ನವಿಮುಂಬಯಿ: ಕರ್ನಾಟಕ ಸಂಘ ಖಾರ್‌ಘರ್ ಇದರ ಹತ್ತೂಂಬತ್ತನೇ ವಾರ್ಷಿಕೊತ್ಸವ ಸಂಭ್ರಮವು ಮಾ. 27ರಂದು ಖಾರ್ ಘರ್‌ನ ಆಯಿಮಾತಾ ಮಂದಿರದ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆ ಯಿಂದ ನಡೆಯಿತು.
ಪ್ರಾರಂಭದಲ್ಲಿ ಸಂಘದ ಮಹಿಳೆ ಯರಿಂದ ಲಲಿತಾ ಸಹಸ್ರನಾಮ ನೆರವೇರಿತು. ಬಳಿಕ ಸಂಘದ ಸದಸ್ಯರ ಮಕ್ಕಳಿಂದ ಹಾಗೂ ಮಹಿಳೆಯರಿಂದ ನೃತ್ಯ ವೈವಿಧ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಪನ್ವೆಲ್ ಶಾಸಕ ಪ್ರಶಾಂತ್ ಠಾಕೂರ್, ಪನ್ವೆಲ್ ನಗರ ಸೇವಕ ಸಂತೋಷ್ ಜಿ. ಶೆಟ್ಟಿ, ನವಿಮುಂಬಯಿ ಉದ್ಯಮಿ ಬೇಬಿರಾಜ್ ಕೋಟ್ಯಾನ್, ಸಮಾಜ ಸೇವಕ, ಉದ್ಯಮಿ ಸುಜೀತ್ (ಲಕ್ಷ್ಮೀಶ್) ಪೂಜಾರಿ, ಉದ್ಯಮಿ, ಸಮಾಜ ಸೇವಕ ರಾಜೇಶ್ ಗೌಡ ಉಪಸ್ಥಿತರಿದ್ದು ಸಂಘದ ಸಾಧನೆಗಳನ್ನು ವಿವರಿಸಿ ಶುಭ ಹಾರೈಸಿದರು. ಅತಿಥಿಗಳನ್ನು ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆ ನೀಡಿ ಗೌರವಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಯೋಗಿಂದ್ರರಾಮ್ ಕೊಟ್ಟಾರಿ ಮಾತನಾಡಿ, ಸಂಘಕ್ಕೆ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಿ ಖಾರ್ ಘರ್ ಕರ್ನಾಟಕ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ವನ್ನು ನಾವೆಲ್ಲರು ಒಗ್ಗಟ್ಟಿನಿಂದ ಮಾಡಬೇಕು ಎಂದರು.
ಸಭಾ ಕಾರ್ಯಕ್ರಮದ ಬಳಿಕ ಮಣಿಕಂಠ ಭಕ್ತವೃಂದದಿಂದ ಭಜನೆ, ಗಾಯಕ ಸುರೇಶ್ ಶೆಟ್ಟಿ ಇವರಿಂದ ಭಜನ ಸಂಧ್ಯಾ ಕಾರ್ಯಕ್ರಮ ಹಾಗೂ ಯಕ್ಷಗಾನ ಕಲಾವಿದ ಶೈಲೇಶ್ ಪುತ್ರನ್ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ ಮಹಿಷಾ ವಧೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.
ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದವರು ಸಮಾರಂಭದ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸದ ಸ್ಯರು, ಸ್ಥಳೀಯ ತುಳು-ಕನ್ನಡಿಗರು, ವಿವಿಧ ಸಂಘಟನೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.