Advertisement

ಎಲ್‌ಐಸಿ ಡೆತ್‌ ಕ್ಲೇಮುಗಳ ಪ್ರಮಾಣ ಶೇ.22 ಇಳಿಕೆ

06:44 PM Aug 21, 2022 | Team Udayavani |

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಭಾರತೀಯ ಜೀವವಿಮಾ ನಿಗಮ(ಎಲ್‌ಐಸಿ)ಕ್ಕೆ ಬಂದಿರುವ ಡೆತ್‌ ಕ್ಲೇಮುಗಳ ಪ್ರಮಾಣ ಶೇ.20ರಷ್ಟು ಇಳಿಕೆಯಾಗಿದೆ. ಆದರೂ, 2020ಕ್ಕಿಂತ ಹಿಂದಿನ ಅವಧಿಗೆ ಹೋಲಿಸಿದರೆ ಡೆತ್‌ ಕ್ಲೇಮು ಮೊತ್ತದ ಪ್ರಮಾಣ ಹೆಚ್ಚೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಕಳೆದ ವಿತ್ತೀಯ ವರ್ಷದ ಜೂನ್‌ ತ್ತೈಮಾಸಿಕದಲ್ಲಿ ಡೆತ್‌ ಕ್ಲೇಮುಗಳಿಗೆ ಸಂಬಂಧಿಸಿ 7,111 ಕೋಟಿ ರೂ.ಗಳಷ್ಟು ಪಾವತಿಸಲಾಗಿತ್ತು. ಪ್ರಸಕ್ತ ವರ್ಷದ ಮೊದಲ ತ್ತೈಮಾಸಿಕದಲ್ಲಿ ಈ ಮೊತ್ತ 5,743 ಕೋಟಿ ರೂ.ಗೆ ಇಳಿದಿದೆ ಎಂದು ಎಲ್‌ಐಸಿ ಮುಖ್ಯಸ್ಥ ಎಂ.ಆರ್‌. ಕುಮಾರ್‌ ಹೇಳಿದ್ದಾರೆ.

ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ 2 ವರ್ಷಗಳಲ್ಲಿ ಕ್ಲೇಮುಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದ್ದವು. ಈಗ ಪರಿಸ್ಥಿತಿ ಸಹಜತೆಗೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಕ್ಲೇಮುಗಳ ಪ್ರಮಾಣ ಕೊರೊನಾಪೂರ್ವದ ಮಟ್ಟಕ್ಕೆ ತಲುಪಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ತೈಮಾಸಿಕದಲ್ಲಿ ಎಲ್‌ಐಸಿ ನಿವ್ವಳ ಲಾಭ 682.88 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ 2.94 ಕೋಟಿ ರೂ. ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next