ಜೀವವಿಮೆ ಪಾಲಿಸಿಗಳಲ್ಲಿ ಪ್ರಮುಖ ಬದಲಾವಣೆಗೆ ಅಖೀಲ ಭಾರತ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಉದ್ದೇಶಿದ್ದು 2020 ಫೆ.1ರಿಂದ ಜಾರಿಗೆ ಬರಲಿದೆ. ಈ ಬದಲಾವಣೆಗಳು ಹೀಗಿವೆ.
1. ಒಂದು ವೇಳೆ ಯುನಿಟ್ ಲಿಂಕ್ ಆದ ಪಾಲಿಸಿಗಳಾದರೆ ಅವುಗಳ ಪುನರುಜ್ಜೀವಿತ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ. ಯುನಿಟ್ ಲಿಂಕೇತರ ಪಾಲಿಸಿಗಳಾದರೆ ಅವುಗಳ ಪುನರುಜ್ಜೀವಿತ ಅವಧಿಯನ್ನು ಐದು ವರ್ಷಗಳ ವರೆಗೆ ವಿಸ್ತರಿಸಲಾಗುತ್ತದೆ. ಈ ಮೊದಲು ಇದು ಎರಡು ವರ್ಷಗಳಾಗಿತ್ತು. ಪುನರುಜ್ಜೀವಿತ ಅವಧಿ ಎಂದರೆ, ಮೊದಲ ಬಾರಿಗೆ ಪಾಲಿಸಿದಾರನು ಕಟ್ಟದೇ ಇರುವ ಪ್ರೀಮಿಯಂ ದಿನಾಂಕದಿಂದ ಮತ್ತೆ ಆತ ಸ್ಥಗಿತಗೊಂಡ ಪಾಲಿಸಿಯನ್ನು ಚಾಲನೆಗೊಳಿಸಲು ಮುಂದಾದ ಅವಧಿಯಾಗಿದೆ.
2. ಫೆಬ್ರವರಿಯಿಂದ ನಿವೃತ್ತಿ ಪ್ಲ್ರಾನ್‌ಗಳ ವಿತ್‌ಡ್ರಾವಲ್ ಮಿತಿ ಏರಿಕೆಯಾಗಲಿದೆ. ಗರಿಷ್ಠ ವಿತ್‌ಡ್ರಾವಲ್ ಮಿತಿಯು ಈಗಿರುವ ಮೂರನೇ ಒಂದು ಭಾಗದ ಬದಲಾಗಿ ಮೆಚೂÂರಿಟಿಯ ಶೇ.60ರಷ್ಟು ಆಗಲಿದೆ. ಆದರೆ ನಿವೃತ್ತಿ ಪ್ಲ್ರಾನ್‌ಗಳಲ್ಲಿ ಮೂರನೇ ಒಂದು ಭಾಗದಷ್ಟಕ್ಕೆ ಮಾತ್ರ ತೆರಿಗೆ ವಿನಾಯಿತಿ ಇರಲಿದ್ದು, ಎಲ್ಲ ಶೇ.60ರಷ್ಟಕ್ಕೆ ತೆರಿಗೆ ವಿನಾಯಿತಿ ಇರುವುದಿಲ್ಲ.
3. ಪಾಲಿಸಿಗಳ ಮೇಲಿನ ಐದು ವರ್ಷಗಳ ಲಾಕ್ ಅವಧಿ ಮುಗಿದ ಬಳಿಕ ಶೇ.25ರಷ್ಟು ವಿತ್‌ಡ್ರಾವಲ್‌ಗೆ ಅನುಮತಿ ನೀಡುವ ಬಗ್ಗೆಯೂ ಐಆರ್‌ಡಿಎಐ ಆಲೋಚನೆ ನಡೆಸುತ್ತಿದೆ. ಭಾಗಶಃ ವಿತ್‌ಡ್ರಾವಲ್ ಅನ್ನು ಉನ್ನತ ವ್ಯಾಸಂಗಕ್ಕಾಗಿ, ಮಕ್ಕಳ ವಿವಾಹ, ಗಂಭೀರ ಕಾಯಿಲೆಗಳು, ಆಸ್ತಿ ನಿವೇಶನ ಖರೀದಿ ಅಥವಾ ಮನೆಕಟ್ಟುವ ಉದ್ದೇಶಕ್ಕೆ ನೀಡಲು ಯೋಜಿಸಲಾಗುತ್ತಿದೆ.
4. 45 ವರ್ಷಕ್ಕಿಂತ ಕಡಿಮೆಯಿದ್ದ ಪಕ್ಷದಲ್ಲಿ ಯುನಿಟ್ ಲಿಂಕ್ ಪಾಲಿಸಿಗಳಲ್ಲಿ ಕನಿಷ್ಠ ಜೀವವಿಮೆ ಈಗಿರುವ 10 ಪಟ್ಟಿಗಿಂತ 7 ಪಟ್ಟು ಆಗಲಿದೆ. ಇದು ಪಾಲಿಸಿದಾರ ನಿಧನವಾಗಿದ್ದಲ್ಲಿ ನೀಡುವ ಹಣವಾಗಿರುತ್ತದೆ.
5. ಯುನಿಟ್ ಲಿಂಕ್ಡ್ ಪಾಲಿಸಿಗಳಿಗಳಿದ್ದ ಕಡ್ಡಾಯ ಗ್ಯಾರೆಂಟಿಯು ಇನ್ನು ಐಚ್ಛಿಕವಾಗಲಿದೆ. ಇದು ಫೆ.1ರಿಂದ ಅನ್ವಯವಾಗಲಿದೆ. ಈ ಮೊದಲು ಐಆರ್‌ಡಿಎಐಯು ನಿವೃತ್ತಿ ಯುನಿಟ್ ಲಿಂಕ್ಡ್ ಪಾಲಿಸಿಗಳಲ್ಲಿ ಗ್ಯಾರೆಂಟಿಯನ್ನು ಕಡ್ಡಾಯವನ್ನಾಗಿ ಮಾಡಿತ್ತು. ಈಗ ಹೊಸ ಕ್ರಮದಿಂದಾಗಿ ಪಾಲಿಸಿದಾರರಿಗೆ ರಿಲೀಫ್ ಸಿಕ್ಕಿದ್ದು ಗ್ಯಾರೆಂಟಿಯನ್ನು ಆಯ್ಕೆ ಮಾಡಬಹುದು ಅಥವಾ ಮಾಡದೇ ಇರಬಹುದಾಗಿದೆ.