Advertisement

ಇನ್ಮುಂದೆ ವಾರದಲ್ಲಿ ಐದು ದಿನಗಳು ಮಾತ್ರ ಕಾರ್ಯ ನಿರ್ವಹಿಸಲಿದೆ ಎಲ್ ಐ ಸಿ ಕಚೇರಿ ..!

05:15 PM May 06, 2021 | Team Udayavani |

ನವ ದೆಹಲಿ : ಭಾರತೀಯ ಜೀವನ್  ನಿಗಮದ ಅಥವಾ ಎಲ್‌ ಐ ಸಿ ಯ ಪಾಲಿಸಿದಾರರಾಗಿದ್ದರೇ,ಈ ಸುದ್ದಿಯ ಬಗ್ಗೆ ನೀವು ತಿಳಿದುಕೊಳ್ಳಲೇ ಬೇಕು.

Advertisement

ಹೌದು, ಎಲ್ ಐ ಸಿ ಇನ್ನು ಮುಂದೆ ವಾರದಲ್ಲಿ ಕೇವಲ ಐದು ದಿನಗಳು ಮಾತ್ರ ಕೆಲಸ ಮಾಡಲಿದೆ. ಉಳಿದೆರಡು ದಿನಗಳು ಸಾರ್ವಜನಿಕ ರಜಾ ದಿನವೆಂದು ಪರಿಗಣಿಸಲಾಗುತ್ತದೆ.

ಓದಿ : ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಮೇ 10 ರ ನಂತರ ನಿಮಗೆ ಎಲ್ ಐ ಸಿ  ಕಚೇರಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ತೆರೆದಿರುತ್ತದೆ. ಇನ್ನು ಮುಂದೆ  ಪ್ರತಿ ಶನಿವಾರವನ್ನು  ಎಲ್‌ ಐ ಸಿ ಗೆ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

ಎಲ್‌ಐಸಿಯ ಹೊಸ ನಿಯಮಗಳ  ಪ್ರಕಾರ, ಮೇ 10 ರಿಂದ ಎಲ್‌ಐಸಿ ಕಚೇರಿಗಳು ವಾರದಲ್ಲಿ 5 ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತವೆ. ಈಗ ಪ್ರತಿ ಶನಿವಾರ ನೌಕರರ ರಜಾದಿನವಿರುತ್ತದೆ.

Advertisement

ಎಲ್‌ ಐ ಸಿ ಯು ಕೆಲಸದ ದಿನಗಳಲ್ಲಿ ಈ ಬದಲಾವಣೆಯ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡುವ ಮೂಲಕ ಜನರಿಗೆ ತಿಳಿಸಿದ್ದು, ಹೊಸ ನಿಯಮಗಳ ಪ್ರಕಾರ, ಎಲ್ ಐ ಸಿ ಯ ಕಚೇರಿ ಮೇ 10 ರ ನಂತರ ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ ಮಾತ್ರ ಕಾರ್ಯನಿರ್ವಹಿಸಲಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ 1881 ರ ಸೆಕ್ಷನ್ 25 ರ ಅಡಿಯಲ್ಲಿ ಪಡೆದ ಅಧಿಕಾರಗಳ ಆಧಾರದ ಮೇಲೆ ಸರ್ಕಾರವು ಎಲ್ ಐ ಸಿ ಯಲ್ಲಿ ಈ ಬದಲಾವಣೆಯನ್ನು ತಂದಿದೆ.

ಓದಿ : ಕೋವಿಡ್ ಸೋಂಕಿಗೆ ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸಹೋದರಿ ಬಲಿ!

Advertisement

Udayavani is now on Telegram. Click here to join our channel and stay updated with the latest news.

Next