Advertisement

ಇಂದು ಎಚ್‌.ಡಿ.ಕೋಟೆಯಲ್ಲಿ ಅಕ್ಷರ ಜಾತ್ರೆ

04:55 PM Dec 07, 2018 | |

ಎಚ್‌.ಡಿ.ಕೋಟೆ: ನಾಡು, ನುಡಿ, ಸಂಸ್ಕೃತಿಯ ಪ್ರತೀಕ ಎಂಬಂತಿರುವ ಗಡಿ ನಾಡು ವನಸಿರಿ ನಾಡು ಖ್ಯಾತಿಯ ಎಚ್‌.ಡಿ.ಕೋಟೆಯಲ್ಲಿ 4ನೇ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭ ವಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

Advertisement

ಶುಕ್ರವಾರ ಹಾಗೂ ಶನಿವಾರ ನಡೆಯಲಿರುವ ಕಾರ್ಯಕ್ರಮದ ಸಿದ್ಧತೆಗಳು ಭರ ದಿಂದ ನಡೆದಿದ್ದು, ಈಗಾಗಲೇ ಪಟ್ಟಣದ ಮುಖ್ಯರಸ್ತೆಗಳು ಸೇರಿದಂತೆ ಹಲವು ಕಡೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದ್ದು, ಕಾರ್ಯಕ್ರಮ ನಡೆಯುವ ಅಂಬೇಡ್ಕರ್‌ ಭವನದ ಆವರಣದಲ್ಲಿ ಬೃಹತ್‌ಗಾತ್ರದ ಶಾಮಿಯಾನ ಹಾಕಲಾಗಿದೆ. ಮೆರವಣಿಗೆ ಹೊರಡುವ ಮುಖ್ಯ ರಸ್ತೆಗಳನ್ನು ಮಾವಿನ ತೋರಣ ಗಳಿಂದ ಶೃಂಗರಿಸಿದ್ದು, ಕಣ್ಮನ ಸೆಳೆಯುತ್ತಿದೆ.

ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದಲ್ಲಿ ಕವಿಗೋಷ್ಠಿ, ವಿಚಾರ ಗೋಷ್ಠಿ, ರೈತಗೋಷ್ಠಿ, ದಲಿತ ಚಿಂತನೆ ಇನ್ನಿತರ ಗೋಷ್ಠಿಗಳು ಜರುಗಲಿದ್ದು, ಸಾಹಿತಿ, ಸೃಜನಶೀಲ ಬರಹಗಾರ, ಪಕ್ಷಿತಜ್ಞ, ಸಾವಯವ ಕೃಷಿಕರು ಆದ ತಾಲೂಕಿನ ಬೀಚನಹಳ್ಳಿ ಕ್ಷೀರಸಾಗರ್‌ ಸಮ್ಮೇಳನಾಧ್ಯಕ್ಷರಾಗಿದ್ದಾರೆ. 

ಧ್ವಜಾರೋಹಣ: ಸಮ್ಮೇಳನ ನಡೆಯುವ ಅಂಬೇಡ್ಕರ್‌ ಭವನದ ಆವರಣದಲ್ಲಿ ಶಾಸಕ ಅನಿಲ್‌ ಚಿಕ್ಕಮಾದು ರಾಷ್ಟ್ರಧ್ವಜ ವನ್ನು, ತಹಶೀಲ್ದಾರ್‌ ಆರ್‌.ಮಂಜುನಾಥ್‌ ನಾಡ ಧ್ವಜವನ್ನು, ಕಸಾಪ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ ಪರಿಷತ್‌ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಸಮ್ಮೇಳನಾಧ್ಯಕ್ಷರ ಮೆರವಣಿಗೆ: ಮೆರವಣಿ ಗೆಗೆ ತಾಪಂ ಅಧ್ಯಕ್ಷೆ ಮಂಜುಳಾ ಚಾಲನೆ ನೀಡಲಿದ್ದು, ಪೂರ್ಣಕುಂಭ ಹಾಗೂ ಜಾನಪದ ಕಲಾತಂಡಗಳೊಂದಿಗೆ ಸಭಾಂಗಣದವರೆಗೆ ಮೆರವಣಿಗೆ ನಡೆಯ ಲಿದೆ. ನಾಡು, ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು, ವೀರ ಗಾಸೆ, ಕಂಸಾಳೆ, ವೀರಭದ್ರ ಕುಣಿತ, ನಗಾರಿ, ಡೊಳ್ಳುಕುಣಿತ ಹಾಗೂ ತಾಲೂ ಕಿನ ವಿವಿಧ ಶಾಲಾಮಕ್ಕಳು ಬ್ಯಾಂಡ್‌ಗಳು ಮುಂತಾದ ಕಲಾತಂಡಗಳು ಭಾಗವಹಿಸಲಿವೆ.
 
ಉದ್ಘಾಟನಾ ಸಮಾರಂಭ: ಶುಕ್ರವಾರ ಬೆಳಗ್ಗೆ 11ಕ್ಕೆ ಸ್ವಾಗತ ನೃತ್ಯ, ನಾಡಗೀತೆ, ರೈತಗೀತೆ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದೆ. ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್‌ ಉದ್ಘಾಟಿಸಲಿದ್ದು, ಶಾಸಕ ಅನಿಲ್‌ ಚಿಕ್ಕಮಾದು ಸ್ವಾಗತಿಸ ಲಿರುವ ಕಾರ್ಯ ಕ್ರಮದಲ್ಲಿ ಹಿರಿಯ ವಿದ್ವಾಂಸ ಪ್ರೋ. ಮಲೆಯೂರು ಗುರು ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಡಾ. ವೈ.ಡಿ.ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಳಿದ್ದು, ಸಂಸದ ಆರ್‌. ಧ್ರುವನಾರಾಯಣ್‌, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್‌ ಮತ್ತಿತರರ ಗಣ್ಯರು ಉಪಸ್ಥಿತರಿರುವ ಸಮಾರಂಭದಲ್ಲಿ ಸಾಹಿತಿ ಕ್ಷೀರಸಾಗರ್‌ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. 

Advertisement

ಕವಿಗೋಷ್ಠಿ: ಮಧ್ಯಾಹ್ನ 4.30ಕ್ಕೆ ಕವಿಗೋಷ್ಠಿ, ವಿಶೇಷ ಗೋಷ್ಠಿ ನೇರವೆರಲಿದ್ದು, ಡಿ.8ರ ಎರಡನೇ ದಿನವೂ ಗೋಷ್ಠಿಗಳು ನಡೆಯಲಿದ್ದು, ಸಂಜೆ 5ಗಂಟೆಗೆ ನಡೆವ ಸಮಾರೋಪದಲ್ಲಿ ಶಾಸಕ ಅನಿಲ್‌ ಅಧ್ಯಕ್ಷತೆ ವಹಿಸಲಿದ್ದು, ಕವಿ ಡಾ. ಟಿ.ಸಿ. ಪೂರ್ಣಿಮಾ ಸಮಾರೋಪ ಭಾಷಣ ಮಾಡಲಿದ್ದಾರೆ.
ವಿಚಾರಗೋಷ್ಠಿ: ಮಧ್ಯಾಹ್ನ 3ಕ್ಕೆ “ಹೆಗ್ಗಡ ದೇವನಕೋಟೆ ತಾಲೂಕು ದರ್ಶನ’ ಕುರಿತು ವಿಚಾರಗೋಷ್ಠಿ ಏರ್ಪಡಿಸ ಲಾಗಿದ್ದು, ಗೋಷ್ಠಿಯನ್ನು ಮೈಸೂರು ಸಾರ್ವಜನಿಕ ಗ್ರಂಥಾಲಯ ಉಪ ನಿರ್ದೇಶಕ ಡಾ. ಬಿ. ಮಂಜುನಾಥ್‌ ಉದ್ಘಾಟಿಸಲಿದ್ದು, ಉಪನ್ಯಾಸಕ ಎಂ.ಎನ್‌. ರವಿಶಂಕರ್‌ ತಾಲೂಕು ಸಂಸ್ಕೃತಿ ಸೊಬಗು ಮತ್ತು ಶಾಸನಗಳು ಎಂಬ ವಿಚಾರ ಮಂಡನೆ ಮಾಡಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next