ಹೊಸದಿಲ್ಲಿ/ಇಸ್ಲಾಮಾಬಾದ್: “ನಮ್ಮದು ನಯಾ(ಹೊಸ) ದಿಲ್ಲಿ ಎಂದು ಹೇಳುವ ನೆರೆರಾಷ್ಟ್ರವು, ಬಾಯಿಮಾತಿನಲ್ಲಿ ಅಷ್ಟನ್ನು ಹೇಳಿದರೆ ಸಾಲದು. ಭಯೋತ್ಪಾದಕರ ವಿರುದ್ಧವೂ ನಯಾ(ಹೊಸ) ಕ್ರಮ ಕೈಗೊಳ್ಳಬೇಕು’ ಎಂದು ಭಾರತವು ತಾಕೀತು ಮಾಡಿದೆ. ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, “ಆಡುವ ಮಾತಿನಿಂದ ಪಾಕ್ ಯನ್ನು ಅಳೆಯಲು ಸಾಧ್ಯವಿಲ್ಲ. ಆ ದೇಶವು ತನ್ನ ನೆಲದಲ್ಲಿರುವ ಭಯೋತ್ಪಾದನೆಯ ಬೇರನ್ನು ಕಿತ್ತು ಹಾಕಿದರೆ, ಆಗ ಮಾತ್ರ ಅದನ್ನು ಹೊಸ ದಿಲ್ಲಿ ಎಂದು ನಂಬಬಹುದು. “ಹೊಸ ಆಲೋಚನೆಯ ಹೊಸ ದಿಲ್ಲಿ’ ಎಂಬ ಉದ್ಘೋಷವು ಪೂರ್ಣಗೊಳ್ಳಬೇಕೆಂದರೆ ಉಗ್ರರ ವಿರುದ್ಧ ಹೊಸ ಕ್ರಮ ಜಾರಿಯಾಗಬೇಕು’ ಎಂದು ಹೇಳಿದ್ದಾರೆ. ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ವೇಳೆ, ಇದು ನಯಾ ಪಾಕ್ ಎಂದು ಘೋಷಿಸಿದ್ದರು. ಅದನ್ನು ಉಲ್ಲೇಖೀಸಿ ರವೀಶ್ ಕುಮಾರ್ ಈ ರೀತಿ ಟಾಂಗ್ ನೀಡಿದ್ದಾರೆ.
2004ರಲ್ಲೇ ಅಂದಿನ ಪ್ರಧಾನಿಯು ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದರು. ಆದರೆ, ಈಗಲೂ ಪಾಕ್‌ನಲ್ಲಿ ಜೈಶ್‌ನಂಥ ಉಗ್ರ ಸಂಘಟನೆಗಳು ಅಸ್ತಿತ್ವದಲ್ಲಿದ್ದು, ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದೂ ರವೀಶ್ ಆರೋಪಿಸಿದ್ದಾರೆ. ಇದೇ ವೇಳೆ, ವಿಂಗ್ ಕಮಾಂಡರ್ ಅಭಿನಂದನ್ ಅವರು ಮಿಗ್ -21 ಮೂಲಕ ದಿಲ್ಲಿದ ಎಫ್16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದು, ಅದಕ್ಕೆ ನಮ್ಮಲ್ಲಿ ಎಲೆಕ್ಟ್ರಾನಿಕ್ ಸಾಕ್ಷ್ಯಗಳೂ ಇವೆ ಎಂದೂ ಅವರು ತಿಳಿಸಿದ್ದಾರೆ.
ಉಗ್ರ ಪಟ್ಟಿಗೆ ಸೇರಿಸಿ: ಜೆಇಎಂ ಉಗ್ರ ಮಸೂದ್ ಅಜರ್ ದಿಲ್ಲಿದಲ್ಲೇ ಇದ್ದಾನೆ ಎನ್ನುವುದು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳಿಗೆ ಗೊತ್ತು ಎಂದೂ ಹೇಳಿ ರುವ ರವೀಶ್ ಕುಮಾರ್, ಅಜರ್‌ನನ್ನು ಕೂಡಲೇ ವಿಶ್ವ ಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸುತ್ತೇವೆ ಎಂದಿದ್ದಾರೆ. ಅಲ್ಲದೆ, ಪುಲ್ವಾಮಾ ದಾಳಿಯನ್ನು ಎಲ್ಲ 15 ಸದಸ್ಯ ರಾಷ್ಟ್ರಗಳೂ ಖಂಡಿಸಿವೆ ಎಂದೂ ತಿಳಿಸಿದ್ದಾರೆ.
ಅಮ್ಮಂದಿರ ಮೊರೆ: ಉಗ್ರ ಸಂಘಟನೆಗಳಿಗೆ ಸೇರಿರುವಂಥ ಮಕ್ಕಳನ್ನು ವಾಪಸ್ ಕರೆತರುವ ಪ್ರಯತ್ನದಲ್ಲಿ ಕೈಜೋಡಿ ಸುವಂತೆ ಕಣಿವೆ ರಾಜ್ಯದಲ್ಲಿನ ಅಮ್ಮಂದಿರಿಗೆ ಸೇನೆ ಮನವಿ ಮಾಡಿದೆ. ಇದು ನಾನು ಮಾಡುತ್ತಿರುವ ಹೃದಯಪೂರ್ವಕ ಕೋರಿಕೆ. ದಯವಿಟ್ಟು ನಿಮ್ಮ ಮಕ್ಕಳು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗದಂತೆ ತಡೆಯಿರಿ. ಈಗಾಗಲೇ ಸೇರ್ಪಡೆ ಯಾಗಿದ್ದರೆ ಅವರನ್ನು ಮುಖ್ಯವಾಹಿನಿಗೆ ಕರೆತರಲು ಸಹಾಯ ಮಾಡಿ. ಅವರ ಸುರಕ್ಷತೆ ನಮಗೆ ಬಿಡಿ ಎಂದು ಲೆ.ಜ. ಕೆ.ಜೆ.ಎಸ್ ಧಿಲ್ಲನ್ ಕೇಳಿಕೊಂಡಿದ್ದಾರೆ. ಇದೇ ವೇಳೆ, ಬದ್ಗಾಂನಲ್ಲಿ ಯೋಧರೊಬ್ಬರನ್ನು ಉಗ್ರರು ಅಪಹರಿಸಿರುವ ಸುದ್ದಿ ಸುಳ್ಳು ಎಂದು ರಕ್ಷಣಾ ಇಲಾಖೆ ಸ್ಪಷ್ಟನೆ ನೀಡಿದೆ.
ಜೆಇಎಂಗೆ ಐಎಸ್‌ಐ ನಂಟು: ಇತ್ತೀಚೆಗೆ ನಿಷೇಧಗೊಂಡ ಜಮ್ಮು-ಕಾಶ್ಮೀರದ ಜಮಾತೆ ಇಸ್ಲಾಮಿ ಸಂಘಟನೆ ಪಾಕ್ ಐಎಸ್‌ಐ ಜತೆ ನಂಟು ಹೊಂದಿತ್ತು ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಪಾಕಿಸ್ತಾನಿ ಹೈಕಮಿಷನ್ ಜತೆ ನಿರಂತರವಾಗಿ ಜೆಇಎಂ ನಾಯಕರು ಮಾತುಕತೆ ನಡೆಸುತ್ತಿದ್ದರು ಎಂದೂ ಹೇಳಿದ್ದಾರೆ. ಈ ನಡುವೆ, ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪದಲ್ಲಿ ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಮಿರ್ವೇಜ್ ಫಾರೂಕ್ ಮತ್ತು ಗೀಲಾನಿ ಪುತ್ರನಿಗೆ ಎನ್‌ಐಎ ಸಮನ್ಸ್ ಜಾರಿ ಮಾಡಿದೆ.
ಪಾಕ್ ಪ್ರಜೆ ವಾಪಸ್: 60 ವರ್ಷ ವಯಸ್ಸಿನ ಪಾಕ್ ನಾಗರಿಕರೊಬ್ಬರು ಅಕಸ್ಮಾತಾಗಿ ಗಡಿ ದಾಟಿ ಭಾರತದ ನೆಲ ದೊಳಕ್ಕೆ ಕಾಲಿಟ್ಟಿದ್ದು, ಸದ್ಭಾವನೆಯ ಸಂಕೇತವಾಗಿ ಬಿಎಸ್‌ಎಫ್ ಯೋಧರು ಅವರನ್ನು ವಾಪಸ್ ಕಳುಹಿಸಿದ್ದಾರೆ. ತಪ್ಪಿದ ಮತ್ತೂಂದು ಅವಘಡ: ಅಖೂ°ರ್ ವಲಯದ ಎಲ್‌ಒಸಿ ಬಳಿ ಸುಧಾರಿತ ಸ್ಫೋಟಕವೊಂದು ಶನಿವಾರ ಪತ್ತೆಯಾಗಿದ್ದು, ಸಂಭಾವ್ಯ ಅವಘಡ ತಪ್ಪಿದಂತಾಗಿದೆ. ರಸ್ತೆ ಪಕ್ಕದಲ್ಲೇ ಇದನ್ನು ಬಚ್ಚಿಡಲಾಗಿತ್ತು. ಇದು ಗಸ್ತು ತಿರುಗುತ್ತಿದ್ದ ಪೊಲೀಸರ ಕಣ್ಣಿಗೆ ಬಿದ್ದಿದ್ದು, ಸ್ಥಳಕ್ಕಾಗಮಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿದ್ದಾರೆ.
ಪಾಕ್ ಡ್ರೋನ್ ಹೊಡೆದುರುಳಿಸಿದ ಸೇನೆ: ರಾಜಸ್ಥಾನದಲ್ಲಿ ಗಡಿ ಉಲ್ಲಂಘಿಸಿದ ಪಾಕ್ ನ ಡ್ರೋನ್ ಅನ್ನು ಭಾರತೀಯ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ. ಕಳೆದ ತಿಂಗಳು ಭಾರತ ವಾಯುದಾಳಿ ನಡೆಸಿದ ನಂತರದಲ್ಲಿ ಮೂರನೇ ಬಾರಿಗೆ ಗೂಢಚಾರಿಕೆ ಡ್ರೋನ್ ಅನ್ನು ಕಳುಹಿಸುವ ಪಾಕ್ ಪ್ರಯತ್ನ ವಿಫಲವಾಗಿದೆ.
ನಿಷೇಧಿತ ಉಗ್ರ ಸಂಘಟನೆಗಳು “ಹೈ ರಿಸ್ಕ್’ ವಿಭಾಗಕ್ಕೆ
ಹಣಕಾಸು ಕಾರ್ಯ ಪಡೆ(ಎಫ್ಎಟಿಎಫ್)ಯ ಒತ್ತಡಕ್ಕೆ ಮಣಿದಿರುವ ದಿಲ್ಲಿವು ಈಗ ಜೈಶ್ ಸೇರಿದಂತೆ ನಿಷೇಧಿತ ಉಗ್ರ ಸಂಘಟನೆಗಳನ್ನು “ಹೈ ರಿಸ್ಕ್’ ಕೆಟಗರಿಗೆ ಸೇರಿಸಿದ್ದು, ಅವುಗಳ ಕಾರ್ಯಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡಲು ನಿರ್ಧರಿಸಿದೆ. ದಿಲ್ಲಿವು ಈ ಉಗ್ರ ಸಂಘಟನೆಗಳನ್ನು “ಅಲ್ಪ ಹಾಗೂ ಮಧ್ಯಮ ರಿಸ್ಕ್’ ವಿಭಾಗಕ್ಕೆ ಸೇರಿಸಿದ್ದ ಹಿನ್ನೆಲೆಯಲ್ಲಿ ಹಣಕಾಸು ಅಪರಾಧಗಳ ವಿರುದ್ಧದ ಪ್ಯಾರಿಸ್ ಮೂಲದ ಜಾಗತಿಕ ನಿಗಾ ಸಂಸ್ಥೆ ಎಫ್ಎಟಿಎಫ್ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಾಕ್, ಈಗ ಈ ಸಂಘಟನೆಗಳನ್ನು ಹೈ ರಿಸ್ಕ್ ವಿಭಾಗಕ್ಕೆ ಸೇರಿಸಿದೆ.
ದಿಲ್ಲಿದ ಮಣ್ಣಲ್ಲಿ ಕುಳಿತು ಯಾವುದೇ ವ್ಯಕ್ತಿ ಅಥವಾ ಉಗ್ರ ಸಂಘಟನೆಯೂ ಮತ್ತೂಂದು ದೇಶದ ಮೇಲೆ ವಿಧ್ವಂಸಕ ಕೃತ್ಯ ಎಸಗಲು ನಾವು ಅವಕಾಶ ನೀಡುವುದಿಲ್ಲ.
ಇಮ್ರಾನ್ ಖಾನ್, ಪಾಕ್ ಪ್ರಧಾನಿ