Advertisement

Library ವ್ಯವಸ್ಥೆ ಆಧುನೀಕರಣಗೊಳ್ಳಲಿ

12:48 AM Nov 06, 2023 | Team Udayavani |

ಕನ್ನಡದ ಎಲ್ಲ ಪ್ರಕಾಶಕರು ಗ್ರಂಥಾಲಯಕೊಳ್ಳುವ ಸಗಟು ಖರೀದಿ ಯನ್ನು ನಂಬಿಕೊಂಡು ಪುಸ್ತಕ ಪ್ರಕಟನೆ ಮಾಡುತ್ತಾರೆ. ಓದು ಗರನ್ನೇ ನಂಬಿಕೊಂಡು ಪ್ರಕಟಿಸುವ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದಿಲ್ಲ. ಆದರೆ ಸರಕಾರ ಗಳು ಈ ಖರೀದಿ ಪ್ರಕ್ರಿಯೆಯನ್ನು ನಾಲ್ಕು ವರ್ಷಗ ಳಿಂದ ನಿಲ್ಲಿಸಿಬಿಟ್ಟಿವೆ. ಅದಕ್ಕೆ ಬೇಕಾದ ಹಣವನ್ನು ಸೆಸ್‌ ಮೂಲಕ ಪ್ರಜೆಗಳಿಂದ ಸ್ವೀಕರಿಸುವ ಕ್ರಮ ಜಾರಿಯಲ್ಲಿದ್ದರೂ, ಪುಸ್ತಕಗಳಿಗೆ ಅದನ್ನು ವಿನಿಯೋಗಿಸುವುದಕ್ಕೆ ಯಾವ ಸರಕಾರಕ್ಕೂ ಆಸಕ್ತಿಯಿಲ್ಲದಂತಹ ಅನಕ್ಷರಸ್ಥ ಪರಿಸ್ಥಿತಿ ಕರ್ನಾಟಕದಲ್ಲಿದೆ. ಇದು ಪ್ರಕಾಶಕರನ್ನು ಸಾಕಷ್ಟು ತೊಂದರೆಗೆ ತಳ್ಳಿದೆ. ಅವರು ಹೊಸ ಪ್ರಕಟನೆಗಳಿಗೆ ಹಿಂಜರಿಯುತ್ತಿದ್ದಾರೆ. ಇದರೊಡನೆ ಗ್ರಂಥಾಲಯವನ್ನು ನಂಬಿಕೊಂಡು ಓದುವ ಬಹುದೊಡ್ಡ ಓದುಗ ವರ್ಗ ಕನ್ನಡದಲ್ಲಿದೆ. ಅವರಿಗೂ ಕಾಲಕ್ಕೆ ತಕ್ಕಂತೆ ಪುಸ್ತಕಗಳು ಸಿಗುತ್ತಿಲ್ಲ. ಇಡೀ ಗ್ರಂಥಾಲಯ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಆಧುನಿಕಗೊಳಿಸುವ, ಸದ್ಯಕ್ಕೆ ತೆರೆದುಕೊಳ್ಳುವ ಕ್ರಿಯೆ ನಡೆಯಬೇಕಿದೆ. ಸರಕಾರಗಳು ಮತ್ತು ಗ್ರಂಥಾಲಯ ಇಲಾಖೆ ಸಗಟು ಖರೀದಿಯನ್ನು ವಿಳಂಬ ಮಾಡುತ್ತಲೇ ಹೋದರೆ, ಕನ್ನಡ ಪ್ರಕಟನೆಗಳು ಬಹುತೇಕ ನಿಲ್ಲುತ್ತವೆ.

Advertisement

ಕನ್ನಡ ಸಾಹಿತ್ಯವು ಗಡಿಯನ್ನು ದಾಟಿ ಹೊರ ಜಗತ್ತಿಗೆ ತೆರೆದುಕೊಳ್ಳುವ ಆವಶ್ಯಕತೆ ಇದೆ. ಈ ಪ್ರಕ್ರಿಯೆ ಸಾಹಿತ್ಯದ ಕೊಡುಕೊಳ್ಳುವಿಕೆಯ ಮೂಲಕ, ಸಾಹಿತಿಗಳ ಒಡನಾಟದ ಮೂಲಕ ಸಾಧ್ಯವಾಗಬೇಕಿದೆ. ಕರ್ನಾಟಕವು ಇಡೀ ದೇಶಕ್ಕೇ ಮಾದರಿಯಾಗುವಂತೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮತ್ತು ಸಮ್ಮೇಳನಗಳನ್ನು ಭಾಷಾ ತೀತವಾಗಿ ನಡೆಸುವ ಜರೂರತ್ತಿದೆ. ಇದು ಕೇವಲ ಕನ್ನಡಕ್ಕೆ ಮಾತ್ರ ಸೀಮಿತವಾಗಿರದೆ, ಹೊರ ರಾಜ್ಯಗಳ ಲೇಖಕರನ್ನು ಗುರುತಿಸುವ, ಅವರನ್ನು ಪ್ರೋತ್ಸಾಹಿಸುವ ಕೆಲಸ ಆದರ್ಶ ರೀತಿಯಲ್ಲಿ ನಡೆಯಬೇಕು. ಆಗ ಇಡೀ ದೇಶ ಕರ್ನಾಟಕದ ಕಡೆಗೆ ಆಸಕ್ತಿಯಿಂದ ನೋಡುವ ಸನ್ನಿವೇಶ ಸೃಷ್ಟಿ ಯಾಗುತ್ತದೆ. ಉದಾಹರಣೆ ಪ್ರತೀ ವರ್ಷ ದೇಶದಲ್ಲಿ ರಚಿತವಾದ ಅತ್ಯುತ್ತಮ ಕಾದಂಬರಿಗೆ ಬಹುದೊಡ್ಡ ಮೊತ್ತದ ಬಹುಮಾನವನ್ನು ಕರ್ನಾಟಕ ಸರಕಾರ ಸ್ಥಾಪಿಸುತ್ತದೆ ಎಂದುಕೊಳ್ಳೋಣ. ಆದರೆ ಕಡ್ಡಾಯವಾಗಿ ಈ ಕಾದಂಬರಿ ಕನ್ನಡಕ್ಕೆ ಅನುವಾದಗೊಂಡು ಆ ವರ್ಷ ಪ್ರಕಟವಾಗಿರಬೇಕು ಎಂಬ ನಿಯಮ ಹಾಕೋಣ. ಆಗ ತಾನೇ ತಾನಾಗಿ ಇಡೀ ದೇಶದ ಸಾಹಿತ್ಯಲೋಕ ಈ ಸ್ಪರ್ಧೆಯೆಡೆಗೆ ಗಮನಿಸಲು ತೊಡಗುತ್ತದೆ. ದೇಶದ ಬೇರೆ ಬೇರೆ ಭಾಷೆಗಳನ್ನು ಅನುವಾದಿಸಬಲ್ಲ ಹೊಸ ಅನುವಾದಕರು ಸೃಷ್ಟಿ ಯಾಗುತ್ತಾರೆ. ಪ್ರಕಾಶಕರಿಗೂ ಹೊರ ರಾಜ್ಯದ ಸಾಹಿತಿಗಳ ಅತ್ಯುತ್ತಮ ಪುಸ್ತಕಗಳನ್ನು ಪ್ರಕಟಿಸುವ ಅವಕಾಶ ದಕ್ಕುತ್ತದೆ.

ಇದೇ ರೀತಿಯಲ್ಲಿ ಕನ್ನಡದ ಮುಖ್ಯ ಕೃತಿಗಳನ್ನು ದೇಶದ ಇತರ ಪ್ರಮುಖ ಭಾಷೆಗಳಿಗೆ ಒಯ್ಯುವ ಕೆಲಸ ಶ್ರದ್ಧೆಯಿಂದ ನಡೆಯಬೇಕು. ಅದನ್ನು ನಮ್ಮ ಜಡ್ಡು ಹಿಡಿದ ಅಕಾಡೆಮಿಗೆ ಒಪ್ಪಿಸಿ ದರೆ ಗುಣಮಟ್ಟದ ಕೆಲಸ ನಡೆಯುವುದಿಲ್ಲ. ಅದರ ಬದಲು ಅನ್ಯ ಭಾಷೆಗಳ ಪ್ರತಿಷ್ಠಿತ ಪ್ರಕಾಶ ಕರನ್ನು ಗುರುತಿಸಿ (ದ್ರಾವಿಡ ಭಾಷೆಗಳು, ಹಿಂದಿ, ಇಂಗ್ಲಿಷ್‌, ಮರಾಠಿ, ಬಂಗಾಲಿ ಇತ್ಯಾದಿ) ಅವ ರಿಗೆ ಜವಾಬ್ದಾರಿಯನ್ನು ಒಪ್ಪಿಸಬೇಕು. ಇದು ಕನ್ನಡದ ಸಾಹಿತ್ಯ ಪ್ರಚಾರಕ್ಕೆ ಅನುಕೂಲ ವಾಗುತ್ತದೆ. ನೆರೆಯ ತಮಿಳುನಾಡಿನಲ್ಲಿ ಈ ಪ್ರಕ್ರಿಯೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಅಲ್ಲಿನ ಮುಖ್ಯಮಂತ್ರಿಗಳೇ ಮುಂದೆ ನಿಂತು ಈ ಕೆಲಸ ಮಾಡುತ್ತಿದ್ದಾರೆ. ಅದು ನಮಗೆ ಮಾದರಿಯಾಗಬೇಕು.

ವಸುಧೇಂದ್ರ

Advertisement

Udayavani is now on Telegram. Click here to join our channel and stay updated with the latest news.

Next