Advertisement
ಗಾಳಿಯ ಶಕ್ತಿ, ಅದರ ಪ್ರಯೋಜನಗಳನ್ನು ತಿಳಿಸುವ ಸಲು ವಾಗಿ ವಿಶ್ವ ವಾಯು ದಿನಾಚರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಂಡ್ ಯುರೋಪ್ ಮತ್ತು ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್ ವತಿಯಿಂದ ಪ್ರತಿ ವರ್ಷ ಜೂನ್ 15ರಂದು ಆಚರಿಸಲಾ ಗುತ್ತಿದೆ.
Related Articles
Advertisement
2007ರಲ್ಲಿ ಮೊದಲಿಗೆ ಯುರೋಪಿಯನ್ ವಿಂಡ್ ಎನರ್ಜಿ ಕೌನ್ಸಿಲ್ ಯುರೋಪ್‌ನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆಗ ಇದರ ಪ್ರಮುಖ ಉದ್ದೇಶವೆಂದರೆ ರಾಷ್ಟ್ರೀಯ ವಾಯು ಶಕ್ತಿ ಉತ್ಪಾದನ ಸಂಘಗಳು ಮತ್ತು ಕಂಪೆನಿಗಳು ವಾಯು ಶಕ್ತಿ ಕ್ಷೇತ್ರದಲ್ಲಿ ಚಟುವಟಿಕೆಯಿಂದಿರುವುದು ಮತ್ತು ಅದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿತ್ತು. ಮೊದಲ ವಾಯು ದಿನಾಚರಣೆ ಯುರೋಪಿನ 18 ದೇಶಗಳನ್ನು ತಲುಪಿತು. ಇದ ರಲ್ಲಿ 35,000ಕ್ಕೂ ಅಧಿಕ ಜನರು ಭಾಗವಹಿಸಿ ದ್ದರು. 2008ರಲ್ಲಿ ವಾಯು ದಿನಾಚರಣೆಯು ಯುರೋಪಿನ 20 ದೇಶಗಳನ್ನು ಮತ್ತು 1 ಲಕ್ಷಕ್ಕೂ ಅಧಿಕ ಜನರನ್ನು ತಲುಪಿತು.
ಯುರೋಪಿಯನ್ ವಿಂಡ್ ಎನರ್ಜಿ ಕೌನ್ಸಿಲ್ 2009ರಲ್ಲಿ ಗ್ಲೋಬಲ್ ವಿಂಡ್ ಎನರ್ಜಿ ಕೌನ್ಸಿಲ್‌ನೊಂದಿಗೆ ಸೇರಿಕೊಂಡು ತನ್ನ ವ್ಯಾಪ್ತಿಯನ್ನು ವಿಶ್ವಮಟ್ಟಕ್ಕೆ ವಿಸ್ತರಿಸಿತು.2009ರ ಅನಂತರ ವಿಶ್ವ ಮಟ್ಟದಲ್ಲಿ ವಾಯು ದಿನಾಚರಣೆ ಆರಂಭವಾಗಿದ್ದು, ಇದೇ ವರ್ಷದಲ್ಲಿ ಪೋರ್ಚ್‌ಗಲ್‌ನಲ್ಲಿ ವಿಂಡ್ ಪೆರೇಡ್ ಎಂಬ ಕಾರ್ಯಕ್ರಮ ಮಾಡುವುದರ ಮೂಲಕ ವಿಶ್ವ ವಾಯು ದಿನವನ್ನು ಆಚರಣೆ ಮಾಡಿದರು. ಮಕ್ಕಳನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಲು ನಕಲಿ ವಾಯು ಟರ್ಬೈನ್ ಚಿತ್ರ ಸ್ಪರ್ಧೆ ಏರ್ಪಡಿಸಲಾ ಗಿ ತ್ತು. 2012ರಲ್ಲಿ ವಿಶೇಷವಾಗಿ ವಿಶ್ವಮಟ್ಟದಲ್ಲಿ ವಿಂಡ್ ಇನ್ ಮೈಂಡ್ ಎಂಬ ಛಾಯಾಚಿತ್ರಗ್ರಹಣ ಸ್ಪರ್ಧೆಯನ್ನು ಏರ್ಪಡಿಸಿದ್ದರು. 40ಕ್ಕೂ ಹೆಚ್ಚು ದೇಶಗಳು ಇದರಲ್ಲಿ ಭಾಗವಹಿಸಿ 2,300 ಫೋಟೋಗಳು ಸ್ಪರ್ಧೆಯಲ್ಲಿ ಸಿಕ್ಕಿವೆ. ಈ ವರ್ಷ 300ಕ್ಕೂ ಅಧಿಕ ಕಾರ್ಯಕ್ರಮಗಳ ಮೂಲಕ 35 ದೇಶಕ್ಕೆ ವಿಸ್ತರಿಸಿದ್ದು 1 ಮಿಲಿಯನ್ ಜನರನ್ನು ಇದರಲ್ಲಿ ಭಾಗವಹಿಸುವಂತೆ ಮಾಡಲಾ ಗಿದೆ. 2018ರ ಸಮೀಕ್ಷೆ ಪ್ರಕಾರ ಚೀನವು ವಾಯು ಶಕ್ತಿಯ ಉತ್ಪಾದನೆಯಲ್ಲಿ ಮೊದಲನೇ ಸ್ಥಾನ ದ ಲ್ಲಿದಲ್ಲಿದ್ದ ರೆ ಭಾರತ ನಾಲ್ಕನೇ ಸ್ಥಾನದಲ್ಲಿದೆ. 2019ರ ಗುರಿ
-ವಿಶ್ವ ವಾಯು ದಿನದ ಅಭಿಯಾನಕ್ಕೆ ಸೇರುವುದು
-ಗಾಳಿ ಶಕ್ತಿಯ ಕುರಿತು ತಿಳಿದುಕೊಳ್ಳುವುದು.
-ವಿವಿಧ ನಗರಗಳಲ್ಲಿ ಪ್ರದರ್ಶನ ಟರ್ಬೈನ್ ಏರ್ಪಡಿಸಿ ಅವುಗಳಿಗೆ ಹೆಚ್ಚು ಪ್ರಚಾರ ನೀಡುವುದು.
– ಕಾರ್ಯಾಗಾರಗಳನ್ನು ಆಯೋಜಿಸಿ ಅವುಗಳಲ್ಲಿ ಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸು ವಂತೆ ಮಾಡು ವುದು
-ವಾಯು ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸುವುದು.
-ವಿಂಡ್ ಪೆರೇಡ್‌ಗಳನ್ನು ಸ್ಥಾಪಿಸುವುದು. -ರಂಜಿನಿ ಮಿತ್ತಡ್ಕ