Advertisement
ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಅಡಗಿರುತ್ತದೆ. ಶಿಕ್ಷಕರಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವ ಪ್ರಯತ್ನ ನಡೆಯಬೇಕು. ಶಿಕ್ಷಕರು ಮುತುವರ್ಜಿ ವಹಿಸಿ ಮಕ್ಕಳ ಅಭಿವೃದ್ಧಿಗೆ ಶ್ರಮಿಸಬೇಕು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹಾಕಲು ವೃತ್ತಿ ಕಲಿಕೋತ್ಸವ ಉತ್ತಮ ವೇದಿಕೆಯಾಗಿದೆ. ಇದರ ಸದುಪಯೋಗವನ್ನು ಎಲ್ಲ ಮಕ್ಕಳು ಪಡೆದುಕೊಳ್ಳಬೇಕು. ಮಕ್ಕಳ ಕೌಶಲ್ಯತೆಯನ್ನು ಬೆಳೆಸಿಕೊಳ್ಳಲು 5ನೇ ತರಗತಿಯಿಂದ ಕಾಲೇಜ್ ಹಂತದ ವರೆಗೂ ಕಲಿಕೋತ್ಸವ ನಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡುತ್ತೇನೆ ಎಂದರು. ತಾಪಂ ಅಧ್ಯಕ್ಷ ಕರಿಯಪ್ಪ ಉಂಡಿ, ವೃತ್ತಿ ಶಿಕ್ಷಣ ಶಿಕ್ಷಕ ಮಂಜಪ್ಪ ಆರ್. ಮಾತನಾಡಿದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಡಯಟ್ ನಿರ್ದೇಶಕ ಬಸವಲಿಂಗಪ್ಪ ಜಿ.ಎಂ., ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಶಿವಣ್ಣಸೇರಿದಂತೆ ವೃತ್ತಿ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕರು ಇದ್ದರು.
ಕೃಷಿ ಉಪಕರಣಗಳು, ಔಷಧ ಸಸ್ಯಗಳು, ಏತ ನೀರಾವರಿ, ಮನೆ ಬಳಕೆ ವಸ್ತುಗಳು, ಗುಡಿ ಕೈಗಾರಿಕೆಗಳು, ಮನೆಮದ್ದು, ತೋಟಗಾರಿಕೆ, ಪಶು ಸಂಗೋಪನೆ, ಆರೋಗ್ಯ, ಹೊಲಿಗೆಗೆ ಸಂಬಂಧಿಸಿದ ವಸ್ತುಗಳು, ಗುಡಿ ಕೈಗಾರಿಕೆಗಳ ವಸ್ತುಗಳು ಪ್ರದರ್ಶನದಲ್ಲಿ ಗಮನ ಸೆಳೆದರೆ, ಬಟ್ಟೆ ಸಾಬೂನು, ವ್ಯಾಸ್ಲೆನ್, ಪೇನಾºಮ್, ಬಟ್ಟೆ ಪೌಡರ್, ಅಲಂಕಾರಿಕ ಬಟ್ಟೆಗಳು, ಶಾಲು, ಹೊದಿಕೆ, ಅಂಗಿ, ಪ್ಯಾಂಟ್, ಟವೆಲ್, ಸೀರೆ, ಕುಪ್ಪಸ, ಗೋಶಾಲೆ, ನರ್ಸರಿ, ಎರೆಗೊಬ್ಬರ, ಎರೆ ಜಲ, ಸಿರಿಧಾನ್ಯ, ಬೀಜಗಳ ಬಿತ್ತನೆ, ಗೊಬ್ಬರ, ಜೈವಿಕ ಇಂಧನ, ಕೈಯಲ್ಲಿ ಹೆಣೆದ ಅಲಂಕಾರಿಕ ವಸ್ತುಗಳು ನೋಡುಗರನ್ನು ಆಕರ್ಷಿಸಿದವು.