Advertisement

ಸರ್ಕಾರಿ ಶಾಲೆ ಉಳಿಸಲು ಶ್ರಮಿಸಲಿ

03:33 PM Dec 10, 2018 | |

ಚಿಂತಾಮಣಿ: ಎಲ್ಲಿ ನೋಡಿದರೂ ಖಾಸಗಿ ಶಾಲೆಗಳು ತಲೆ ಎತ್ತುತ್ತಿದ್ದು, ಇವುಗಳ ಮಧ್ಯೆ ಸರ್ಕಾರಿ ಶಾಲೆಗಳು ಸರ್ಕಾರಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಚ್ಚುವ ಹಂತ ತಲುಪುತ್ತಿವೆ ಎಂದು ನಂದಮೂರಿ ಅಭಿಮಾನಿಗಳ ಸಂಘದ ನಿರ್ದೇಶಕ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ಸಂಘದ ತಾಲೂಕು ಅಧ್ಯಕ್ಷ ಅಂಜಿನಿ ಶ್ರೀನಿವಾಸ್‌ ಕಳವಳ ವ್ಯಕ್ತಪಡಿಸಿದರು.

Advertisement

ತಾಲೂಕಿನ ಕಸಬಾ ಹೊಬಳಿಯ ಮುನಗನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಂದ ಮೂರಿ ಯುವಸೇನಾ ಅಭಿಮಾನಿಗಳಿಂದ ಹಮ್ಮಿಕೊಂಡಿದ್ದ ಕ್ರೀಡಾ ಸಾಮಗ್ರಿಗಳ ವಿತರಣೆ ಹಾಗೂ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
 
ಕ್ರೀಡಾ ಸಾಮಗ್ರಿ ವಿತರಣೆ: ಈಗಾಗಲೇ ನಂದಮೂರಿ ಯುವಸೇನೆ ಅಭಿಮಾನಿಗಳ ಸಂಘದಿಂದ ಅನೇಕ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ, ಲೇಖನಿ ಸಾಮಗ್ರಿ, ಜೂನಿಯರ್‌ ಎನ್‌.ಟಿ.ಆರ್‌ ಅಭಿನಯದ ಆರವಿಂದ ಸಮೇತ ಚಲನಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಫ್ಯಾನ್ಸ್‌ ಶೋ ನಡೆಸಿ, ಅದರಿಂದ ಬಂದ ಉಳಿಕೆ ಹಣದಲ್ಲಿ ಮುನುಗನಹಳ್ಳಿ ಸರಕಾರಿ ಶಾಲಾ ಮಕ್ಕಳಿಗೆ, ವಾಲಿಬಾಲ್‌, ಟೆನಿಸ್‌ ಬಾಲ್‌, ಫ‌ುಟ್‌ಬಾಲ್‌, ಕ್ರಿಕೆಟ್‌ ಕಿಟ್‌ ಸೇರಿದಂತೆ ಹಲವು ಕ್ರೀಡಾ ಸಾಮಗ್ರಿಗಳನ್ನು ಉಚಿತವಾಗಿ ನೀಡಿದರು. 

ಇದೇ ವೇಳೆ ಕನಕದಾಸ ಜಯತಿ ಆಚರಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಪತ್ರ ವಿತರಿಸಿದರು. ನಂದಮೂರಿ ಯುವಸೇನಾ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗೇಶ್‌ ಕುಮಾರ್‌. ಪ್ರ. ಕಾರ್ಯದರ್ಶಿ ಮುನಿಯಪ್ಪ, ಸಂ. ಕಾರ್ಯದರ್ಶಿ ಶ್ರೀನಿವಾಸ್‌ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.