Advertisement

ಲೆಟರ್‌ಹೆಡ್‌ಗಷ್ಟೇ ಪದವಿ ಸೀಮಿತ ಬೇಡ

01:27 PM Mar 08, 2017 | Team Udayavani |

ಧಾರವಾಡ: ನಮ್ಮ ಪದವಿಗಳು ಕೇವಲ ವಿಸಿಟಿಂಗ್‌ ಕಾರ್ಡ್‌ ಮತ್ತು ಲೇಟರ್‌ ಹೆಡ್‌ಗಳಿಗೆ ಸಿಮೀತವಾಗದೇ ಅವು ನಮ್ಮ ವ್ಯಕ್ತಿತ್ವವನ್ನು ಬಿಂಬಿಸುವ ಸಾಧನೆಗಳಾಗಬೇಕು ಎಂದು ಬೆಂಗಳೂರಿನ ಭಾರತಿ ಇನ್‌ಸೈಟ್‌ನ ತರಬೇತುದಾರ ಕ್ಯಾಪ್ಟನ್‌ ಸಿ.ಎಸ್‌. ಆನಂದ ಅಭಿಪ್ರಾಯಪಟ್ಟರು.

Advertisement

ಕರ್ನಾಟಕ ಕಲಾ ಮಹಾವಿದ್ಯಾಲಯದಲ್ಲಿ ಕಾಲೇಜಿನ ಕೆರಿಯರ್‌ ಆ್ಯಂಡ್‌ ಡೆವಲೆಪಮೆಂಟ್‌ ಘಟಕವು ಆಯೋಜಿಸಿದ್ದ “ಕೆರಿಯರ್‌ ಡೆವಲೆಪಮೆಂಟ್‌’ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಇಂದು ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯತ್ತಿನ ಕನಸುಗಳನ್ನು ಯಾವ ರೀತಿಯಾಗಿ ಈಡೇರಿಸಿಕೊಳ್ಳಬೇಕುಎಂಬುವದರ ಕುರಿತು ಗೊಂದಲದಲ್ಲಿದ್ದಾರೆ.

ಆದ್ದರಿಂದ ಸೂಕ್ತ ಸಮಯದಲ್ಲಿ ಮುಂದಿನ ಭವಿಷ್ಯಗೋಸ್ಕರ ಜೀವನದಲ್ಲಿ ಏನನ್ನಾದರೂ ಸಾಧಿಧಿಸಲು ವಿದ್ಯಾರ್ಥಿಗಳಾದ ನೀವು ಸಮಯ ವ್ಯರ್ಥ ಮಾಡದೇ ನಿರ್ದಿಷ್ಟ ಗುರಿ ಮತ್ತು ಉದ್ದೇಶದೊಂದಿಗೆ ಮುಂದೆ ಸಾಗಬೇಕು ಎಂದರು. ಪ್ರಾಚಾರ್ಯ ಡಾ| ಎಸ್‌.ಎಸ್‌.ಕಟ್ಟಿಮನಿ ಮಾತನಾಡಿ,

ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯತ್ತಿನ ದೃಷ್ಟಿಕೋನದಿಂದ ಇಂತಹ ಕಾರ್ಯಗಾರಗಳು ವಿದ್ಯಾರ್ಥಿಗಳ ಸವೊತೋಮುಖ ಬೆಳವಣಿಗೆಗೆ ಬಹಳ ಮುಖ್ಯ ಎಂದರು. ಕೆರಿಯರ್‌ ಡೆವಲೆಪಮೆಂಟ್‌ಘಟಕದ ಸಂಯೋಜಕಿ ಡಾ| ಆರ್‌. ಎನ್‌. ಕೆಂಚಪ್ಪನವರ ಮಾತನಾಡಿದರು. ಡಾ| ಸುಕನ್ಯಾ ಜಾಲಿಹಾಳ, ಡಾ| ಸೌಭಾಗ್ಯ ಮತ್ತು ಡಾ| ಅಶೋಕ ಇದ್ದರು. ಡಾ| ಎಂ.ಬಿ.ದಳಪತಿ ನಿರೂಪಿಸಿ, ವಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next