Advertisement

ಎಲ್ ಐ ಸಿ ಯ ‘ಆಧಾರ್ ಶಿಲಾ’ ಉಳಿತಾಯ ಯೋಜನೆಯ ಬಗ್ಗೆ ನಿಮಗೆಷ್ಟು ಮಾಹಿತಿ ಇದೆ..?

02:47 PM Jul 12, 2021 | Team Udayavani |

ನವ ದೆಹಲಿ : ನಿರಂತರವಾಗಿ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ನೀಡುತ್ತಾ ಬಂದಿರುವ ಎಲ್ ಐ ಸಿ ಮತ್ತೊಂದು ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಹೂಡಿಕೆ ಮಾಡಿದ ಹಣವು ಅತಿ ಹೆಚ್ಚು ಬಡ್ಡಿ ಹಾಗೂ ಭದ್ರತೆಯನ್ನು ಒದಗಿಸುತ್ತದೆ.

Advertisement

ಭಾರತೀಯ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಹೊಂದಿರುವ ಯೋಜನೆಯೊಂದನ್ನು ಎಲ್‌ ಐ ಸಿ ರೂಪಿಸಿದ್ದು, ಈ ಯೋಜನೆಯ ಮುಖಾಂತರವಾಗಿ ತ್ವರಿತವಾಗಿ ಹಣವನ್ನು ಬೆಳೆಸುವ ಅವಕಾಶವನ್ನು ಮಹಿಳೆಯರಿಗೆ ನೀಡುತ್ತಿದೆ.

ಇದನ್ನೂ ಓದಿ : ಎರಡು ಮಕ್ಕಳ ಜನಸಂಖ್ಯಾ ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ : ಈಶ್ವರಪ್ಪ

8 ರಿಂದ 55 ವರ್ಷದೊಳಗಿನ ಮಹಿಳೆಯರು ಎಲ್ ಐ ಸಿ ಯ ‘ಆಧಾರ್ ಶಿಲಾ’ ಎಂಬ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಸಣ್ಣ ಮೊತ್ತದ ಹೂಡಿಕೆ ಅಂದರೆ ದಿನವೊಂದಕ್ಕೆ ಕೇವಲ 29 ರೂಪಾಯಿಯನ್ನು ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬಂದರ, ಯೋಜನೆ ಮುಕ್ತಾಯ ಹಂತದಲ್ಲಿ ಬರೋಬ್ಬರಿ 4 ಲಕ್ಷ ಕ್ಕೂ ಹೆಚ್ಚು ಒಟ್ಟು ಮೊತ್ತ ನಿಮ್ಮ ಪಾಲಾಗುತ್ತದೆ.

ಹೂಡಿಕೆದಾರರು ಯೋಜನೆಯ ಮುಕ್ತಾಯಕ್ಕಿಂತ ಮುಂಚೆಯೇ ಮರಣ ಹೊಂದಿದ್ದಲ್ಲಿ, ಎಲ್‌ ಐ ಸಿ ಮೃತನ ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತದೆ. ಹೂಡಿಕೆಯ ಮೇಲೆ ಖಚಿತ ಆದಾಯದ ಜೊತೆಗೆ ಎಲ್‌ ಐ ಸಿ ಯು ಈ ಯೋಜನೆಯಲ್ಲಿ ರಕ್ಷಣೆ ವ್ಯಾಪ್ತಿಯನ್ನು ಒದಗಿಸುತ್ತಿದೆ.  ಎಲ್‌ ಐ ಸಿ ಯ ‘ಆಧಾರ್ ಶಿಲಾ’ ಯೋಜನೆಯಲ್ಲಿ ಹೂಡಿಕೆದಾರರಿಗೆ ಕನಿಷ್ಠ 75 ಸಾವಿರ ಹಾಗೂ ಗರಿಷ್ಠ 3 ಲಕ್ಷದವರೆಗೆ ಖಚಿತ ಮೊತ್ತದ ಭರವಸೆ ದೊರಕಲಿದೆ.

Advertisement

4 ಲಕ್ಷ ರೂ. ಮೆಚುರಿಟಿ ಮೊತ್ತವನ್ನು ಪಡೆದುಕೊಳ್ಳಲು ಮಹಿಳೆಯರು ವರ್ಷಕ್ಕೆ ಶೇಕಡಾ. 4.5 ರಷ್ಟು ತೆರಿಗೆ ಸಹಿತ 10,959 ರೂ.ಗಳನ್ನು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಆಗ ನಿಮ್ಮ ಪ್ರತಿದಿನದ ಉಳಿತಾಯದ ಮೊತ್ತ 29 ರೂ. ಆಗಲಿದೆ.

ಇನ್ನು, ಎಲ್ ಐ ಸಿ ನೀಡುತ್ತಿರುವ ಈ ಉತ್ತಮ ಯೋಜನೆಯಲ್ಲಿ ಯೋಜನೆಯಲ್ಲಿ ಹೂಡಿಕೆ ಮಾಡಲು ಮಹಿಳೆಯರು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ರೀಮಿಯಂಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆ ದಿನವೊಂದಕ್ಕೆ 29 ರೂ. ಉಳಿಸಿ ‘ಆಧಾರ್ ಶಿಲಾ’ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.

ಇದನ್ನೂ ಓದಿ : ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹೇಳುವುದು ನ್ಯಾಯವಲ್ಲ: ಅರ್ಲೇಕರ್

Advertisement

Udayavani is now on Telegram. Click here to join our channel and stay updated with the latest news.

Next