Advertisement

ಜನರ ಹಿತಕ್ಕಾಗಿ ಮತದಾನ ಮಾಡೋಣ: ನಾವು ಯಾಕೆ ಮತ ಹಾಕಬೇಕು

11:27 AM Mar 26, 2019 | keerthan |

“ನಾವು ಯಾಕೆ ಮತ ಹಾಕಬೇಕು’ ಇದು ಯುವ ಹಾಗೂ ಉಳಿದ ಎಲ್ಲ ಅರ್ಹ ಮತದಾರರನ್ನು ಎ. 18ರ ಮತದಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವ ಉದಯವಾಣಿಯ ವಿಶೇಷ ಅಭಿಯಾನ. ಇದರಲ್ಲಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿಗಳು/ ತರುಣ ಮತದಾರರು ಮತದಾನದ ಮಹತ್ವದ ಕುರಿತು ಬರೆಯುತ್ತಿದ್ದಾರೆ. ಬನ್ನಿ ಪ್ರಜಾತಂತ್ರವನ್ನು ಬೆಂಬಲಿಸೋಣ, ಮತದಾನ ಮಾಡೋಣ.

Advertisement

ದೇಶದ ಜನರ ಹಿತಕ್ಕಾಗಿ ಮತದಾನ ಮಾಡೋಣ
ದೇಶದಲ್ಲಿ ರಾಜಕೀಯಕ್ಕೆ ಅಂಟಿಕೊಂಡಿರುವ ಹೊಲಸು ನೀತಿಗಳನ್ನು ಹೋಗಲಾಡಿಸಿ, ಜನರ ಹಿತಕ್ಕಾಗಿ ಶ್ರಮಿಸುವ ಪ್ರಬಲ ನಾಯಕನ ಆಯ್ಕೆಗಾಗಿ ನಾವು ಮತ ಹಾಕಬೇಕು. ಇಂದಿನ ಯುವಜನತೆಯನ್ನು ಜಾತಿ-ಧರ್ಮದ
ಆಧಾರದಲ್ಲಿ ಒಡೆಯುವ, ತಮ್ಮ ಏಳ್ಗೆಗಾಗಿ ಮುಗ್ಧರನ್ನು ಬಳಸಿಕೊಳ್ಳುವಂತಹ ಪಕ್ಷ, ನಾಯಕರನ್ನು ತಿರಸ್ಕರಿಸಿ ದೇಶದ ಹಿತಕ್ಕಾಗಿ ದುಡಿಯುವವರನ್ನು ಗದ್ದುಗೆಗೆ ಏರಿಸಬೇಕಾದುದು ನಾಗರಿಕರ ಕರ್ತವ್ಯ.
ಅರ್ಪಿತಾ, ತೃತೀಯ ಬಿ.ಎ., ವಿವಿ ಕಾಲೇಜು ಹಂಪನಕಟ್ಟೆ, ಮಂಗಳೂರು

ಮತ ಒಂದಾದರೂ ರಾಜಕಾರಣದಲ್ಲಿ ಪರಿಣಾಮ
ಚುನಾವಣೆ ಪ್ರಜಾಸತ್ತಾತ್ಮಕ ದೇಶಗಳಿಗೆ ಮಾತ್ರ ನೀಡಲಾಗಿರುವ ಅಮೂಲ್ಯ ಕೊಡುಗೆ . ನಮ್ಮ ಮತ ಒಂದು ಆಗಿದ್ದರೂ ಅದು ರಾಜಕಾರಣದಲ್ಲಿ ಸಾಕಷ್ಟು ಪರಿಣಾಮ ಬೀರುತ್ತದೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ದೇಶಕ್ಕಾಗಿ ಮಿಡಿಯುವ ಮನಸ್ಸು ಹೊಂದಿರುವ ನಾಯಕರ ಆಯ್ಕೆ ಮಾಡೋಣ. ಮತ ಹಾಕಿದರೆ ಮಾತ್ರ ಟೀಕಿಸಲು ನೈತಿಕ ಹಕ್ಕು ಇರುತ್ತದೆ.
 ಅನ್ವಿಕಾ ಯು.ಜೆ., ದ್ವಿ. ಬಿಬಿಎ, ಎಸ್‌ ಡಿಎಂ ಕಾಲೇಜು ಮಂಗಳೂರು

ಮತದಾನದಿಂದ ಪ್ರಶಿಸುವ ಅಧಿಕಾರ ಪಡೆಯುತ್ತೇವೆ
ಮತದಾನದ ಮೂಲಕ ಉತ್ತಮ ಪ್ರತಿನಿಧಿಯನ್ನು ಆರಿಸುವ ಹಕ್ಕನ್ನು ಈ ದೇಶ ನನಗೆ ಕಲ್ಪಸಿಕೊಟ್ಟಿದೆ. ಇದರಿಂದ ನಾವು ಪ್ರತಿನಿಧಿಗಳನ್ನು ಪ್ರಶ್ನಿಸುವ ಅಧಿಕಾರ ಪಡೆಯುತ್ತೇವೆ. ಅಲ್ಲದೆ, ನಾನು ಮತದಾನ ಮಾಡಿದರೆ ಸರಕಾರದ ರಚನೆಯಲ್ಲಿ ಭಾಗವಹಿಸಿದಂತೆಯೇ ಆಗುತ್ತದೆ. ಮತದಾನ ಮಾಡುವಾಗ ಯಾವುದೇ ಭೇದಭಾವ ಇಲ್ಲದೆ, ದುರಾಸೆಗೆ ಬಲಿಯಾಗದೆ ಸರಿಯಾದ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳುಹಿಸುವುದು ನನ್ನ ಕರ್ತವ್ಯ, ಜವಾಬ್ದಾರಿ.
 -ಕೀರ್ತಿಕಾ ಎಂ., ದ್ವೀತಿಯ ಬಿ.ಎ. ಸೈಂಟ್‌ ಆ್ಯಗ್ನೆಸ್‌ ಕಾಲೇಜು, ಮಂಗಳೂರು

ದೇಶದ ಏಳಿಗೆಗಾಗಿ ಹಕ್ಕು ಚಲಾಯಿಸೋಣ
ನಾವು ಮತ ಹಾಕಿ ಜನಪ್ರತಿನಿಧಿಗಳನ್ನು ಆರಿಸಿದ ಅನಂತರ ಮುಂದಿನ ಐದು ವರ್ಷಗಳ ಕಾಲ ನಮ್ಮ ಗ್ರಾಮ, ರಾಜ್ಯ, ದೇಶಗಳಲ್ಲಿ ಅಭಿವೃದ್ಧಿ ಮಾಡುವ ಹೊಣೆ ಅವರ ಮೇಲೆ ಇರುತ್ತದೆ. ಸುಭದ್ರ, ಅಭಿವೃದ್ಧಿಶೀಲ ದೇಶವನ್ನಾಗಿ ಮಾಡುವ ಜನಪ್ರತಿನಿಧಿಗಳ ಆಯ್ಕೆ ಮಾಡುವ ಅಮೂಲ್ಯ ಅವಕಾಶ ನಮ್ಮ ಕೈಯಲ್ಲಿದೆ. ದೇಶದ ಏಳಿಗೆಗಾಗಿ ಹಕ್ಕು ಚಲಾಯಿಸೋಣ.
-ಸೌಮ್ಯಾ ಎನ್‌., ಪ್ರಥಮ ಬಿ.ಕಾಂ., ಡಾ| ಶಿವರಾಮ ಕಾರಂತ ಕಾಲೇಜು, ಪೆರುವಾಜೆ

Advertisement

ನಿರಾಶಾಭಾವ ಸಲ್ಲದು ಎಲ್ಲರ ಮತವೂ ಮುಖ್ಯ
ದೇಶ ಅಭಿವೃದ್ಧಿ ಹೊಂದಲು ನಾಗರಿಕರೆಲ್ಲ ಮತದಾನ ಮಾಡಬೇಕು. ನಾವು ಸರಕಾರದಿಂದ ಒಳ್ಳೆಯ ರೀತಿಯ ಸೌಲಭ್ಯವನ್ನು ಪಡೆಯಲು ಮತದಾನ ಮಾಡುವುದು ಅವಶ್ಯ. ಪ್ರಜಾಸತ್ತಾತ್ಮಕವಾದ ಸರಕಾರ ರಚನೆಯಾಗಬೇಕು. ನನ್ನ ಒಂದು ಮತದಿಂದ ಏನಾಗುತ್ತದೆ? ಎನ್ನುವ ನಿರಾಶಾಭಾವ ಸಲ್ಲದು. ಪ್ರತಿಯೊಬ್ಬರ ಮತವೂ ಮುಖ್ಯ.
ಗುರುನಾಥ್‌ ಚವ್ಹಾಣ್‌, ಪ್ರಥಮ ವಾಣಿಜ್ಯ ವಿಭಾಗ, ಸರಕಾರಿ ಪ್ರಥದರ್ಜೆ ಕಾಲೇಜು, ಹಳೆಯಂಗಡಿ

ದೇಶಕ್ಕೆ ಒಳಿತು ಮಾಡುವ ನಾಯಕನನ್ನು ಆರಿಸೋಣ
ಮತದಾನ ಮಾಡುವುದರ ಮೂಲಕ ಪ್ರಜೆಗಳಾದ ನಾವು ತಮ್ಮನ್ನು ಆಳುವ ಪ್ರತಿನಿಧಿಯನ್ನು ಆಯ್ಕೆ ಮಾಡುವ ಅವಕಾಶವನ್ನು
ಬಳಸಿಕೊಂಡತ್ತಾಗುತ್ತದೆ. ಪ್ರಜಾತಂತ್ರದಲ್ಲಿ ಪ್ರಜೆಗಳಾದ ನಮ್ಮ ಪ್ರಮುಖ ಹಕ್ಕು ಮತದಾನ. ಇದರಿಂದ ದೇಶಕ್ಕೆ ಒಳಿತು ಮಾಡುವ mನಾಯಕನನು ° ಆಯ್ಕೆ ಮಾಡುವ ಅವಕಾಶವನ್ನು ಬಳಸಿಕೊಂಡಂತಾಗುತ್ತದೆ.
ಬೃಂದಾ ಪಿ. ಮುಕ್ಕೂರು, ಪತ್ರಿಕೋದ್ಯಮ ವಿದ್ಯಾರ್ಥಿ, ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು

ವಿಡಂಬಿಸುವ ಮೊದಲು ಸಾಂವಿಧಾನಿಕ ಹಕ್ಕು ಚಲಾಯಿಸಿ
ನಾವು ಮತ ಚಲಾಯಿಸದಿದ್ದರೆ ಸರಕಾರದ ಆಡಳಿತ ಕ್ರಮವನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಂಡತೆ. ಒಬ್ಬ ವಿವೇಕವುಳ್ಳ ವಿದ್ಯಾರ್ಥಿನಿಯಾಗಿ ನಾನು ಮತದಾನ ಮಾಡುವೆ. ನೀವೂ ಮಾಡಿ. ನಮಗೆ ಸರಕಾರ ಏನು ಸೌಲಭ್ಯ ಕೊಟ್ಟಿದೆ? ಎನ್ನುವುದನ್ನು ವಿಡಂಬಿಸುವ ಬದಲು ನಮಗೆ ನೀಡಿರುವ ಹಕ್ಕನ್ನು ಉಪಯೋಗಿಸಬೇಕು.
 ಸ್ವಾತಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ದಕಟ್ಟೆ.

ಪ್ರಬುದ್ಧ ಆಡಳಿತ ವ್ಯವಸ್ಥೆಗಾಗಿ ಮತದಾನ ಅಗತ್ಯ
ಭಾರತದ ಪ್ರಜೆಯಾಗಿರುವ ನಮಗೆ ನಮ್ಮನ್ನು ಆಳುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹಕ್ಕಿದೆ. ಭಾರತ ಅಭಿವೃದ್ಧಿಯನ್ನು ಸಾಧಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲು ಪ್ರಬುದ್ಧ ರಾಜಕೀಯ, ಆಡಳಿತ ವ್ಯವಸ್ಥೆ ನಿರ್ಮಾಣವಾಗಬೇಕಿದೆ. ಹಾಗಾಗಿ ನಾವು ಮತ ಚಲಾಯಿಸುವ ಮೂಲಕ ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ನಿರ್ವಹಿಸಬೇಕಿದೆ.
ರಂಜಿತಾ ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜು ಸವಣೂರು

Advertisement

Udayavani is now on Telegram. Click here to join our channel and stay updated with the latest news.

Next