ಚಿಂಚೋಳಿ: ತಾಲೂಕಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ಗ್ರಾಮಗಳಲ್ಲಿ ರಸ್ತೆಸಂಪರ್ಕ ಮತ್ತು ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಹಳ್ಳಿಯ ಜನರು ರಸ್ತೆಪರದಾಡುತ್ತಿದ್ದಾರೆ. ಅನೇಕ ಮನೆಗಳಿಗೆ ಪ್ರವಾಹ ನೀರು ನುಗ್ಗಿ ಮನೆಯಲ್ಲಿದ್ದ ದವಸ ಧಾನ್ಯಗಳು ಕೊಚ್ಚಿಕೊಂಡು ಹೋಗಿದೆ. ರೈತರ ಜಮೀನುಗಳಲ್ಲಿ ಬೆಳೆದು ನಿಂತ ಮುಂಗಾರು ಬೆಳೆಗಳು ನೀರಿನರಭಸಕ್ಕೆ ಕೊಚ್ಚಿ ಹೋಗಿವೆ. ಮಳೆ ಭೀಕರತೆ ಇಲ್ಲಿನಜನತೆ ಬದುಕು ನೀರಿನಲ್ಲಿ ಹರಿದು ಹೋಗಿದೆ.
ಸರಕಾರ ಇನ್ನುವರೆಗೆ ಪರಿಹಾರ ನೀಡದಿರುವುದು ಸಂತ್ರಸ್ತರು ಆಕ್ರೋಶಕ್ಕೆ ಕಾರಣವಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಜೂನ್ಪ್ರಾರಂಭದಿಂದಲೂ ತಾಲೂಕಿನಲ್ಲಿ ಬಿಟ್ಟು ಬಿಡದೇ ಮಳೆ ಸುರಿಯುತ್ತಿದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಹರಿದು ಬಿಟ್ಟ ನೀರಿನ ಪ್ರವಾಹದಿಂದ ರೈತರ ಜಮೀನುಗಳಿಗೆ ಮತ್ತುನದಿ ಪಾತ್ರದ ಗ್ರಾಮಗಳಲ್ಲಿನ ಮನೆಗಳಿಗೆ ಪ್ರವಾಹನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಹಾನಿಯನ್ನುಂಟುಮಾಡಿದೆ. ಜುಲೈ, ಸೆಪ್ಟೆಂಬರ್, ಅಕ್ಟೋಬರ್‌ತಿಂಗಳಲ್ಲಿ ಸುರಿದ ಮಳೆಯಿಂದ ಚಂದ್ರಂಪಳ್ಳಿ ಜಲಾಶಯ ಮತ್ತು ಎಲ್ಲ ಸಣ್ಣ ನೀರಾವರಿ ಕೆರೆಗಳು ಭರ್ತಿಯಾಗಿ ಅಪಾಯ ಮಟ್ಟದಲ್ಲಿ ನೀರು ಹರಿದಿವೆ.
ತಾಲೂಕಿನಲ್ಲಿ 70 ವರ್ಷದ ನಂತರ ಸುರಿದ ದಾಖಲೆ 1 ಸಾವಿರ ಮಿಮೀ ಮಳೆ ಆಗಿರುವುದರಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ57 ಸಾವಿರ ಕ್ಯೂಸೆಕ್ ಮತ್ತು ಚಂದ್ರಂಪಳ್ಳಿ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರು ಹರಿ ಬಿಟ್ಟಿದ್ದರಿಂದ ಚಿಮ್ಮನಚೋಡ, ಕನಕಪೂರ, ಗಾರಂಪಳ್ಳಿ, ಚಿಂಚೋಳಿ, ಅಣವಾರ, ಗರಗಪಳ್ಳಿ, ಇರಗಪಳ್ಳಿ, ಕರ್ಚಖೇಡ ಜಟ್ಟೂರ, ಪೋತಂಗಲ, ಹಲಕೋಡ ಗ್ರಾಮದೊಳಗೆ ಪ್ರವಾಹ ನೀರು ನುಗ್ಗಿಜನರ ಆಸ್ತಿಪಾಸ್ತಿ ಹಾನಿಯನ್ನುಂಟು ಮಾಡಿದೆ.
ರೈತರ ಹೊಲಗಳಿಗೆ ಮತ್ತು ಮನೆಗಳಲ್ಲಿ ನೀರು ನುಗ್ಗಿದ್ದರಿಂದ ಪ್ರವಾಹ ಜನತೆ ಬದುಕನ್ನೇ ಕೊಚ್ಚಿಕೊಂಡು ಹೋಗಿದೆ. ಸರಕಾರ ಇನ್ನುವರೆಗೆ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ.
– ಭೀಮಶೆಟ್ಟಿ ಮುಕ್ಕಾ, ಸಮಾಜ ಸೇವಕರು
ತಾಲೂಕಿನಲ್ಲಿ ಸುರಿದ ಮಳೆಯಿಂದಾಗಿ ಕುಂಚಾವರಂ, ಕರ್ಚಖೇಡ, ರುದನೂರ ಇನ್ನಿತರ ಕಡೆಗಳಲ್ಲಿ ಒಟ್ಟು10 ಸೇತುವೆಗಳು ಮತ್ತು 15 ಕಿಮೀ ರಸ್ತೆ ಹಾಳಾಗಿದ್ದು, ಒಟ್ಟು 5.35 ಕೋಟಿ ರೂ. ಹಾನಿಯಾಗಿದೆ.
– ಗುರುರಾಜ ಜೋಶಿ, ಎಇಇ
ಸೆಪ್ಟೆಂಬರ್ ತಿಂಗಳಲ್ಲಿ 48 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿತ್ತು. ಅಕ್ಟೋಬರ್ 14 ರಂದು ಸುರಿದ ಭಾರಿಮಳೆಯಿಂದ 11 ಸಾವಿರ ಹೆ. ಬೆಳೆ ಹಾನಿಯಾಗಿದೆ. ಒಟ್ಟು 58 ಸಾವಿರ ಹೆ.ಬೆಳೆ ನಾಶವಾಗಿದೆ. ಇದರಿಂದ ಒಟ್ಟು 40 ಕೋಟಿ ರೂ. ಬೆಳೆ ನಷ್ಟವಾಗಿದೆ.
– ಅನಿಲಕುಮಾರ ರಾಠೊಡ, ಸಹಾಯಕ ಕೃಷಿ ನಿರ್ದೇಶಕರು
-ಶಾಮರಾವ ಚಿಂಚೋಳಿ