Advertisement

ಎಲ್‌ಐಸಿಯಿಂದ ಆಧಾರ್‌ ಆಧರಿತ ವಿಮಾ ಯೋಜನೆ

03:45 AM Apr 25, 2017 | Team Udayavani |

ಮುಂಬೈ: ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) “ಆಧಾರ್‌ ಶಿಲಾ’ ಮತ್ತು “ಆಧಾರ್‌ ಸ್ತಂಭ’ ಎಂಬ ಎರಡು ಆಧಾರ್‌ ಆಧರಿತ ವಿಮಾ ಯೋಜನೆಗಳನ್ನು ಘೋಷಿಧಿಸಿದೆ. ಆಧಾರ್‌ ಸಂಖ್ಯೆ ಹೊಂದಿರುವ ಸಾರ್ವಜನಿಧಿಕರು ಮಾತ್ರ ಈ ಎಂಡೋವ್‌ಮೆಂಟ್‌ ವಿಮಾ ಯೋಜನೆಗಳನ್ನು ಖರೀದಿಸ ಬಹುದಾಗಿದೆ. 

Advertisement

ಮಹಿಳೆಯರಿಗೆಂದೇ ವಿಶೇಷವಾಗಿ ರೂಪಿಸ ಲಾಗಿರುವ ಆಧಾರ್‌ ಶಿಲಾ ಯೋಜನೆ ಶೇ.110ರಷ್ಟು ಡೆತ್‌ ಬೆನಿಫಿಟ್‌ (ಮರಣಾನಂತರ ಸಿಗುವ ವಿಮೆ ಹಣ) ಹಾಗೂ ಪುರುಷರಿಗೆ ಮೀಸಲಾದ ಆಧಾರ್‌ ಸ್ತಂಭ ವಿಮೆ ಯೋಜನೆಯು ಶೇ.100ರಷ್ಟು ಡೆತ್‌ ಬೆನಿಫಿಟ್‌ ನೀಡುತ್ತದೆ. ಹೊಸ ಯೋಜನೆಗಳು ಉಳಿತಾಯ ಮತ್ತು ಸುರಕ್ಷತೆಯ ಪ್ರಯೋಜನಗಳನ್ನು ಒಟ್ಟೊಟ್ಟಿಗೆ ನೀಡಲಿದ್ದು, ಮೆಚೂÂರಿಟಿ ಅವಧಿ ಪೂರ್ಣಗೊಂಡಾಗ ನಿವ್ವಳ ಮೊತ್ತ ವಿಮಾದಾರರ ಕೈಸೇರಲಿದ್ದು, ಕುಟುಂಬಕ್ಕೆ ಆರ್ಥಿಕ ಸುರಕ್ಷತೆ ಒದಗಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next