪ್ರಣೀತ ಇನ್ನ ಮ್ಯಾಲಿಂದ ನಿನ್ನ ಮಗಾ” ಎನ್ನುತ್ತ ದುಃಖದಲ್ಲಿದ್ದ ನಳಿನಿ ಮೇಡಮ್‌ ಅವರಿಗೆ ಮಗನನ್ನು ನೀಡಿದ್ದ. ನಳಿನಿ ಮೇಡಮ್‌ ಅವರಿಗೆ ಏನು ಮಾಡುವುದೆಂದು ತೋಚದೆ ಸುಮ್ಮನಾಗಿದ್ದರು. ಆದರೆ ಆ ಆರು ವರ್ಷದ ಪ್ರಣೀತನ ಮೇಲೆ ಯಾವುದೇ ಪ್ರೀತಿಯಾಗಲಿ, ಮೋಹವಾಗಲಿ ಹುಟ್ಟಿಕೊಳ್ಳಲಿಲ್ಲ. ಹಾಗಾಗಿ ಆ ಮಗುವನ್ನು ಮನೆಯಲ್ಲಿ ಉಳಿಸಿಕೊಳ್ಳಲು ಪ್ರಯತ್ನಿಸದೆ ಆ ಮಗು ಎರಡು ದಿನ ಅವರ ಮನೆಯಲ್ಲಿದ್ದು ಮತ್ತೆ ತಾಯಿಯ ನೆನಪಾಗಿ ತನ್ನ ಮನೆಗೆ ಓಡುತ್ತಿತ್ತು.

ನಳಿನಿ ಮೇಡಮ್‌ ನಾದಿನಿಗೆ ಈ ವಿಷಯ ತಿಳಿದು ಕೆಂಡಾಮಂಡಳಾಗಿ ದೂರಿನ ಬೆಂಗಳೂರಿನಿಂದ ದೌಡಾಯಿಸಿದಳು. “”ಅಲಿÅ ವೈನಿ, ನೀವು ಮದುವಿ ಆಗಿ ಬಂದಾಗಿಂದ ಒಂದ ದಿನಾನೂ ಹೊಳ್ಳಿ ನೋಡದ ನಿಮ್ಮ ತವರ ಮನಿಯಾರಿಗೆ ನೀವು ಈಗ ಒಮ್ಮಿಂದೊಮ್ಮೆ ನೆನಪ ಆದ್ರಿ? ಇಷ್ಟ ದಿನಾ ಅವರ ಕಳ್ಳು ಕಕ್ಕುಲಾತಿ ಎಲ್ಲಿ ಅಡಗಿತ್ತಂತ? ನಿಮಗ ಬಿಳಿ ಕಾಮನಿ ಆಗಿ ದವಾಖಾನಿಗೆ ಹಾಕಿದ ಸುದ್ದಿ ಗೊತ್ತಾದ್ರೂ ಬರಲಿÇÉಾ. ಅಣ್ಣಗ ಎಕ್ಸಿಡೆಂಟ್‌ ಆಗಿ ಅವಾ ಇನ್ನೇನ ಬದಕತಾನಾ ಇÇÉೋ ಅನ್ನೂ ಹೊತ್ತಿನ್ಯಾಗ ನೀವು ತೆಲಿ ಕೆಟ್ಟಂಗ ಮಾಡಾಕತ್ತಿದ್ರಿ ಆಗ ನನಗ ನಿಮ್ಮನ್ನ ಸಂಬಾಳಸಾಕ ಆಗದ ನಿಮ್ಮ ಮನಿಗೆ ಹೋಗಿ ಸ್ವತಾ ನಾನ ಎÇÉಾ ಹೇಳಿರೂ ಅಯ್ಯ ಬಿಡ್ರಿ ಆಕಿ ಎÇÉಾರನ್ನೂ ಬಿಟ್ಟು ಹೋದ ದಿನಾನ ಮಣ್ಣಕೊಟ್ಟಿವಿ. ನಮ್ಮ ಪಾಲಿಗೆ ಇಲ್ಲದ ಅಕ್ಕಾ ಬದಕಿದ್ರೆಷ್ಟು ಸತ್ತರ ಎಷ್ಟು ಅಂತ ಎದಿಗೆ ಝಾಡಿಸಿ ಒದ್ದಂಗ ಮಾತಾಡಿದ್ರು. ಅಂಥಾರು ಈಗ ಹ್ಯಾಂಗ ಬಂದ್ರು? ನೀವ ವಿಚಾರ ಮಾಡ್ರಿ. ನೀವ ಈಗ ದುಃಖದಾಗ ಅದೀರಿ ಅದ ನನಗ ಗೊತ್ತ ಐತಿ. ಆದ್ರ ನಾ ಈ ಮಾತ ಹೇಳೂದು ಅನಿವಾರ್ಯ ಐತಿ ನೋಡ್ರಿ ವೈನಿ. ನಾ ಈ ಮನ್ಯಾಗ ಹುಟ್ಟಿಬೆಳದೀನಿ. ಅದಕ ನೀವು ನನ್ನ ಮಗನ್ನ ಇಟ್ಟಕೊಂಡ ಬೆಳಸ್ರಿ. ಈ ವರ್ಸ ಇÇÉೆ ಸಾಲೀಗೆ ಹಾಕೂಣ.

ಸುಮಂತನ ಸಾಲಿಗೆ ಎಡಮಿಶನ್‌ ಮಾಡೂಣಂತ ಅಣ್ಣಾನೂ ಹೇಳಾÂನ” ಎಂದೆಲ್ಲ ಹೇಳಿದ ಮಾತುಗಳಾವುವೂ ನಳಿನಿ ಮೇಡಮ್‌ ಅವರೊಳಗೆ ಇಳಿದಿರಲಿಲ್ಲ. ಆದರೆ ತಂಗಿ ಗೀತಾಳ ಮಾತು ಸರಿ ಎನ್ನಿಸಿದ ಮೋಹನ ಇನ್ನು ಮೇಲೆ ಆ ಮಗು ತಮ್ಮದೇ ಎಂಬಂತೇ ವೈಭವನ ತಲೆ ನೇವರಿಸಿದ್ದ.

ಗೀತಾ ಬೆಂಗಳೂರಿಗೆ ಹೋದ ಮೇಲೆ ನಳಿನಿಯನ್ನು ರಮಿಸುತ್ತ ಶಶಿಕಾಂತ ಮತ್ತೆ ತನ್ನ ಮಗನೊಂದಿಗೆ ಬಂದು, “”ಸುದ್ದಿ ಗೊತ್ತ ಆತು. ನಾ ಏನು ಪ್ರಣೀತನ್ನ ನನಗ ಸಾಕಾಕ ಆಗೂದಿÇÉಾ ಅಂತ ಬಿಡಾಕತ್ತಿÇÉಾ. ಆದ್ರ ಮಾಮಾರು ಅವರ ತಂಗಿ ಮಗನ್ನ ಸಾಕಿ ಅಣ್ಣಾ ತಂಗಿ ಒಂದ ಆಗಿ ನಿನ್ನ ದೂರ ಮಾಡಿದ್ರ ನಿನಗ್ಯಾರು? ಅದಕ ನಾ ಹೇಳತೀನಿ ಕೇಳ ಆ ಹುಡುಗನ್ನೂ ಸಾಕ್ರಿ ಬ್ಯಾಡಾ ಅನ್ನೂದಿÇÉಾ. ಆದ್ರ ನಿನ್ನ ಕಷ್ಟಾ ಸುಖಕ್ಕ ನನ್ನ ಮಗನ್ನೂ ಇಟ್ಟಕೊ. ಇಷ್ಟ ಆಸ್ತಿ ಐತಿ ಎರಡ ಮಕ್ಕಳು ಬೇಕ ಬೇಕು. ಮಕ್ಕಳ ಇದ್ರನ ಮನಿ ಚೆಂದ” ಎಂದೆಲ್ಲ ಪುಂಗಿ ಊದಿದ್ದ.

ಎಲ್ಲರ ವಿಚಾರಗಳನ್ನೂ ಬುಡಮೇಲು ಮಾಡುವಂತೆ ನಳಿನಿ ಮೇಡಮ್‌ ಅದ್ಯಾವುದೋ ಗುರುತು ಪರಿಚಯವಿಲ್ಲದ ಸುಂದರವಾದ ಹೆಣ್ಣು ಮಗುವೊಂದನ್ನು ಮನೆಗೆ ಕರೆತಂದಿದ್ದರು.

ನಳಿನಿ ಮೇಡಮ್‌ ಏಕಾಂತಪ್ರಿಯರಾಗಿದ್ದರು. ಮೊದಲಿನಿಂದಲೂ ಏಕಾಂಗಿಯಾಗಿ ಪ್ರಶಾಂತ ಸ್ಥಳಗಳಿಗೆ ವಾಕ್‌ ಮಾಡುವ ಅಭ್ಯಾಸವಿತ್ತು. ಕಂದನನ್ನು ಕಳೆದುಕೊಂಡ ನೋವು ಹೀಗೆ ಏಕಾಂತವಾಗಿ ಪ್ರಶಾಂತ ಸ್ಥಳಗಳಿಗೆ ಓಡಾಡುವ ಹವ್ಯಾಸವನ್ನು ಅಧಿಕಗೊಳಿಸಿತ್ತು. ಅದರಲ್ಲೂ ಕಂಡ ಕಂಡವರೆಲ್ಲ ಅವರ ಮೇಲೆ ಹರಿಸುವ ಅನುಕಂಪದ ಅಲೆಗಳಿಂದ ದೂರವಿರಬೇಕೆನ್ನಿಸುತ್ತಿತ್ತು. ಆದ್ದರಿಂದಲೇ ಶಾಲೆ ಮುಗಿಸಿಕೊಂಡು ಮನೆಗೆ ಹೋಗಿ ಕೈಕಾಲು ತೊಳೆದು ಊರ ಗುಡ್ಡದ ಮೇಲಿರುವ ಹನುಮಂತನ ಗುಡಿಗೆ ಹೋಗಿ ಅಲ್ಲಿ ತಂಪಾದ ಗಾಳಿಗೆ ಮೈಯೊಡ್ಡಿ ಕುಳಿತುಕೊಂಡು ದಿನದ ಆಯಾಸವನ್ನೆಲ್ಲ ಕಳೆದುಕೊಳ್ಳುತ್ತಿದ್ದಳು. ಅಲ್ಲಿಯೇ ಸ್ವಲ್ಪ ದೂರದಲ್ಲಿರುವ ಗುಡಿಸಲಿನ ಮುಂದೆ ಸುಂದರ ಹೆಣ್ಣು ಮಗು ಆಟವಾಡುತ್ತಿದ್ದುದನ್ನು ಪ್ರತಿದಿನವೂ ಆಕೆ ಗಮನಿಸುತ್ತಿದ್ದಳು.

ಬಹುಶಃ ಮಗು ಕೂಡ ನಳಿನಿ ಮೇಡಮ್‌ನ್ನು ಗಮನಿಸುತ್ತಿತ್ತೇನೊ. ವಾರ ಕಳೆಯುವುದರಲ್ಲಿ ಇಬ್ಬರೂ ಪರಿಚಯದ ನಗೆ ವಿನಿಮಯಿಸಿಕೊಂಡರು. ನಳಿನಿಗೆ ಆ ಮಗುವನ್ನು ಕಂಡ ಕ್ಷಣ ಸುಂದರವಾಗಿ ಅದೇ ತಾನೇ ಬಿರಿದು ನಿಂತ ಗುಲಾಬಿಯನ್ನು ಕಂಡಷ್ಟು ಸಂತಸವಾಗುತ್ತಿತ್ತು. ಒಂದು ದಿನ ಆ ಮಗುವಿಗೆ ಚಾಕಲೇಟ್‌ ತೆಗೆದೊಯ್ದು ಕೊಡುವು ದರೊಂದಿಗೆ ಸ್ನೇಹ ಬೆಳೆಸಿಕೊಂಡರು. ಮಗದೊಂದು ದಿನ ಬಿಸ್ಕೆಟ್‌, ಬರ ಬರುತ್ತಾ ಮಗು ನಳಿನಿಯ ಬರುವನ್ನು ಕಾಯತೊಡಗಿತು. ಆಕೆ ಬಂದಾಗ ಅದೇನಾದರೂ ತಿನ್ನುತ್ತಿದ್ದರೆ ಆಕೆ ಬಂದೊಡನೆ ಆಕೆಯ ಬಾಯಿಗೆ ತುರುಕುತ್ತಿತ್ತು.
ಒಂದು ದಿನ ಆ ಮಗುವಿನ ತಾಯಿಯನ್ನು ಕಾಣಲು ಗುಡಿಸಲಿಗೆ ಹೋದ ನಳಿನಿಗೆ, ಆ ಮಗುವಿನ ಅಜ್ಜಿಯಿಂದ, ಆ ಮಗು ಅನಾಥವೆಂದು ತಿಳಿಯಿತು. ಅಂದಿನಿಂದ ಸಂಬಂಧ ಮತ್ತಷ್ಟು ಗಟ್ಟಿಗೊಂಡಿತು.

ನಳಿನಿ ಮೇಡಮ್‌ ಒಳ್ಳೆಯ ಹಾಡುಗಾರ್ತಿಯಾಗಿದ್ದರು. ಅವರಿಗೆ ಸಂಗೀತ ಚೆನ್ನಾಗಿ ಬರುತ್ತಿತ್ತು. ಆ ಮಗುವಿನೊಂದಿಗೆ ಒಡನಾಟ ಹೆಚ್ಚುತ್ತಾ ಹೋದಂತೆ ಆಕೆಯ ಕೊರಳೊಳಗಿಂದ ಸರಿಗಮಪ ಅಲೆ ಅಲೆಯಾಗಿ ಹೊಮ್ಮಿತ್ತು. ಆ ಹಾಡನ್ನು ಮಗು ಅನುಕರಿಸತೊಡಗಿ ಆ ಧ್ವನಿಗೆ ಮಗುವಿನ ಧ್ವನಿಯೂ ಬೆರೆತುಹೋಗಿ ಸುಮಧುರ ಹಾಡು ಹೊರಹೊಮ್ಮುತ್ತಿತ್ತು.
ಅಜ್ಜಿ ಮಗುವಿಗೆ ಹೆಸರಿಟ್ಟಿದ್ದಳ್ಳೋ ಬಿಟ್ಟಿದ್ದಳ್ಳೋ ನಳಿನಿ ಮಾತ್ರ ಸುಶ್ರಾವ್ಯ ಎಂದು ಕರೆದಳು. ಅದಕ್ಕೆ ಬಣ್ಣ ಬಣ್ಣದ ಸುಂದರ ಹೊಸ ಪ್ರಾಕುಗಳನ್ನು ಹಾಕಿ ಸಂಭ್ರಮಿಸುತ್ತಿದ್ದಳು. ಮೊದಲೇ ಮು¨ªಾದ ಮಗು ಮತ್ತಷ್ಟು ಮುದ್ದು ಮು¨ªಾಗಿ ಕಂಡು ಹೊಸ ಉಡುಗೊರೆಯ ಖುಷಿಯಲ್ಲಿ ತೊದಲು ನುಡಿಯುತ್ತಾ ನಳಿನಿಯನ್ನು ಅಪ್ಪಿಕೊಳ್ಳುತ್ತಿತ್ತು. 

ಮಗ ಸುಮಂತನ ಸಾವಿನ ನೋವನ್ನು ಈ ಮಗು ಸುಶ್ರಾವ್ಯಳ ನಗು ಕರಗಿಸಿತ್ತು. ಪ್ರತಿದಿನ ಒಂದು ಗಂಟೆ ಆ ಮಗುವಿನೊಂದಿಗೆ ಕಳೆಯುವ ಸಮಯ ನಳಿನಿ ಮೇಡಮ್‌ಗೆ ಒಂದು ಉತ್ಸಾಹ, ಖುಷಿ ಸಿಗುತ್ತಿತ್ತು. ಇಂತಹ ಮಗುವಿನೊಂದಿಗೆ ದಿನವಿಡೀ ಕಳೆದರೆ ಹೇಗೆ ಎನ್ನಿಸಿತು. ಅಜ್ಜಿಯನ್ನು ಕೇಳಿ ಮನೆಗೆ ಕರೆದೊಯ್ದರು. ಆ ಮಗುವಿನ ಆಟ-ಪಾಠ ಅಂದ-ಚೆಂದ ಮೋಹನನನ್ನು ಸೆಳೆಯಿತು. ಗಂಡ ಹೆಂಡತಿ ಇಬ್ಬರೂ ಸೇರಿಯೇ ಮಗುವನ್ನು ಮುದ್ದುಮಾಡುವುದು ಇನ್ನೂ ಚೆಂದವೆನ್ನಿಸಿತು.

ರೌದ್ರಾವತಾರವನ್ನು ಹೊತ್ತುಕೊಂಡೇ ಚಂಡಮಾರುತದಂತೆ ಬಂದೆರಗಿದ ಗೀತಾ, ನೇರವಾಗಿ ಅಣ್ಣನ ಮೇಲೆ ದಾಳಿ ಮಾಡಿದಳು. “”ಅÇÉಾ ಆಕಿಗೆ ಯಾರೂ ಹೇಳುವಾರು ಕೇಳುವಾರು ಇಲ್ಲನ? ಆಕಿಗೆ ಬುದ್ಧಿ ಇÇÉಾ ಅಂದ್ರ ನಿನಗೂ ಇÇÉಾ? ಹತ್ತಿದ್ದÇÉಾ ಹೊಂದಿದ್ದÇÉಾ ಹೋಗಲಿ ಯಾವ ಜಾತಿದೂ ಅಂತ ಗೊತ್ತಿÇÉಾ ಹಂತಾ ಹುಡುಗಿ ತುಗೊಂಡ ಏನ ಸಾಧಿಸ್ತೀರಿ” ಎಂದು ಕೂಗಾಡಿದರೆ, ನಳಿನಿ ಮೇಡಮ್‌, “”ತಮ್ಮ ನೋಡವಾ ನೀ ಮಾಡೂದು ನನಗೇನ ಚೆಂದ ಕಾಣಸವಲ್ಲತು. ಅÇÉಾ ಆ ಗುಡಿಸಲ ಹೊಲಸ ಹುಡುಗಿನ್ನ ತುಗೊಂಡ ಬಂದಿಯÇÉಾ ಮಂದಿ ನಮಗೇನಂತಾರಾ? ಅನ್ನೂದರ ಖಬರ ಐತಿ?” ಎಂದೆಲ್ಲ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದ. 

ನಳಿನಿ ಮೇಡಮ್‌ ಮಾತ್ರ ಯಾರ ಮಾತಿಗೂ ತಲೆಕೆಡಿಸಿಕೊಳ್ಳದೇ, ಆ ಮಗುವಿನೊಂದಿಗೆ ಆರಾಮವಾಗಿ ಕಾಲ ಕಳೆಯತೊಡಗಿದಳು. ಆದರೆ ಆ ಕೇಡಿಗಳು ಆಸ್ತಿಯ ಆಸೆಗೆ ಆ ಮಗುವಿಗೆ ವಿಷ ಹಾಕಿದರು. 

ನಾವೆಲ್ಲ ಕಾಲೇಜು ಸೇರಿದ ಮೇಲೆ ನಳಿನಿ ಮೇಡಮ್‌ ವಿಷಯ ಮುಂದೇನಾಯಿತೆಂದು ತಿಳಿದಿರಲಿಲ್ಲ. ತಿಳಿದುಕೊಳ್ಳಲು ಪ್ರಯತ್ನವನ್ನೂ ಮಾಡಿರಲಿಲ್ಲ.

ಮರುದಿನ ನಳಿನಿ ಮೇಡಮ್‌ ಹತ್ತಿರ ಹೋಗಿ ಐದು ನಿಮಿಷಗಳಲ್ಲಿಯೇ ನನ್ನ ಪ್ರಮಾಣ ಪತ್ರ ನನ್ನ ಕೈಸೇರಿತಾದರೂ, ನನ್ನ ಅವರ ಮಧ್ಯೆ ಮತ್ತಷ್ಟು ಮಾತುಗಳು ನಡೆದು, ನನ್ನ ಸಾಹಿತ್ಯದ ಸಂಪೂರ್ಣ ಪರಿಚಯವಾಗಿತ್ತು. ಜೊತೆಗೆ ನಾನು ನನ್ನದೊಂದು ಕಾದಂಬರಿಯನ್ನು ಅವರ ಕೈಗಿತ್ತಿ¨ªೆ. ಅವರು ಅದನ್ನು ಮುಂದೆ ಹಿಂದೆ ಹೊರಳಿಸಿ ನೋಡಿ, ಒಳಗಿನ ಒಂದೆರಡು ಪುಟಗಳನ್ನು ಅವಲೋಕಿಸಿಸಿದ್ದರು. ನಾನು ನನ್ನ ಬಗ್ಗೆ ಎಲ್ಲವನ್ನೂ ಹೇಳಿಯಾಗಿತ್ತು ತಡವರಿಸುತ್ತಲೇ, ಅವರ ಬಗ್ಗೆ ಕೇಳಿದಾಗ, “”ಕಾರ ಐತಿ ಮನೀಗೆ ಹೋಗುಣು ಬರಿì” ಎಂದು ಕರೆದಾಗ ಇಲ್ಲವೆನ್ನಲಾಗಲಿಲ್ಲ. ಜೊತೆಗೆ ಅವರು ಅಂತಿಮವಾಗಿ ಆ ಮೂರು ಮಕ್ಕಳಲ್ಲಿ ಯಾರನ್ನು ಸಾಕಿ ಬೆಳೆಸಿದರು, ಈಗ ಯಾರೊಂದಿಗೆ ಇ¨ªಾರೆ ಎಂಬ ಕುತೂಹಲ ಹುಟ್ಟಿಕೊಂಡಿತು. ಹಾಗಾಗಿ ಅವರನ್ನು ಹಿಂಬಾಲಿಸಿದೆ.

ಕಾರು ಮನೆಬಾಗಿಲನ್ನು ತಲುಪುತ್ತಲೇ, ಕಾರಿನ ಸದ್ದು ಕೇಳಿಸಿ ಮನೆ ಬಾಗಿಲಿನಲ್ಲಿ ಸುಂದರ ಯುವತಿ ಕಾಣಿಸಿಕೊಂಡಳು. ನಳಿನಿ ಮೇಡಮ್‌ ಅವರ ಕೈಯಲ್ಲಿನ ಬ್ಯಾಗ್‌ ತೆಗೆದುಕೊಂಡು ಒಳ ನಡೆದಳು. “”ಶ್ರಾವ್ಯಾ, ಇವರು ನನ್ನ ಸ್ಟೂಡೆಂಟು, ಈಗ ಕಾದಂಬರಿಕಾರ್ತಿ” ಎಂದು ನನ್ನನ್ನು ಆ ಹುಡುಗಿಗೆ ಪರಿಚಯಿಸಿದರು. ನಾನು ಆ ಸುಂದರಿಯನ್ನೊಮ್ಮೆ, ಮೇಡಮ್‌ ಅವರನ್ನು ಒಮ್ಮೆ ಪ್ರಶ್ನಾರ್ಥಕವಾಗಿ  ನೋಡತೊಡಗಿದಾಗ ಅರ್ಥ ಮಾಡಿಕೊಂಡ ಅವರು, “”ನನ್ನ ಮಗಳು ಸುಶ್ರಾವ್ಯ. ಕೆಎಎಸ್‌ ಪಾಸ್‌ ಮಾಡಕೊಂಡಾಳಾ. ಹಿಂದೂಸ್ತಾನಿ ಸಂಗೀತ ಕಲತು ಸಾಕಷ್ಟ ಕಡೆ ಕಾರ್ಯಕ್ರಮ ನಡಿಸ್ಯಾಳ” ಎನ್ನುತ್ತ, ಆಕೆಯ ಫೋಟೊ ಅಲಬಮ್‌ ತರಿಸಿ ಫೋಟೊಗಳನ್ನು ತೋರಿಸತೊಡಗಿದರು. ನಾಡಿನ ಹಿರಿಕಿರಿಯ ಸಂಗೀತ ವಿದ್ವಾಂಸರೊಂದಿಗೆ, ಪ್ರಶಸ್ತಿಗಳೊಂದಿಗೆ, ಕಾರ್ಯಕ್ರಮದ ಫೋಟೊಗಳನ್ನು ನೋಡಿ ದಂಗಾದೆ. ಆಕೆ ಸಂಗೀತ ಕ್ಷೇತ್ರದಲ್ಲಿ ಸಾಕಷ್ಟು ಕೃಷಿ ಮಾಡಿದ್ದಳು. ಅದೆಲ್ಲವನ್ನು ನೋಡಿ ತಾಯಿಗೆ ತಕ್ಕ ಮಗಳು ಎಂದೆನ್ನಿಸಿತು. 

ಸ್ವಲ್ಪ ಸಮಯದಲ್ಲಿಯೇ ಬೈಕಿನ ಸ¨ªಾಯಿತು. ಟೀ ಲೋಟ ಹಿಡಿದು ಬಂದ ಸುಶ್ರಾವ್ಯಳಿಗೆ, ನಳಿನಿ ಮೇಡಮ…, “”ಅಪ್ಪಾಜಿ ಬಂದ್ರು ಅವರಿಗೂ ಟೀ ತುಗೊಂಡ ಬಾ” ಎಂದರು. ನಗುಮುಖದಿಂದಲೇ ಸಮ್ಮತಿಸುತ್ತ ನಮ್ಮ ಕೈಗೆ ಟೀ ಕೊಟ್ಟು ಒಳಗೋಡಿದ ಅವಳನ್ನು, ನಳಿನಿ ಮೇಡಮ್‌ ಅವರನ್ನು ದಿಟ್ಟಿಸಿದೆ. ಒಬ್ಬರಿಗಿಂತ ಒಬ್ಬರು ಸುಂದರಿಯರೆನ್ನಿಸಿದರು. ಅವನ್ನು ನೋಡುತ್ತಲೇ ಯಾಕೋ ಒಂದು ಬಗೆಯ ಖುಷಿ ಎನ್ನಿಸಿತು. ಬರಡು ಬರಡಾದ ಬದುಕಿಗೆ ಜೀವಂತಿಕೆಯನ್ನು ತುಂಬಿ ಬದುಕುವ ಅವರ ಪರಿ ಅಚ್ಚರಿ ಹುಟ್ಟಿಸಿತು. ಅವರು ತಾವಷ್ಟೇ ಅಲ್ಲ ಸಮಾಜದ ಒಂದು ದೊಡ್ಡ ಆಸ್ತಿಯಾಗಿ ಬೆಳೆದು ಬದುಕುತ್ತಿದ್ದುದರ ಅರಿವಾಗಿ ಮನದಲ್ಲಿಯೇ ವಂದಿಸಿದೆ.

– ಪಾರ್ವತಿ ಪಿಟಗಿ

Advertisement

Udayavani is now on Telegram. Click here to join our channel and stay updated with the latest news.

Next