Advertisement

ನಂಬಿದ ಉದ್ಯೋಗ ‌ಕೈಕೊಟ್ಟಾಗ… : ಕಷ್ಟಗಳನ್ನು ಸೋಲಿಸಿದವರ ಕಥೆ ಕೇಳಿರಿ

07:38 PM Dec 14, 2020 | Suhan S |

ಇದು ತಕ್ಕಮಟ್ಟಿಗೆ ನನಗೆ ಸೂಟಬಲ್‌ ಜಾಬ್’ ಎಂದು ಒಂದಲ್ಲಾ ಒಂದುಉದ್ಯೋಗ ಮಾಡುತ್ತ ಜೀವನದಲ್ಲಿ ಭದ್ರತೆ ಕಂಡುಕೊಳ್ಳುತ್ತಿದ್ದಾಗಲೇ, ಇದ್ದಕ್ಕಿದ್ದಂತೆ ಉದ್ಯೋಗ ಹೋಗಿಬಿಟ್ಟರೆ..?

Advertisement

ಇಂಥದೊಂದು ಸಂದರ್ಭವನ್ನು ನೆನೆಸಿಕೊಂಡರೆ ಒಂದುಕ್ಷಣ ಕೈಕಾಲುಗಳೇ ಆಡುವುದಿಲ್ಲ! ಆದರೆ ಇದು ಈಗಾಗಲೇ ಅನೇಕರ ಬಾಳಲ್ಲಿ ಘಟಿಸಿದೆ! ಇದ್ದಕ್ಕಿದ್ದಂತೆ ವಕ್ಕರಿಸಿದ ಕೋವಿಡ್ ಇದಕ್ಕೆಲ್ಲ ಕಾರಣ. ಬರುತ್ತಿದ್ದ ಅಷ್ಟೋ ಇಷ್ಟೋ ಸಂಬಳದಲ್ಲಿ ಅಚ್ಚುಕಟ್ಟಾಗಿ ಜೀವನ ಸಾಗಿಸುತ್ತಿದ್ದವರ ಪೈಕಿ ಅನೇಕರು ಈ ಅನಿರೀಕ್ಷಿತ ಆಘಾತದಿಂದ ಚೇತರಿಸಿಕೊಂಡಿಲ್ಲ.ಕೆಲವರುಕೀಳಿರಿಮೆ, ಮಾನಸಿಕ ಖನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದೂ ಇದೆ. ಇಂತಹವರ ಮಧ್ಯೆ ಅಲ್ಲೊಬ್ಬರು ಇಲ್ಲೊಬ್ಬರು ಕಳೆದು ಹೋದ ದಿನಗಳ ಬಗ್ಗೆ ಚಿಂತಿಸುತ್ತಾಕೂರದೇ,ಕಾಲ ಹರಣ ಮಾಡದೇ ಮತ್ತೂಂದು ಕೆಲಸಕ್ಕೆ ಕೈ ಹಾಕಿ ಜೀವನದ ಗತಿಯನ್ನೇ ಬದಲಿಸಿಕೊಂಡಿದ್ದಾರೆ! ಇವರ ಯಶೋಗಾಥೆ, ಈ ಕೋವಿಡ್ ಕಾಲಕ್ಕಷ್ಟೇ ಸೀಮಿತ ಅನಿಸುವುದಿಲ್ಲ. ಬದಲಾಗಿ, ಜೀವಿತದ ಉದ್ದಕ್ಕೂ ನಾವು ಬದುಕಿ ಬಾಳುವ ರೀತಿಯ ಬಗ್ಗೆ ಪಾಠ ಮಾಡುವಂತಿವೆ!

ನೆರವಿಗೆ ಬಂತು ಮಲ್ಟಿ ಟ್ಯಾಲೆಂಟ್‌ :  ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಅಜಯ್‌ ಕುಮಾರ್‌ ಬಾಲ್ಯದಿಂದಲೇಕಷ್ಟಗಳನ್ನು ಉಂಡು ಬೆಳೆದವರು. ತನ್ನ ವಿದ್ಯಾಭ್ಯಾಸಕ್ಕೆ, ಮನೆ ತೂಗಿಸಲಿಕ್ಕೆ ಈತ ಅಪ್ಪ- ಅಮ್ಮನೊಟ್ಟಿಗೆ ದುಡಿಮೆಗೆ ನಿಂತವ. ಶಾಲಾ-ಕಾಲೇಜು ದಿನಗಳಲ್ಲಿ ಓದುತ್ತಲೇರಜಾ ದಿನಗಳಲ್ಲಿ ಬಟ್ಟೆ ಅಂಗಡಿ,ಕಂಪ್ಯೂಟರ್‌ಸೆಂಟರ್‌ಗಳಲ್ಲಿಕೆಲಸಕ್ಕೆ ಹೋಗುತ್ತಿದ್ದ. ಓದಿನಜೊತೆ ಜೊತೆಗೆ ಡ್ರಾಯಿಂಗ್‌ ರಂಗೋಲಿ ಹಾಕುವ ಕಲೆ ಮೈಗೂಡಿಸಿಕೊಂಡು, ಬಿ. ಇಡಿ ವಿದ್ಯಾರ್ಥಿಗಳಿಗೆ ಡ್ರಾಯಿಂಗ್‌ ಮಾಡಿಕೊಟ್ಟು ಹಣ ಗಳಿಸುತ್ತಾ ಬಂದ. ಹೀಗೆ ಪೈಸೆ ಪೈಸೆ ಹಣ ಕೂಡಿಟ್ಟು, ಅದರಲ್ಲಿ ಬಿ. ಎಸ್ಸಿ ಮುಗಿಸಿ, ಬಿ. ಇಡಿ ಮಾಡುತ್ತಲೇ ಸಮೀಪದ ನಾಗರಕಟ್ಟೆಯ ಎಸ್‌.ಜಿ.ಜಿ ಆಂಗ್ಲ ಮಾಧ್ಯಮ ಪ್ರೈಮರಿ ಶಾಲೆಯಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕನಾದ. ಈ ನಡುವೆ ವಾಲ್‌ ಡಿಸೈನಿಂಗ್‌, ಫೋಟೋ, ವಿಡಿಯೋ, ಪ್ರೀ ವೆಡ್ಡಿಂಗ್‌ ವಿಡಿಯೋ ಎಡಿಟಿಂಗ್‌ಕೆಲಸವನ್ನೂಕಲಿತಿದ್ದ. ಈ ಮಲ್ಟಿ ಟ್ಯಾಲೆಂಟ್‌ ಈತನ ಜೀವನವನ್ನು ಈಗ ಟ್ರ್ಯಾಕ್‌ಗೆ ತಂದಿದೆ! ಈ ಕಾರಣಕ್ಕೆ ಟೀಚರ್‌ ಅಜಯ್‌ ಈಗ ಎಲ್ಲರಿಂದಲೂ ಅಜಯ್‌ ಎಡಿಟ್‌ ಅಂತಲೇ ಕರೆಯಿಸಿಕೊಳ್ಳುತ್ತಿದ್ದಾನೆ!

ಟೀಚರ್‌ ಹುದ್ದೆಯಿಂದ ಡ್ರೈವರ್‌ ಹುದ್ದೆಗೆ… :

ಕೊಟ್ಟೂರು ಸಮೀಪದ ಹ್ಯಾಳ್ಯದ ಪ್ರದೀಪ್‌ಬಡಿಗೇರ್‌ ಬಿಪಿಎಡ್‌ ಪದವೀಧರ.ಕಳೆದ ವರ್ಷ ತನ್ನ ಸ್ನೇಹಿತರೊಂದಿಗೆ ಹೂವಿನ ಹಡಗಲಿಯಲ್ಲಿಪ್ರಿಯದರ್ಶಿನಿ ನವೋದಯಕೋಚಿಂಗ್‌ ಸೆಂಟರ್‌ ತೆರೆದಿದ್ದ. ಲಾಕ್‌ಡೌನ್‌ ಈತನ ಉಜ್ವಲ ಕನಸನ್ನು ನುಚ್ಚುನೂರು ಮಾಡಿತು! ಇದರಿಂದ ಎದೆಗುಂದದ ಪ್ರದೀಪ್‌ ಲ್ಯಾಂಡ್‌ ಆರ್ಮಿಯಲ್ಲಿ ಸೂಪರ್‌ವೈಸರ್‌ ಆಗಿ,ಕೊಪ್ಪಳದ ವೇಕಲ್‌ ಫೈನಾನ್ಸ್‌ ಒಂದರ ಸೀಜಿಂಗ್‌ ವಿಭಾಗದಲ್ಲಿಕೆಲಸ ಮಾಡಿದ. ಈಗ ಮೊದಲೇ ಗೊತ್ತಿದ್ದ ಚಾಲನಾಕೌಶಲ್ಯವನ್ನು ಎನ್ಕ್ಯಾಶ್‌ ಮಾಡಿಕೊಂಡು,ಕೋಳಿ ಸಾಗಾಣಿಕೆಯ ವಾಹನದ ಡ್ರೈವರ್‌ ಆಗಿ ಜೀವನ ಲೀಡ್‌ ಮಾಡುತ್ತಿದ್ದಾನೆ! ಇನ್ನು ಇದೇ ಗ್ರಾಮದ ಮಂಜುನಾಥ್‌ ಬಡಿಗೇರ್‌ ಎಂ.ಪೆಡ್‌ ಮುಗಿಸಿ ಆರು ವರ್ಷ ಖಾಸಗಿ ಶಾಲಾ-ಕಾಲೇಜುಗಳಲ್ಲಿ ದೈಹಿಕ ಶಿಕ್ಷಕರಾಗಿ ದುಡಿದಿದ್ದು, ಈಗ ತಮ್ಮೂರಿನಲ್ಲಿ ಎಗ್‌ರೈಸ್‌ ಗಾಡಿ ಇಟ್ಟು ಸಂಸಾರದ ತೇರು ಎಳೆಯತ್ತಿದ್ದಾರೆ.

Advertisement

ಕೈಹಿಡಿದದ್ದುಕುಲ ಕಸುಬು  :

ಕೂಡ್ಲಿಗಿಯ ಪರಶುರಾಮ್‌ಗೆ ಚಿಕ್ಕಂದಿನಿಂದಲೂ ಕುಲ ಕಸುಬು ಆದ ಕ್ಷೌರಿಕ ವೃತ್ತಿಯ ಆಚೆ ಒಂದು ಸುಂದರ ಮತ್ತು ಗೌರವಯುತ ಬದುಕುಕಟ್ಟಿಕೊಳ್ಳುವ ಆಸೆ. ಇದು ಆತನ ಪೋಷಕರ ಒತ್ತಾಸೆಕೂಡ ಆಗಿತ್ತು. ಕಷ್ಟಪಟ್ಟು ಬಿ.ಇಡಿ ಮುಗಿಸಿ, ಆಮೇಲೆ ಇತಿಹಾಸ ವಿಭಾಗದಲ್ಲಿ ಎಂ.ಎ ಮಾಡಿ ಕೂಡ್ಲಿಗಿಯ ಹಿರೇಮಠ ಪದವಿ ಪೂರ್ವ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾದ.ಕೊರೊನಾಕಾರಣಕ್ಕೆ ಇದ್ದಕ್ಕಿದ್ದಂತೆ ನೌಕರಿ ಹೋಯಿತು. ಪರಶುರಾಮ್‌ಕಿಂಚಿತ್ತೂ ಬೇಸರಿಸಿಕೊಳ್ಳದೇ ಈಗ ತಮ್ಮಕುಲಕಸುಬಾದ ಕ್ಷೌರಿಕ ವೃತ್ತಿ ಮಾಡುತ್ತಿದ್ದಾರೆ! ಇದೇ ಊರಿನ ಅಮೀರ್‌, ಸಸ್ಯಶಾಸ್ತ್ರದ ಲೆಕ್ಚರರ್‌ ಆಗಿದ್ದವ. ಈಗ ಚಿಕ್ಕನ್‌ ಅಂಗಡಿ ನಡೆಸುತ್ತಿದ್ದರೆ, ಅರ್ಥಶಾಸ್ತ್ರ ಉಪನ್ಯಾಸಕ ಆಗಿದ್ದ ತೂಗದೆಲೆ ರಾಘ ವೇಂದ್ರ ಮಾಸ್ಕ್ ಗಳನ್ನು ಮಾರಿ, ಈಗ ಸೌತ್‌ ಕಂಪನಿಯೊಂದರಲ್ಲಿ ಕೂಲಿ ಮಾಡುತ್ತಿದ್ದಾನೆ!

ಧೃತಿಗೆಡದಿರಿ.. :

ಇವರೆಲ್ಲರ ಬಾಳಕಥೆಗಳು ಸ್ಯಾಂಪಲ್‌ ಅಷ್ಟೇ. ಇಂತಹ ಹತ್ತಾರು ಜನ ನಮ್ಮ ನಿಮ್ಮ ನಡುವೆ ಇದ್ದಾರೆ. ಇವರಲ್ಲಿ ಅನೇಕರು ಈಗಾಗಲೇ ತಮ್ಮ ಮೂಲ ವೃತ್ತಿಗೆ ಮರಳುವ ಯೋಚನೆಯನ್ನೇ ಬಿಟ್ಟಿದ್ದಾರೆ! ಹೀಗೆ ಇವರು ಜೀವನ ಹಸನು ಮಾಡಿಕೊಳ್ಳಲಿಕ್ಕೆಕಾರಣ ಇವರಲ್ಲಿನ ಆತ್ಮಸ್ಥೈರ್ಯ! ಇಂತಹವರು ನಮಗೆ ಪ್ರೇರಣೆ ಆಗಬೇಕು. ಎಂತಹಕಡುಕಷ್ಟ ಬಂದರೂಧೃತಿಗೆಡದೆ ಧೃಢವಾಗಿ ನಿಲ್ಲಬೇಕು.ಕಷ್ಟಗಳಿಗೆ ಬೆನ್ನು ತೋರದೆ ಧೈರ್ಯದಿಂದ ಎದುರಿಸಬೇಕು. ಯಾವುದೇಕಾರಣಕ್ಕೂ ಆತಂಕಕ್ಕೆ ಒಳಗಾಗಿ, ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ.

ಕೌಶಲ್ಯ ಬೆಳೆಸಿಕೊಳ್ಳಿ.. :

ಓದು, ಉದ್ಯೋಗದೊಟ್ಟಿಗೆ ಯಾವುದಾದರೊಂದು ಕೌಶಲ್ಯ ರೂಢಿಸಿಕೊಳ್ಳಿ. ನಿಮ್ಮಕುಲ ಕಸುಬು, ಕರಕುಶಲತೆ.. ಹೀಗೆ ಯಾವುದೇ ಆಗಿರಲಿ. ಇದುನಿಮ್ಮನ್ನು ರಿಲ್ಯಾಕ್ಸ್ ಮೂಡಿನಲ್ಲಿ ಇಡುವುದಷ್ಟೇ ಅಲ್ಲದೆ, ಇಂತಹ ಸಂಕಷ್ಟದ ದಿನಗಳಲ್ಲಿಕಾಪಾಡುತ್ತದೆ. ನೀವು ನಂಬಿದ ಉದ್ಯೋಗ ಇಲ್ಲವಾದಾಗ ಜೊತೆಯಾಗಿ ನಿಲ್ಲುತ್ತದೆ. ಹಣದ ಅಡಚಣೆಯನ್ನು ನೀಗಿಸುತ್ತೆ. ಹೀಗಾಗಿ ಒಂದಿಷ್ಟು ಸಮಯವನ್ನುಕೌಶಲ್ಯ ಅಭಿವೃದ್ಧಿಗೆ ಮೀಸಲಿಡಿ.

ಮಿತ ಉಳಿತಾಯ ಇರಲಿ.. ಇದ್ದಾಗ ದುಂದು ವೆಚ್ಚ ಮಾಡಿ, ಇಲ್ಲದಾಗ ಕೊರಗುವುದು ಸಲ್ಲದು. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಪೈಸೆ ಪೈಸೆಗೂಲೆಕ್ಕ ಹಾಕಿಉಳಿತಾಯ ಮಾಡಿ. ಹೀಗೆ ಅನಿರೀಕ್ಷಿತವಾಗಿ ಉದ್ಯೋಗ ಕಳೆದುಕೊಂಡಾಗ ತತ್‌ಕ್ಷಣದ ಜೀವನ ನಿರ್ವಹಣೆಗೆ ಮತ್ತು

ಮುಂದೆ ಕೈಗೊಳ್ಳಲಿರುವ ಉದ್ಯೋಗಕ್ಕೆ ಆ ಹಣ ಬಂಡವಾಳ ಆಗುತ್ತದೆ! ಸುಂದರ ಭವಿಷ್ಯಕ್ಕೋಸ್ಕರ ಬರುವ ಆದಾಯದಲ್ಲಿ ಅಲ್ಪ-ಸ್ವಲ್ಪ ಉಳಿಸುವುದನ್ನುಈಗಿನಿಂದಲೇ ಕಲಿಯಿರಿ. ಹೀಗೆ ಮಾಡಿದರೆಬೇಗನೆ ಸ್ವಲ್ಪ ಮಟ್ಟಿಗೆ ಆದರೂಚೇತರಿಸಿಕೊಳ್ಳಲಿಕ್ಕೆ ಸಾಧ್ಯ. ನಿಮ್ಮ ಪರಿಸರದಲ್ಲಿ ಯಾವ ಉದ್ಯೋಗ ಮಾಡಿದರೆ ಕ್ಲಿಕ್‌ ಆಗುತ್ತೇವೆ ಎನ್ನುವ ಬಗ್ಗೆ ಸ್ಪಷ್ಟತೆ ಪಡೆದು ಮುಂದೆ ಹೆಜ್ಜೆ ಇಡಿ.

 

ಸ್ವರೂಪಾನಂದ ಕೊಟ್ಟೂರು

Advertisement

Udayavani is now on Telegram. Click here to join our channel and stay updated with the latest news.

Next