Advertisement
ಕನ್ನಡ ವಿಶ್ವವಿದ್ಯಾಲಯ ಹಾಲುಮತ ಅಧ್ಯಯನ ಪೀಠದ ವತಿಯಿಂದ ಮಂಟಪ ಸಭಾಂಗಣದಲ್ಲಿ ದಶಮಾನೋತ್ಸವಸಮಾರಂಭದ ಅಂಗವಾಗಿ ಬುಧವಾರ ಆಯೋಜಿಸಿದ್ದ ಕುಲವೃತ್ತಿಗಳು; ಪರಂಪರೆ ಮತ್ತು ಆಧುನಿಕತೆ ವಿಚಾರ ಸಂಕಿರಣದಲ್ಲಿ ಕುರಿಸಾಕಾಣಿಕೆ ಗೋಷ್ಠಿಯಲ್ಲಿ ಕುರಿಸಾಕಾಣಿಕೆಯ ಇತಿಹಾಸ ಕುರಿತು ಅವರು ಮಾತನಾಡಿದರು. ಅಲೆಮಾರಿ ಕುರಿಗಾಹಿಗಳಿಗೆ
ಮತದಾನ ಹಾಗೂ ಪಡಿತರ ಚೀಟಿ ಇಲ್ಲ. ಪೋಲಿಸರಿಂದ ರಕ್ಷಣೆ, ನೆಲೆವಿಲ್ಲದಂತಾಗಿ ಪೂರ್ವಿಕರಾದಿಯಾಗಿ ಕಾಡುಮೇಡು
ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಅಲೆಮಾರಿ ಕುರಿಗಾರರ ಕಷ್ಟ ಕಾರ್ಪಣ್ಯಗಳನ್ನು ಗಂಭೀರವಾಗಿ ಪರಿಗಣಿಸಿ
ಉದ್ಯೋಗ ಅವಕಾಶವನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕುರಿಗಾರಿಕೆಯ ವೃತ್ತಿ ವಿಧಾನವನ್ನು ಕುರಿತು ಸಿರಗುಪ್ಪ ಡಾ| ಯರಿಯಪ್ಪ ಮಾತನಾಡಿ, ಅಲೆಮಾರಿ ವಿಧಾನ, ಅರೆ ಅಲೆಮಾರಿ ವಿಧಾನ, ಸ್ಥಾನಿಕ ವಿಧಾನ, ಫಾರಂಗಳಲ್ಲಿ ಕುರಿ ಸಾಕಾಣಿಕೆ ಹೀಗೆ ಹಲವು ವಿಧಾನಗಳಲ್ಲಿ ಕುರಿಗಾರಿಕೆಯನ್ನು ವೃತ್ತಿಯಾಗಿಸಿ ಕೊಳ್ಳಲಾಗಿದೆ. ಕುರಿಸಂಗೋಪನೆಗೆ ಹವಾಮಾನ ಬಹಳ ಮುಖ್ಯ. ರಾಷ್ಟ್ರೀಯ ಉತ್ಪನ್ನಕ್ಕೆ ಕುರಿ ಉತ್ಪನ್ನದ ಕೊಡುಗೆ ಶೇ.25.6ರಷ್ಟಿದೆ ಎಂದರು.
ನಿರ್ದಿಷ್ಟ ಸಂಪ್ರದಾಯಗಳಲ್ಲಿ ಬಳಸಲಾಗುತ್ತದೆ. ಆದರೆ ಪ್ರತಿಯೊಂದು ಆಚರಣೆ ಸಂಪ್ರದಾಯಗಳಲ್ಲಿ ಕಡ್ಡಾಯವಾಗಿ
ಭಂಡಾರವನ್ನು ಬಳಸಲಾಗುತ್ತದೆ ಎಂದು ತಿಳಿಸಿದರು. ಗೋಷ್ಠಿಯ ಅಧ್ಯಕ್ಷ ವಿಜ್ಞಾನ ನಿಕಾಯದ ಡೀನ್ ಡಾ| ಸಿ. ಮಹದೇವ ಕುರಿಗಾರರ ಆಚರಣೆ ನಂಬಿಕೆ ಸಂಪ್ರದಾಯದ ಕುರಿತು ತೌಲನಿಕ ಅಧ್ಯಯನಗಳ ಅಗತ್ಯವಿದೆ ಎಂದು ಹೇಳಿದರು. ನಂತರದ ಗೋಷ್ಠಿಗಳಲ್ಲಿ ಕಂಬಳಿ ಇತಿಹಾಸ, ಕಂಬಳಿ ಆಚರಣೆಗಳು, ಉದ್ಯಮ ಕುರಿತು ನಂತರ ಗೊಂಡ ಸಮುದಾಯ, ಜೇನು ಕುರುಬ, ಕಾಡು ಕುರುಬ, ಧನಗರ ಗವಳಿಗರ ವೃತ್ತಿಗಳು ಕುರಿತು ಪ್ರಬಂಧಗಳು ಮಂಡನೆಯಾದವು.
Related Articles
ಡಾ| ಮಲ್ಲಿಕಾ ಎಸ್. ಘಂಟಿ ಇದ್ದರು. ರಾಜ್ಯದಲ್ಲಿ 5 ಲಕ್ಷ ಕುಟುಂಬಗಳು, 1.50 ಕೋಟಿ ಕುರಿ ಮೇಕೆ ಸಾಕಾಣಿಕೆಯಲ್ಲಿ ನಿರತವಾಗಿವೆ. ಮಾರುಕಟ್ಟೆ ದಲ್ಲಾಳಿಗಳನ್ನು ಒಳಗೊಂಡಂತೆ 12 ಲಕ್ಷ ಜನರು ಇದರ ಮೇಲೆ ಅವಲಂಬಿತರಾಗಿ ಬದುಕುತ್ತಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿಗೆ ಕುರಿಗಳ ಆರೋಗ್ಯ ತಪಾಸಣೆಗಾಗಿ ಅಂಬುಲೆನ್ಸ್ ಸೇವೆ ಒದಗಿಸಲಾಗುತ್ತದೆ. ರೋಗ ಬಾಧೆಯಿಂದ ಕುರಿಗಳು ಸತ್ತರೆ ಪರಿಹಾರ ಧನ ಒದಗಿಸಲಾಗುತ್ತದೆ. ರಾಜ್ಯದಲ್ಲಿ ಒಟ್ಟು ಕುರಿಗಾರರ 600 ಸಂಘಗಳಿವೆ. ಮೇಕೆ ಹಾಲಿನ ಔಷಧಿ ಗುಣಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ.
Advertisement
ಕುರಿ ಮೇಕೆಯ ಗೊಬ್ಬರ ಮಾರಾಟದ ಕಾರ್ಖಾನೆಗಳ ಕುರಿತು ಚರ್ಮ ಉತ್ಪನ್ನಗಳ ಕುರಿತು ಸುಧಾರಿಸಿದ ಕುರಿ ಉಣ್ಣೆಯ ಕಂಬಳಿ ಉತ್ಪನ್ನದ ಕುರಿತು ದೊಡ್ಡ ಮಟ್ಟದಲ್ಲಿ ಉದ್ಯಮ ನಡೆಸಲು ಪ್ರಯತ್ನಿಸಲಾಗಿದೆ. ಬೇರೆ ಬೇರೆ ತಳಿಗಳ ಕುರಿಗಳ ಜೀನ್ಸ್‌ಗಳನ್ನು ಸಂಗ್ರಹಿಸಿ ಕುರಿಗಳ ಸಾಮರ್ಥ್ಯ ಹೆಚ್ಚಿಸುವ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಮಂಡ್ಯದ ಮಳವಳ್ಳಿಯಲ್ಲಿ ಕುರಿ ಸಾಕಾಣಿಕೆ ತರಬೇತಿ ಕೇಂದ್ರವಿದೆ. ಹೀಗೆ ಕುರಿ ಮೇಕೆಯ ಹಾಲು, ಗೊಬ್ಬರ, ಚರ್ಮ, ಉಣ್ಣೆ, ಮಾಂಸ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಲಾಗಿದೆ.ಪಂಡಿತರಾವ್ ಚಿದ್ರಿ, ಮಾಜಿ ಅಧ್ಯಕ್ಷರು, ಕುರಿ ಮತ್ತು ಉಣ್ಣೆ ಆಭಿವೃದ್ಧಿ ನಿಗಮ.