ನವ ದೆಹಲಿ : ಎಲ್ ಐ ಸಿ ಡಿಜಿಟಲ್ ಪೆಮೆಂಟ್ ಗೇಟ್ ವೇ ಗಾಗಿ ಹರಾಜು ನಡೆದಿತ್ತು. ಈ ಹರಾಜು ಪೆಟಿಎಂ ಪಾಲಾಗಿದೆ. ಪೇಟಿಎಂ ಮಲ್ಟಿಪಲ್ ಪೇ ಮೆಂಟ್ ಸರ್ವಿಸಸ್ ನ ಹಲವು ವಿಶೇಷತೆಗಳ ಕಾರಣದಿಂದ ಈ ಹರಾಜಿನಲ್ಲಿ ಪೇಟಿಎಂ ಗೆ ಜಯ ದೊರಕಿದೆ ಎಂದು ವರದಿ ತಿಳಿಸಿದೆ.
ಇನ್ನು, ಕೋವಿಡ್ ಸಂದರ್ಭದಲ್ಲಿ ಎಲ್ ಐ ಸಿ ಡಿಜಿಟಲ್ ವ್ಯವಹಾರದಲ್ಲಿ ದೊಡ್ಡ್ ಪ್ರಮಾಣದಲ್ಲಿ ಏರಿಕೆ ದಾಖಲಾಗಿತ್ತು. ಸುಮಾರು 60000 ಕೋಟಿ ಪ್ರೀಮಿಯಂ ಡಿಜಿಟಲ್ ಮೋಡ್ ನಲ್ಲಿಯೇ ನಡೆದಿತ್ತು. ಇದರಲ್ಲಿ ಬ್ಯಾಂಕ್ ಪೇಮೆಂಟ್ ವ್ಯವಹಾರ ಸೇರಿಲ್ಲ ಅನ್ನೋದು ಕೂಡಾ ವಿಶೇಷ.
ಓದಿ : ರಾಜ್ಯಪಾಲರ ಸಭೆ ಬಳಿಕ ಖಂಡಿತ ರಾಜ್ಯದಲ್ಲಿ ಕಠಿಣ ರೂಲ್ಸ್ ಜಾರಿ : ಆರ್. ಅಶೋಕ್
ಈ ಡಿಜಿಟಲ್ ಪೇಮೆಂಟ್ ವ್ಯವಹಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿಯೇ ಪೇಟಿಎಂ ಮತ್ತು ಎಲ್ಐಸಿ ನಡುವೆ ಒಪ್ಪಂದ ಮಾಡಿಕೊಂಡಿವೆ ಎಂದು ವರದಿ ತಿಳಿಸಿದೆ.
ಪ್ರೀಮಿಯಂ ಪೇಮೆಂಟ್ ಅಷ್ಟೇ ಅಲ್ಲ, ಎಲ್ಲಾ ರೀತಿಯ ಕಲೆಕ್ಷನ್ ಗಳನ್ನು ಡಿಜಿಟಲ್ ಮೋಡ್ ನಲ್ಲಿಯೇ ಸಂಗ್ರಹಿಸಲು ಎಲ್ಐಸಿ ನಿರ್ಧರಿಸಿದ್ದು, ಪೇಟಿಎಂಗೆ ಹೋಗಿ ಎಲ್ ಐ ಸಿ ಸರ್ಚ್ ಮಾಡಿ. ಅಲ್ಲಿ ನೀವು ನಿಮ್ಮ ಪಾಲಿಸಿ ನಂಬರ್ ನಮೂದಿಸಬೇಕು. ಪಾಲಿಸಿ ನಂಬರ್ ಹಾಕಿದ ತಕ್ಷಣ ನಿಮ್ಮ ಪ್ರಿಮಿಯಂ ಕಾಣಿಸುತ್ತದೆ. ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ನಿಮ್ಮ ಪ್ರೀಮಿಯಂ ಪೇ ಆಗುತ್ತದೆ.
ಓದಿ : ರಸ್ತೆಯಲ್ಲಿ ಹೋಗೋ ಕುಡುಕ ಮಾತನಾಡುವ ಹಾಗೇ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಈಶ್ವರಪ್ಪ