Advertisement

ಕ್ಯಾನ್ಸರ್‌ ರೋಗಿಗಳಿಗೂ ಎಲ್‌ಐಸಿ ಪಾಲಿಸಿ

03:09 PM Nov 23, 2017 | Team Udayavani |

ಕಾರವಾರ: ಕೇಂದ್ರ ಸರಕಾರ ಸಾಮಾಜಿಕ ಕಲ್ಯಾಣದ ಸದುದ್ದೇಶದಿಂದ ಕ್ಯಾನ್ಸರ್‌ ರೋಗಿಗಳಿಗೂ ಪಾಲಸಿ ನೀಡುವ ಯೋಜನೆ ಜಾರಿಗೆ ತಂದಿದೆ. ಜೀವನ್‌ ಅಕ್ಷಯ್‌ ಪಾಲಸಿಯಿಂದ ಬಡವರಿಗೆ ಅನುಕೂಲವಾಗಲಿದೆ. ಇಂತಹ ಪಾಲಸಿಗಳನ್ನು ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಲುಪಿಸಬೇಕಾದ ಜವಾಬ್ದಾರಿ ಎಲ್‌ಐಸಿ ಪ್ರತಿನಿಧಿಗಳ ಮೇಲಿದೆ ಎಂದು ಎಲ್‌ಐಸಿ ಕಾರವಾರ ಶಾಖಾ ಪ್ರಬಂಧಕಿ
ರುಕ್ಮಿಣಿ ಹೇಳಿದರು.

Advertisement

ಅವರು ಇಲ್ಲಿನ ಮುರಳೀಧರ್‌ ಮಠದ ಸಭಾಂಗಣದಲ್ಲಿ ಎಲ್‌ಐಸಿ ಪ್ರತಿನಿಧಿಗಳ ಸಂಘ(ಲೀಯಾಫ್‌)ದ ವಾರ್ಷಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಳೆದ 60 ವರ್ಷಗಳಿಂದ ಎಲ್‌ಐಸಿ ಸಾರ್ವಜನಿಕರಿಗೆ ಅತ್ತುತ್ತಮ ಸೇವೆ ನೀಡುವುದರ ಮೂಲಕ
ಮುಂಚೂಣಿಯಲ್ಲಿದೆ. ಕಳೆದ 17 ವರ್ಷಗಳಿಂದ ಒಳ್ಳೆಯ ಪಾಲಸಿ ನೀಡುವುದರ ಮುಖಾಂತರ ಶೇ.78 ರಷ್ಟು ವಿಮಾ ಕ್ಷೇತ್ರದ ಮಾರುಕಟ್ಟೆಯಲ್ಲಿ ತನ್ನ ಹಿಡಿತ ಸಾಧಿಸಿದೆ. ಸ್ಥಳೀಯ ಶಾಖೆಯಲ್ಲಿ 304 ಪ್ರತಿನಿಧಿಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್‌ಐಸಿಯ ಜನಪ್ರಿಯ ಪಾಲಸಿಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಭರವಸೆ ಕಳೆದುಕೊಂಡ ಕುಟುಂಬಗಳಿಗೆ ಆರ್ಥಿಕ ಭದ್ರತೆಯ ಆಶಾ ಕಿರಣವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ನಿಧಿಗಳ ಮೇಲಿದೆ. ಇನ್ನಷ್ಟು
ಪರಿಶ್ರಮದಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಿದರೆ, ಸಿಎಂ, ಡಿಎಂ, ಝಡ್‌ಎಂ ಕ್ಲಬ್‌ಗಳ ಸದಸ್ಯರಾಗಿ ಅತ್ಯುತ್ತಮ
ಸೌಲಭ್ಯದ ಜೊತೆಗೆ ಕೈ ತುಂಬ ಆದಾಯಗಳಿಸಲು ಪ್ರತಿನಿಧಿಗಳಿಗೆ ಇಲ್ಲಿ ಸಾಕಷ್ಟು ಅವಕಾಶ ಇದೆ. ಇದರ ಜತೆಗೆ ಇಂತಹ
ಸಂಘದೊಂದಿಗೆ ಕೈ ಜೋಡಿಸಿದರೆ, ವೈಯಕ್ತಿಕ ಅಥವಾ ಪಾಲಸಿದಾರರ ಸಮಸ್ಯೆ ಪರಿಹರಿಸಿಕೊಂಡು ಸಾಮಾಜಿಕವಾಗಿ
ಗುರುತಿಸಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಪ್ರತಿನಿಧಿಗಳು ಎಲ್‌ಐಸಿ ಹಾಗೂ ಲೀಯಾಫ್‌ ಜತೆಗೆ ಉತ್ತಮ ಸಂಬಂಧ
ಇಟ್ಟುಕೊಂಡು ಉತ್ತಮ ಬಾಂಧವ್ಯದೊಂದಿಗೆ ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಲೀಯಾಫ್‌ನ ಧಾರವಾಡ ವಿಭಾಗದ ಅಧ್ಯಕ್ಷ ಸುಭಾಸ್‌ಚಂದ್ರ ಶೆಟ್ಟಿ ಮಾತನಾಡಿ, ಎಲ್‌ಐಸಿ ಪ್ರತಿನಿಧಿಗಳು ಸಂಸ್ಥೆಯಲ್ಲಿ ತಮ್ಮ ಅಸ್ತಿತ್ವ ಕಳೆದುಕೊಳ್ಳದಂತೆ, ಲೀಯಾಫ್‌ ಕಳೆದ 53 ವರ್ಷಗಳಿಂದ ಹೋರಾಡುತ್ತಲೇ ಬಂದಿದೆ. ಪ್ರತಿನಿಧಿಗಳಿಗೆ ಅನ್ಯಾಯವಾಗದಂತೆ, ಅವರಿಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಎಲ್‌ಐಸಿಯ ಆಡಳಿತ ಮಂಡಳಿಯೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡಿದೆ. ಆದ್ದರಿಂದ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಲೀಯಾಫ್‌ನ ಸದಸ್ಯರಾಗಿ, ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು. ಲೀಯಾಫ್‌ನ ಧಾರವಾಡ ವಿಭಾಗದ ಕಾರ್ಯದರ್ಶಿ ಎನ್‌.ಬಿ. ಹಿರೇಮs… ಪ್ರಾಸ್ತಾವಿಕ ಮಾತನಾಡಿದರು.

ಬಳಿಕ ಲೀಯಾಫ್‌ನ ಕಾರವಾರ ಘಟಕದ ನೂತನ ಪದಾ ಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಇನ್ನಾಸ್‌ ಫರ್ನಾಂಡೀಸ್‌, ಗೌರವ ಅಧ್ಯಕ್ಷರಾಗಿ ನಂದಾ ಗುನಗಿ, ಉಪಾಧ್ಯಕ್ಷರಾಗಿ ಮಾಧವ್‌ ನಾಯ್ಕ, ಮಂಜುನಾಥ್‌ ಪೆಡೆ°àಕರ, ಸಹಕಾರ್ಯದರ್ಶಿಯಾಗಿ ಸಂಗೀತಾ ಸಾತ್ರೇಕರ, ಖಜಾಂಚಿಯಾಗಿ ಶಾನಭಾಗ್‌ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಕೆ.ಟಿ. ಬೂತೆ, ಕಾರ್ಯದರ್ಶಿ ಸಂಜಯ ಬೋರ್ಕರ್‌ ಮುಂತಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next