Advertisement

Dharmendra:18 ವರ್ಷದ ಬಳಿಕ ಕಿಸ್ಸಿಂಗ್‌ ಸೀನ್; ರೊಮ್ಯಾನ್ಸ್‌ಗೆ ವಯಸ್ಸಿಲ್ಲ ಎಂದ ಧರ್ಮೇಂದ್ರ

12:35 PM Jul 30, 2023 | Team Udayavani |

ಮುಂಬಯಿ: ಕರಣ್‌ ಜೋಹರ್ ನಿರ್ದೇಶನದ “ರಾಕಿ ಔರ್ ರಾಣಿ ಕೀ ಪ್ರೇಮ್” ಬಾಲಿವುಡ್‌ ಬಾಕ್ಸ್‌ ಆಫೀಸ್‌ ನಲ್ಲಿ ಭರ್ಜರಿ ಕಲೆಕ್ಷನ್‌ ಮುಂದುವರೆಸಿದೆ. ಎರಡನೇ ದಿನವೂ ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ವ್ಯಕ್ತವಾಗಿದೆ.

Advertisement

ಆಲಿಯಾ ಭಟ್‌ – ರಣವೀರ್‌ ಸಿಂಗ್‌ ಜೋಡಿಯಾಗಿ ನಟಿಸಿರುವ ಸಿನಿಮಾದಲಿ ಕೌಟುಂಬಿಕ ಹಿನ್ನೆಲೆಯ ಕಥೆಯೂ ಇದೆ. ಲವ್‌ ಸ್ಟೋರಿ ಮಾತ್ರವಲ್ಲದೆ, ಇದೊಂದು ಗುಡ್‌ ಕಟೆಂಟ್‌ ವುಳ್ಳ ಸಿನಿಮಾವಾಗಿ ಪ್ರೇಕ್ಷಕರ ಮನಗೆದ್ದಿದೆ. ಸಿನಿಮಾದಲ್ಲಿ ಪಂಜಾಬ್‌ ಮೂಲದ ರಾಕಿ, ಬೆಂಗಾಳಿ ಮೂಲದ ರಾಣಿ ಪ್ರೇಮಕಥೆಯನ್ನು ತೋರಿಸಲಾಗಿದೆ.

ಹಿರಿಯ ನಟ ಧರ್ಮೇಂದ್ರ ಅವರು ನಟಿ  ಶಬಾನಾ ಅಜ್ಮಿ ಅವರಿಗೆ ಕಿಸ್‌ ಕೊಡುವ ದೃಶ್ಯವೊಂದು ಸಿನಿಮಾದಲ್ಲಿದೆ. ಈ ದೃಶ್ಯ ಸಿನಿಮಾದೊಂದಿಗೆ ಚರ್ಚೆಯಾಗುತ್ತಿದೆ. ಈ ವಯಸ್ಸಿನಲ್ಲಿ ಧರ್ಮೇಂದ್ರ ಅವರು ಕಿಸ್ಸಿಂಗ್‌ ಸೀನ್‌ ನಲ್ಲಿ ಕಾಣಿಸಿಕೊಂಡಿರುವುದು ಪ್ರೇಕ್ಷಕರಲ್ಲಿ ಟೌಕ್‌ ಆಫ್‌ ದಿ ಟೌನ್‌ ವಿಚಾರವಾಗಿದೆ.

2007 ರಲ್ಲಿ ತೆರೆಗೆ ಬಂದಿದ್ದ ಅನುರಾಗ್‌ ಬಸು ನಿರ್ದೇಶನದ ʼಲೈಫ್‌ ಇನ್‌ ಎ ಮೆಟ್ರೋʼ ಸಿನಿಮಾದಲ್ಲಿ ನಟ ಧರ್ಮೇಂದ್ರ ಅವರು ಸಹ ನಟಿ ನಫೀಸಾ ಅಲಿ ಅವರೊಂದಿಗೆ ಕಿಸ್ಸಿಂಗ್‌ ದೃಶ್ಯವನ್ನು ಮಾಡಿದ್ದರು. ಆ ಬಳಿಕ ಇದೀಗ 18 ವರ್ಷಗಳ ಬಳಿಕ ಅವರು ಕಿಸ್ಸಿಂಗ್‌ ಸೀನ್‌ ನಲ್ಲಿ ಕಾಣಿಸಿಕೊಂಡಿದ್ದಾರೆ.

“ರಾಕಿ ಔರ್ ರಾಣಿ ಕೀ ಪ್ರೇಮ್” ನಲ್ಲಿ ಕಿಸ್ಸಿಂಗ್‌ ಸೀನ್‌ ಧರ್ಮೇಂದ್ರ ಹೇಳಿದ್ದೇನು?:

Advertisement

“ಸಿನಿಮಾದಲ್ಲಿ ನನ್ನ ಹಾಗೂ ಶಬಾನಾ ಅವರ ನಡುವಿನ ಕಿಸ್ಸಿಂಗ್‌ ಸೀನ್‌ ದೃಶ್ಯದಿಂದ ಎಲ್ಲರಿಗೂ ಅಚ್ಚರಿಯಾಗಿದೆ ಎನ್ನುವುದನ್ನು ನಾನು ಕೇಳಲ್ಪಟ್ಟೆ. ಅದೇ ಸಮಯದಲ್ಲಿ ಪ್ರೇಕ್ಷಕರು ಇದಕ್ಕೆ ಚಪ್ಪಾಳೆಯನ್ನೂ ತಟ್ಟಿದ್ದಾರೆ. ಜನ ನಿರೀಕ್ಷೆ ಇದನ್ನು ಮಾಡಿರಲಿಲ್ಲ, ಇದ್ದಕ್ಕಿದ್ದಂತೆ ಈ ದೃಶ್ಯ ಬರುವುದರಿಂದ ಇದು ಪ್ರಭಾವ ಬೀರಿದೆ ಎಂದು ನನಗೆ ಅನ್ನಿಸುತ್ತದೆ. ನಾನು ಕೊನೆಯ ಬಾರಿಗೆ ನಫೀಸಾ ಅಲಿ ಅವರೊಂದಿಗೆ ʼಲೈಫ್ ಇನ್ ಎ ಮೆಟ್ರೋʼ ಚಿತ್ರದಲ್ಲಿ ಚುಂಬನದ ದೃಶ್ಯವನ್ನು ಮಾಡಿದ್ದೆ, ಆ ಸಮಯದಲ್ಲೂ ಜನರು ಅದನ್ನು ಮೆಚ್ಚಿದ್ದರು” ಎಂದಿದ್ದಾರೆ.

“ಕರಣ್‌ ನಮಗೆ ಈ ಸೀನ್‌ ಬರೆಯುವಾಗ ನಾನು ಉತ್ಸಾಹಿ ಆಗಿರಲಿಲ್ಲ. ನಮಗೆ ಗೊತ್ತಿತ್ತು, ಇದು ಸಿನಿಮಾಕ್ಕೆ ಅಗತ್ಯವಿತ್ತು ಎಂದು. ಇದನ್ನು ಬಲವಂತವಾಗಿ ಸೀನ್‌ ನೊಳಗೆ ಹಾಕಿದ್ದಲ್ಲ. ರೊಮ್ಯಾನ್ಸ್‌ ಮಾಡಲು ಯಾವುದೇ ವಯಸ್ಸಿಲ್ಲ ಎನ್ನುವುದನ್ನು ನಾನು ನಂಬುತ್ತೇನೆ. ವಯಸ್ಸು ಕೇವಲ ಒಂದು ಸಂಖ್ಯೆ ಮತ್ತು ವಯಸ್ಸಿನ ಹೊರತಾಗಿಯೂ ಇಬ್ಬರು ವ್ಯಕ್ತಿಗಳು ಚುಂಬಿಸುವ ಮೂಲಕ ಪರಸ್ಪರ ಪ್ರೀತಿಯನ್ನು ತೋರಿಸುತ್ತಾರೆ. ಶಬಾನಾ ಮತ್ತು ನಾನು ಈ ದೃಶ್ಯವನ್ನು ಯಾವುದೇ ರೀತಿಯ ಹಿಂಜರಿಕೆಯನ್ನು ಅನುಭವಿಸಲಿಲ್ಲ ಏಕೆಂದರೆ ಅದು ತುಂಬಾ ಕಲಾತ್ಮಕವಾಗಿ ಚಿತ್ರೀಕರಿಸಲ್ಪಟ್ಟಿದೆ” ಎಂದು ಧರ್ಮೇಂದ್ರ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next