Advertisement

ಟವರ್‌ ಅಳವಡಿಕೆಗೆ ಲೈಸೆನ್ಸ್‌ ಕಡ್ಡಾಯ

12:05 PM Nov 20, 2018 | |

ಬೆಂಗಳೂರು: ರಾಜ್ಯಾದ್ಯಂತ ಅಳವಡಿಸಲಾಗಿರುವ ಎಲ್ಲ ರೀತಿಯ ಟವರ್‌ಗಳಿಗೆ ಆಯಾ ಕಂಪನಿಗಳು ಮೂರು ತಿಂಗಳಲ್ಲಿ ಲೈಸನ್ಸ್‌ ಪಡೆಯುವುದು ಕಡ್ಡಾಯ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ.

Advertisement

ಸೋಮವಾರ ಮೊಬೈಲ್‌ ಟವರ್‌ಗಳ ಅಳವಡಿಕೆ ಸಂಬಂಧ ಅಧಿಕಾರಿಗಳ ಜತೆ ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ ಟವರ್‌ ಅಳವಡಿಕೆಗೆ ಯಾವುದೇ ರೀತಿಯ ನಿಯಮ, ಲೈಸನ್ಸ್‌ ಇರಲಿಲ್ಲ. ಯಾವುದೇ ಮಾನದಂಡವಿಲ್ಲದೇ ನೆಟÌರ್ಕ್‌ ಕಂಪನಿಗಳು ಟವರ್‌ಗಳನ್ನು ಅಳವಡಿಸಿದ್ದಾರೆ.

ಹೀಗಾಗಿ ಜನರ ಆರೋಗ್ಯ ದೃಷ್ಟಿಯಲ್ಲಿಟ್ಟುಕೊಂಡು ಕರ್ನಾಟಕ ಇನ್ಸಾಲೇಷನ್‌ ಆಫ್ ನ್ಯೂ ಟೆಲಿ ಕಮ್ಯುನಿಕೇಷನ್‌ ಇನ್‌ಫ್ರಾಸ್ಟ್ರಕ್ಚರ್‌ ಕಾಯಿದೆಗೆ ಹೊಸದಾಗಿ ಕೆಲವು ನಿಯಮಗಳನ್ನು ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಟವರ್‌ಗಳನ್ನು ಅಳವಡಿಸಲು ಕಡ್ಡಾಯವಾಗಿ ಲೈಸೆನ್ಸ್‌ ಪಡೆಯಬೇಕು ಎಂದು ಹೇಳಿದರು.

ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಒಎಫ್ಸಿ ಹಾಗೂ ಟೆಲಿಕಮ್ಯುನಿಕೇಷನ್‌ ಟವರ್‌ಗಳಿವೆ. ಬೆಂಗಳೂರಿನಲ್ಲಿ 6766 ಟವರ್‌ಗಳಿವೆ. ಮುಂದಿನ ದಿನಗಳಲ್ಲಿ ಯಾವುದೇ ಕಂಪೆನಿ ಟವರ್‌ ಅಳವಡಿಸುವ ಮುನ್ನ  ಮಹಾನಗರಗಳಲ್ಲಿ ಶಾಲಾ- ಕಾಲೇಜು, ಆಸ್ಪತ್ರೆ , ಧಾರ್ಮಿಕ ಸಂಸ್ಥೆಗಳಿಂದಕನಿಷ್ಠ 50 ಮೀಟರ ಅಂತರವಿರಬೇಕು.ಹೊಸದಾಗಿ ಲೈಸೆನ್ಸ್‌ ತೆಗೆದುಕೊಳ್ಳುವವರು ಕಡ್ಡಾಯವಾಗಿ ಈ ನಿಯಮ ಅನುಸರಿಸಬೇಕು.

ಜತೆಗೆ, ಈಗಾಗಲೇ ಶಾಲಾ ಕಾಲೇಜುಗಳ ಹತ್ತಿರ ಟವರ್‌ ಅಳವಡಿಸಿರುವವರು ಮೂರುತಿಂಗಳಿನಲ್ಲಿ ಟವರ್‌ ತೆರವುಗೊಳಿಸಿ ಹೊಸದಾಗಿ ಲೈಸೆನ್ಸ್‌ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ಹೊಸದಾಗಿ ಪರವಾನಗಿಗೆ ಅರ್ಜಿ ಸಲ್ಲಿಸಿದರೆ 15 ದಿನದೊಳಗೆ ಅವರಿಗೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

Advertisement

ಇದೀಗ ಆನ್‌ಲೈನ್‌ಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಟವರ್‌ ಅಳವಡಿಸಲು 1 ಲಕ್ಷ ರೂ.ಶುಲ್ಕ,ಮಹಾನಗರಗಳಲ್ಲಿ 35 ಸಾವಿರ ರೂ, ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ 25 ಸಾವಿರ ರೂ. ಹಾಗೂ ಗ್ರಾಮಪಂಚಾಯತಿಯಲ್ಲಿ 15 ಸಾವಿರ ರೂ. ಶುಲ್ಕ ಪಾವತಿಸಬೇಕು ಎಂದು ಹೇಳಿದರು.

ನೂತನ ಕಾಯಿದೆಯಲ್ಲಿ ಟವರ್‌ ಅಳವಡಿಸುವ ಕಟ್ಟಡದ ಭದ್ರತೆ, ನೋಂದಣಿ ರೂಪುರೇಷೆಯನ್ನು ಪರಿಶೀಲಿಸಲು ಸಂಬಂಧಪಟ್ಟ ಇಂಜಿನಿಯರ್‌ಗಳಿಂದ ಬಿಲ್ಡಿಂಗ್‌ ಪ್ಲಾನ್‌ ಆಕ್ಯುಪೇಷನ್‌ ಸರ್ಟಿಫಿಕೇಟ್‌ ಪಡೆದುಕೊಳ್ಳಬೇಕು. ಶಬ್ದ ರಹಿತ ಜನರೇಟರ್‌ ಅಳವಡಿಸಬೇಕು.

ಟವರ್‌ನಿಂದ  ಹೊರಹೊಮ್ಮುವ ರೇಡಿಯೇಷನ್‌ಗಳಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂಬುದರ ಬಗ್ಗೆ ಮೌಖೀಕ ದೂರುಗಳಷ್ಟೇ ಕೇಳಿ ಬಂದಿವೆ. ವೈಜ್ಞಾನಿಕವಾಗಿ ಯಾವುದು ದೃಢಪಟ್ಟಿಲ್ಲ. ಆದರೂ ಜನಸಾಮಾ.ಟವರ್‌ನಿಂದ  ಯಾವುದೇ ರೀತಿಯ ತೊಂದರೆ ಉಂಟಾದರೆ ಈ ಬಗ್ಗೆ ಸಾರ್ವಜನಿಕರು ದೂರು ದಾಖಲಿಸಲು ಪ್ರತ್ಯೇಕ ಸೆಲ್‌ ತೆರೆಯಲಾಗುವುದು ಎಂದರು.

ಪ್ರತಿ ಜಿಲ್ಲೆಯಲ್ಲಿ ಟವರ್‌ ಅಳವಡಿಕೆ ಸಂಬಂಧ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ಆಯಾ ಜಿಲ್ಲೆಯ ಡಿಸಿ, ಜಿಲ್ಲಾ ಪಂಚಾಯತ್‌ ಸಿಇಒ, ಸಿಇಆರ್‌ಎಂ ಸದಸ್ಯ, ಆರೋಗ್ಯಾಧಿಕಾರಿ, ವಾಯುಮಾಲಿನ್ಯ ಅಧಿಕಾರಿ,ಸರಕಾರದಿಂದ ನಾಮನಿರ್ದೇಶನ ಮಾಡುವ ಸದಸ್ಯರು ಇರಲಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಸಮಿತಿ ರಚಿಸಲಾಗುವುದು ಎಂದು ಹೇಳಿದರು.ಸಭೆಯಲ್ಲಿ ಸಚಿವ ಯು.ಟಿ. ಖಾದರ್‌,  ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್‌ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next