Advertisement

ಎಲ್‌ಐಸಿಯಿಂದ “ಆರೋಗ್ಯ ರಕ್ಷಕ್‌’ವಿಮಾ ಸೌಲಭ್ಯ ಜಾರಿ

09:29 PM Jul 19, 2021 | Team Udayavani |

ನವದೆಹಲಿ: ಭಾರತೀಯ ಜೀವ ವಿಮಾ ನಿಗಮವು (ಎಲ್‌ಐಸಿ), ಸೋಮವಾರ “ಆರೋಗ್ಯ ರಕ್ಷಕ್‌’ ಎಂಬ ಹೊಸ ಆರೋಗ್ಯ ವಿಮಾ ಸೌಲಭ್ಯವೊಂದನ್ನು ಜಾರಿಗೊಳಿಸಿದೆ. ಇದು ನಾನ್‌-ಲಿಂಕ್ಡ್, ನಾನ್‌-ಪಾರ್ಟಿಸಿಪೇಟಿಂಗ್‌ ಮಾದರಿಯ, ರೆಗ್ಯುಲರ್‌ ಪ್ರೀಮಿಯಂ ಸೌಲಭ್ಯವುಳ್ಳ ಆರೋಗ್ಯ ವಿಮೆ ಎಂದು ಜೀವ ವಿಮಾ ನಿಗಮ ಹೇಳಿದೆ.

Advertisement

ಇದೊಂದು ವೈಯಕ್ತಿಕ ವಿಮಾ ಸೌಲಭ್ಯವಾಗಿದ್ದು, ಗ್ರಾಹಕರು ತಮ್ಮ ಸಂಗಾತಿ, ಮಕ್ಕಳು ಹಾಗೂ ಅಪ್ಪ- ಅಮ್ಮನ ಹೆಸರನ್ನು ಇದರ ವ್ಯಾಪ್ತಿಗೆ ತರಬಹುದು. ಆದರೆ, 85 ವರ್ಷ ವಯಸ್ಸಿನೊಳಗಿನ ಹಿರಿಯ ನಾಗರಿಕರಿಗೆ ಮಾತ್ರ ಈ ವಿಮಾ ಯೋಜನೆ ಅನ್ವಯವಾಗುತ್ತದೆ. ಇನ್ನು, 91 ದಿನ ದಾಟಿದ 20 ವರ್ಷದೊಳಗಿನ ತಮ್ಮ ಮಕ್ಕಳನ್ನು ಈ ವಿಮೆಯ ವ್ಯಾಪ್ತಿಗೆ ತರಬಹುದು. ವಿಮೆಯಲ್ಲಿ ನೋಂದಾಯಿಸಲಾಗಿರುವವರು ತಮಗೆ 80 ವರ್ಷಗಳಾಗುವವರೆಗೆ ಈ ಪಾಲಿಸಿಯ ಲಾಭಗಳನ್ನು ಪಡೆಯಬಹುದು ಹಾಗೂ ಮಕ್ಕಳಿಗೆ 25 ವರ್ಷ ವಯಸ್ಸಾಗುವವರೆಗೆ ಈ ಪಾಲಿಸಿಯ ಲಾಭ ಸಿಗಲಿದೆ.

ಇದನ್ನೂ ಓದಿ : Cadburyಯಲ್ಲಿ ಬೀಫ್ ಇಲ್ಲ, ನಮ್ಮ ಎಲ್ಲ ಉತ್ಪನ್ನಗಳೂ ಶೇ.100 ಸಸ್ಯಾಹಾರಿ : ಕಂಪನಿ ಸ್ಪಷ್ಟನೆ

ಫ್ಲೆಕ್ಸಿಬಲ್‌ ಬೆನಿಫಿಟ್‌ ಆಯ್ಕೆ, ಫ್ಲೆಕ್ಸಿಬಲ್‌ ಪ್ರೀಮಿಯಂ ಪಾವತಿ, ಆಸ್ಪತ್ರೆಯ ಒಳರೋಗಿ ಹಾಗೂ ಶಸ್ತ್ರಚಿಕಿತ್ಸಾ ವೆತ್ಛ ಭರಿಸುವಲ್ಲಿ ಉತ್ತಮ ಸೌಲಭ್ಯಗಳು ಇತ್ಯಾದಿ ವಿಶೇಷತೆಗಳು ಇದರಲ್ಲಿವೆ ಎಂದು ಎಲ್‌ಐಸಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next