ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ)ದ ಐಪಿಒ(ಆರಂಭಿಕ ಷೇರು ಮಾರಾಟ) ಮಾರ್ಚ್ ಒಳಗೆ ಮಾರುಕಟ್ಟೆ ಪ್ರವೇಶಿಸಲಿದೆ.
ಮಾಸಾಂತ್ಯದ ಒಳಗಾಗಿ ಐಪಿಒಗೆ ಹೊರಡಿಸಲು ಅನುಮತಿ ಕೋರಿ ಸೆಬಿಗೆ ದಾಖಲೆಗಳನ್ನು ಸಲ್ಲಿಸಲಾಗುತ್ತದೆ ಎಂದು ವಿತ್ತ ಸಚಿವಾಲಯದ ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪ್ರಸಕ್ತ ವಿತ್ತೀಯ ವರ್ಷ ಮಾರ್ಚ್ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಪ್ರಸಕ್ತ ವರ್ಷ 1.75 ಲಕ್ಷ ಕೋಟಿ ರೂ. ಬಂಡವಾಳ ವಾಪಸಾತಿಗೆ ಹಾಕಿಕೊಂಡಿರುವ ಗುರಿ ಪೂರೈಕೆಗೆ ಎಲ್‌ಐಸಿ ಐಪಿಒ ಮಾರುಕಟ್ಟೆ ಪ್ರವೇಶಿಸುವುದು ಸರ್ಕಾರಕ್ಕೆ ಅನಿವಾರ್ಯವೂ ಆಗಿದೆ. ಇದುವರೆಗೆ ಕೇವಲ 9,330 ಕೋಟಿ ರೂ.ಗಳನ್ನು ಬಂಡವಾಳ ವಾಪಸಾತಿ ಮೂಲಕ ಪಡೆದುಕೊಳ್ಳಲಾಗಿದೆ.