ನವ ದೆಹಲಿ : ಎಲ್ ಐ ಸಿ ಎಲ್ಲರಿಗೂ ಹಲವಾರು ವರ್ಷಗಳಿಂದ ಪರಿಚಯ. ಗ್ರಾಹಕರು ಇಟ್ಟ ವಿಶ್ವಾಸವನ್ನು ಎಲ್ ಐ ಸಿ ಕೂಡ ಉಳಿಸಿಕೊಂಡು ಬಂದಿದೆ. ನಿತ್ಯ ನಿರಂಗತರವಾಗಿ ಎಲ್ ಐ ಸಿ ಗ್ರಾಹಕ ಸ್ನೇಹಿ ಯೋಜನೆಗಳನ್ನು ನೀಡುತ್ತಲೇ ಬಂದಿದ್ದು, ಈಗ ಮತ್ತೆ ಒಂದು ಗ್ರಾಹಕ ಉಪಯೋಗಿ ಯೋಜನೆಯನ್ನು ಪರಿಚಯಿಸುತ್ತಿದೆ.
ಭಾರತೀಯ ಜೀವ ವಿಮಾ ನಿಗಮ ಅಥವಾ ಎಲ್ ಐ ಸಿ ಗ್ರಾಹಕರಿಗೆ ಅನುಕೂಲ ಮಾಡುವ ಉದ್ದೇಶದಿಂದ, ರದ್ದಾಗಿರುವ ವಿಮೆ ಯೋಜನೆಯನ್ನು ನವೀಕರಿಸುವ ‘ವಿಶೇಷ ನವೀಕರಣ ಅಭಿಯಾನ’ ವನ್ನು ಪ್ರಾರಂಭಿಸುತ್ತಿದೆ.
ಇದನ್ನೂ ಓದಿ : ಲಿಂಗಾಯತ ಧರ್ಮ ಹೋರಾಟದಿಂದ ಕಾಂಗ್ರೆಸ್ ಸೋತಿಲ್ಲ: ಎಂ.ಬಿ.ಪಾಟೀಲ್
ರದ್ದಾಗಿರುವ ಪರ್ಸನಲ್ ಯೋಜನಗಳಿಗೆ ಈ ಅಭಿಯಾನ ಅನ್ವಯವಾಗಲಿದ್ದು, ನಿನ್ನೆ (ಆಗಸ್ಟ್ 23, ಸೋಮವಾರ) ಯಿಂದ ಅಕ್ಟೋಬರ್ 22 ರ ತನಕ ಈ ಅಭಿಯಾನ ನಡೆಯಲಿದೆ ಎಂದು ಈ ಎಲ್ ಐ ಸೊ ಮಾಹಿತಿ ನೀಡಿದೆ.
ನಿರ್ದಿಷ್ಟ ಅರ್ಹ ಯೋಜನೆಗಳ ಪಾಲಿಸಿಯನ್ನು ಕೆಲವು ಷರತ್ತುಗಳಿಗೆ ಒಳಪಟ್ಟು, ಮೊದಲ ಬಾರಿಗೆ ಪಾವತಿಸದೇ ಇರುವ ಪ್ರೀಮಿಯಂ ದಿನಾಂಕದಿಂದ ಐದು ವರ್ಷಗಳ ಒಳಗೆ ನವೀಕರಿಸಬಹುದು ಎಂದು ಎಲ್ ಐ ಸಿ ತನ್ನ ಪ್ರಕಟಣೆ ತಿಳಿಸಿದೆ.
ಟರ್ಮ್ ಅಶ್ಯೂರೆನ್ಸ್ ಮತ್ತು ಹೈ ರಿಸ್ಕ್ ಪ್ಲಾನ್ ಗಳನ್ನು ಹೊರತುಪಡಿಸಿ, ಪಾವತಿಸಿದೇ ಇರುವ ಒಟ್ಟು ಪ್ರೀಮಿಯಂ ಪರಿಗಣಿಸಿ ವಿಳಂಬ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುತ್ತದೆ. ಅರ್ಹ ಆರೋಗ್ಯ ಮತ್ತು ಕಿರು ವಿಮಾ ಯೋಜನೆಗಳು ವಿಳಂಬ ಶುಲ್ಕದಲ್ಲಿ ರಿಯಾಯಿತಿ ಪಡೆಯಬಹುದಾಗಿದೆ ಎಂದು ಹೇಳಿದೆ.
ಇದನ್ನೂ ಓದಿ : ಕಾಂಗ್ರೆಸಿಗರೇ ಒಬ್ಬೊಬ್ಬರ ಫ್ಯೂಸನ್ನು ಕಿತ್ತು ಹಾಕಿಕೊಳ್ಳುತ್ತಿದ್ದಾರೆ: ಈಶ್ವರಪ್ಪ ವ್ಯಂಗ್ಯ