Advertisement

ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗೋಣ

04:36 PM Apr 08, 2019 | pallavi |
ಅಳಿವಿನಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಜವಾಬ್ದಾರಿ ಕೇವಲ ಮೃಗಾಲಯ ನಿರ್ವಹಣೆ ಮಾಡುವವರದ್ದಲ್ಲ. ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿಷ್ಠೆ ತೋರಬೇಕಿದೆ. ಹಾಗಿದ್ದರೆ ಮಾತ್ರ ಭವಿಷ್ಯದಲ್ಲಿ ಈ ಪ್ರಾಣಿಗಳ ಸಂತತಿ ಬೆಳೆಯಲು ಸಾಧ್ಯವಿದೆ. ಕಾಡು, ಅಭಯಾರಣ್ಯಗಳನ್ನು ಉಳಿಸುವ, ಈ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಪಣತೊಟ್ಟರೆ ವಿಶ್ವ ಮೃಗಾಲಯ ಪ್ರಿಯರ ದಿನದ ಆಚರಣೆ ಅರ್ಥಪೂರ್ಣವಾಗಲು ಸಾಧ್ಯವಿದೆ¨
ಮಂಗನಿಂದ ಆದ ಮಾನವ ಮುಂದೆ ನಾಗರಿಕತೆ ಬೆಳದಂತೆ ಬೌದ್ಧಿಕ ನಾಗರಿಕನಾದನು. ತನ್ನದೇ ಆದ ಸಮಾ ಜವನ್ನು ನಿರ್ಮಿಸಿಕೊಂಡು ಸಮಾಜ ಜೀವಿಯಾಗಿ ರೂಪು ಗೊಂಡನು. ಮಾನವ ತನ್ನ ಜತೆ- ಜತೆ‌ಗೆ ವನ್ಯ ಜೀವಿಗಳೊಂದಿಗಿನ ನಂಟು ಬಿಟ್ಟುಕೊಡಲಿಲ್ಲ. ವನ್ಯಜೀವಿಗಳು ಹಾಗೂ ಪ್ರಾಣಿ, ಪಕ್ಷಿಗಳನ್ನು ತನ್ನೊಂದಿಗೆ ಬದುಕಲು ಅವಕಾಶ ನೀಡಿದನು. ಹೀಗೆ ಮಾನವ ಮತ್ತು ವನ್ಯಜೀವಿಗಳೊಂದಿಗಿನ ಬಂಧುತ್ವ ಬೆಳದು ನಿಂತಿತು. ತರುವಾಯು ಆಧುನಿಕತೆ ಬೆಳದು ನಿಂತಿತು, ನಗರೀಕರಣ ಹಾಗೂ ಜಾಗತೀಕರಣಕ್ಕೆ ಜಗತ್ತು ತೆರದುಕೊಂಡ ಅನಂತರ ಕಾಡುಗಳ ವಿನಾಶ ದಿಂದಾಗಿ ಪ್ರಾಣಿಗಳು ಅಳಿವಿನಂಚಿಗೆ ಹೋದವು. ಇದೊಂದು ಘೋರ ದುರಂತಗಳಿಗೆ ನಾಂದಿಯಾಗಬೇಕಾಯ್ತು.
ಅಳವಿನಂಚಿರುವ ಪ್ರಾಣಿ, ಪಕ್ಷಿಗಳನ್ನು ಒಂದೇ ಸೂರಿನಲ್ಲಿ ತರುವ ಪ್ರಯತ್ನದ ಫ‌ಲವಾಗಿ ಝೂ (ಮೃಗಾಲಯಗಳ)
ಪರಿಕಲ್ಪನೆ ಹುಟ್ಟಿಕೊಂಡಿತು. ಇದರಿಂದಾಗಿ ಒಂದೇ ಸೂರಿ ನಡಿ ಹಲವಾರು ಪ್ರಯೋಜನಗಳನ್ನು ಮಾನವ ಪಡೆಯಲಾ ರಂಭಿಸಿದ. ಅಳವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಬಗ್ಗೆ ಭವಿಷ್ಯಕ್ಕೆ ತಿಳಿಸುವುದು ಒಂದಡೆಯಾದರೆ, ಮನೋರಂಜನೆ ಹಾಗೂ ಪ್ರವಾಸೋದ್ಯಮದ ಪೂರಕವಾಗಿ ಝೂಗಳು ಬೆಳೆದು ನಿಂತಿವು.
ವನ್ಯಜೀವಿಗಳ ಮೇಲಿನ ವಿಶೇಷ ಕಾಳಜಿ; ದಿನದ ಮಹತ್ವ ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿ ಹಾಗೂ ಕಾಳಜಿ ಇರುವ ಜನತೆಗಾಗಿ ಎ. 8ರಂದು ವಿಶ್ವ ಮೃಗಾಲಯ ಪ್ರಿಯರ (ವರ್ಲ್ಡ್ ಝೂ ಲವರ್ ಡೇ) ದಿನವೆಂದು ಆಚರಿಸಲಾಗುತ್ತದೆ. ಈ ದಿನ ದಂದು ಪ್ರಾಣಿ, ಪಕ್ಷಿ ಪ್ರಿಯರು ಹತ್ತಿರದ ಮೃಗಾಲಯಕ್ಕೆ ಭೇಟಿ ನೀಡಿ ಪ್ರಾಣಿ, ಪಕ್ಷಿಗಳ ಮೇಲಿನ ಪ್ರೀತಿ, ಔದಾರ್ಯವನ್ನು ತೋರಿಸುತ್ತಾರೆ. ಇದೊಂದು ಔಪಚಾರಿಕವಾದ ದಿನಾಚರಣೆಯಾದರೂ, ವನ್ಯಜೀವಿಗಳ ಸಂರಕ್ಷಣೆ ಹಿತದೃಷ್ಟಿಯಿಂದ ಈ ದಿನ ಮಹತ್ವದ್ದು ಎಂದೆನಿಸುತ್ತದೆ.
ಪ್ರಾಣಿಪ್ರಿಯರ ವಿಶೇಷ ದಿನವಾದ ಈ ದಿನವನ್ನು ಪ್ರಾಣಿ- ಪಕ್ಷಿಗಳ ಮಧ್ಯೆ ಆಚರಿಸಿ, ಉತ್ತಮ ಸಂದೇಶ ನೀಡಲಾಗುತ್ತದೆ. ಅಲ್ಲದೇ ಅಳಿವಿನಂಚಿನಲ್ಲಿರುವ ಪ್ರಾಣಿ-ಪಕ್ಷಿಗಳ ಉಳಿವಿಗೆ ಪಣತೊಡಲಾಗುತ್ತದೆ. ತಮಗೆ ವಿಶೇಷವಾದ ಮೃಗಾಲಯದಲ್ಲಿ ಪ್ರೀತಿ ತೋರಿಸಲು ಪ್ರಾಣಿಗಳನ್ನು ದತ್ತುಗೆ ತೆಗದು ಕೊಂಡು ಸಾಕುತ್ತಾರೆ.
ಪ್ರವಾಸೋದ್ಯಮಕ್ಕೆ ಪೂರಕ ದೇಶದ ಹಲವಾರು ಭಾಗಗಳಲ್ಲಿ ಪ್ರಾಣಿ ಸಂಗ್ರಹಾಲಯ ಇದ್ದು, ಪ್ರತಿನಿತ್ಯವೂ ಲಕ್ಷಾಂತರ ಮಂದಿ ಭೇಟಿ ನೀಡುತ್ತಿದ್ದಾರೆ. ಇದ ರಿಂದಾಗಿ ದೇಶದ ಪ್ರವಾಸೋದ್ಯದ ಅಭಿವೃದ್ಧಿಯಾಗಲಿದೆ. ಇತ್ತೀ ಚೆಗೆ ರಾಜ್ಯದ ಬಂಡೀಪುರ ಅಭಯಾರಣ್ಯದಲ್ಲಿ ಬೆಂಕಿ ಕೆನ್ನಾಲಿಗೆ ಹಲವಾರು ರೀತಿಯಲ್ಲಿ ನಷ್ಟಅನುಭವಿಸಿತು. ಈ ಬಗ್ಗೆ ಆಡಳಿತ ವ್ಯವಸ್ಥೆ ಎಚ್ಚರ ವಹಿಸಬೇಕಿದ್ದು, ಅಭಯಾರಣ್ಯಗಳ ಅಭಿವೃದ್ಧಿಗೆ ಶ್ರಮಿಸಬೇಕಿದೆ.
ವಿಯೆನ್ನಾದಲ್ಲಿ ಮೊದಲ ಝೂ
ಝೂ ಅಥವಾ ಮೃಗಾಲಯಗಳ ಪರಿಕಲ್ಪನೆ ಹುಟ್ಟಿಕೊಂಡಿದ್ದು ಮೊದಲು ವಿಯೆನ್ನಾದಲ್ಲಿ. 1765ರಲ್ಲಿ$ ಸಾರ್ವಜನಿಕ ಮೊದಲ ಮೃಗಾಲಯ (ಝೂ ) ಆರಂಭಗೊಂಡಿತು. ಅನಂತರ 1874ರಲ್ಲಿ ಯುನೈ ಟೆಡ್‌ ಸ್ಟೇಟ್ಸ್‌ ನಲ್ಲಿ ಮತ್ತೂಂದು ಮೃಗಾಲಯ ಅರಂಭ ಗೊಂಡಿತು. ತರುವಾಯ ಒಟ್ಟಾರೆಯಾಗಿ 350ಕ್ಕೂ ಹೆಚ್ಚು ಮೃಗಾಲಯ ಆರಂಭ ಗೊಂಡವು.
ಶಿವ ಸ್ಥಾವರಮಠ
Advertisement

Udayavani is now on Telegram. Click here to join our channel and stay updated with the latest news.

Next